ಪ್ರಾಣಿಗಳು ಆಗಾಗ ಮೌನವಾಗಿರುತ್ತವೆ ಎಂದು ಪ್ರತಾಪ ಸಿಂಹ ಕಾಲೆಳೆದ ರೈ

Posted By: ಬಾಗಲಕೋಟೆ ಪ್ರತಿನಿಧಿ
Subscribe to Oneindia Kannada
   ಪ್ರತಾಪ್ ಸಿಂಹಾರನ್ನ ಪ್ರಾಣಿಗೆ ಹೋಲಿಸಿದ್ರಾ ನಟ ಪ್ರಕಾಶ್ ರಾಜ್ ( ರೈ ) | Oneindia Kannada

   ಬಾಗಲಕೋಟೆ, ಏಪ್ರಿಲ್ 11: "ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ನಮ್ಮನ್ನು ಅಲ್ಪಸಂಖ್ಯಾತರನ್ನಾಗಿ ನೋಡಲಾಗುತ್ತಿದೆ. ಆದರೆ ಪ್ರಜೆಗಳು ಬಹುಸಂಖ್ಯಾತರು" ಎಂದು ಚಿತ್ರನಟ ಪ್ರಕಾಶ ರೈ ಬಾಗಲಕೋಟೆಯಲ್ಲಿ ಹೇಳಿಕೆ ನೀಡಿದರು.

   ಕೇಂದ್ರ ಸರಕಾರ ಪತ್ರಕರ್ತರ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಕೋಮು ರಾಜಕೀಯವನ್ನು ತಡೆಯಬೇಕಾಗಿದೆ. ಬಿಜೆಪಿ ಹಾಗೂ ಆರೆಸ್ಸೆಸ್ ಬೇರು ಸಹಿತ ಹೋಗುವವರೆಗೂ ಹೋರಾಟ ಮಾಡುತ್ತೇನೆ. ಒಂದು ಕೋಮನ್ನೇ ಕಿತ್ತು ಹಾಕಬೇಕು ಎನ್ನುವುದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.

   ಪೋಸ್ಟ್ ಕಾರ್ಡ್ ಕನ್ನಡ ವೆಬ್ ಸೈಟ್ ವಿರುದ್ಧ ಪ್ರಕಾಶ್ ರೈ ದೂರು

   ಆರೆಸ್ಸೆಸ್ ಹಾಗೂ ಬಿಜೆಪಿ ಕೈಯಲ್ಲಿ ದೇಶ ಕೊಡಬಾರದು. ಗೋಹತ್ಯೆ ನಿಷೇಧದಂಥ ವಿಷಯ ಇಟ್ಟುಕೊಂಡು ಮನುಷ್ಯರನ್ನು ಕೊಲ್ಲುವುದು ಎಷ್ಟು ಸರಿ? ಸಂವಿಧಾನ ಬದಲಾವಣೆ ಪ್ರಶ್ನಿಸಿದ್ದಕ್ಕೆ ನನಗೆ ಹಿಂದೂ ವಿರೋಧಿ ಪಟ್ಟ ನೀಡಲಾಗಿದೆ. ಗೌರಿ ಹಂತಕರ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.

   Prakash Rai

   ನಾನು ಇನ್ನು ಹತ್ತು ವರ್ಷಗಳ ಕಾಲ ರಾಜಕೀಯಕ್ಕೆ ಬರುವುದಿಲ್ಲ. ರಾಜಕೀಯ ಪ್ರಜ್ಞೆ, ಜಾಗೃತಿ‌ ಮೂಡಿಸುವ ಕಾರ್ಯ ಮಾಡುತ್ತೇನೆ. ವೀರಶೈವ ಲಿಂಗಾಯತ ಪ್ರತ್ಯೇಕತೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರತ್ಯೇಕ ಧರ್ಮ ಕೇಳುವುದು ಅವರ ವಿಚಾರ. ಅದನ್ನು ತಡೆಯುವುದಕ್ಕೆ ಯಾರಿಗೂ ಅಧಿಕಾರವಿಲ್ಲ. ಸರಕಾರ ಧರ್ಮ ಒಡೆಯುವ ಕಾರ್ಯ ಮಾಡುತ್ತಿದೆ ಅಂತ ನನಗನ್ನಿಸುತ್ತಿಲ್ಲ ಎಂದು ತಿಳಿಸಿದರು.

   ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಹರಿಹಾಯ್ದ ಪ್ರಕಾಶ್ ರೈ, ನಿಮಗೆ ಮದುವೆ, ಮುಂಜಿ ಆಗಿಲ್ಲ. ಹೆಣ್ಣುಮಕ್ಕಳ ಕಷ್ಟ ನಿಮಗೆ ಗೊತ್ತಿಲ್ಲ. ಅತ್ಯಾಚಾರದ ಬಗ್ಗೆ ನಿಮಗೇನು ಗೊತ್ತು? ಬಿಜೆಪಿ ಒಂದು ದೊಡ್ಡ ರಾಕ್ಷಸ. ದೊಡ್ಡ ರೋಗ. ಮುಂದಿನ ವರ್ಷರಲ್ಲಿ ಈ ದೊಡ್ಡ ರಾಕ್ಷಸ, ದೊಡ್ಡರೋಗ ಇರುವುದಿಲ್ಲ ಎಂದರು.

   ಕಾವೇರಿ ಸಮಸ್ಯೆ ವಿಚಾರ ಬರೀ ನೀರು ಹಂಚಿಕೆ ಬಗ್ಗೆ ಮಾತನಾಡುತ್ತಾರೆ. ಕಾವೇರಿ ನದಿ ತೀರದಲ್ಲಿ‌ ಮರಳುಗಾರಿಕೆ ಬಗ್ಗೆ ಮಾತನಾಡುವುದಿಲ್ಲ. ಇದರಲ್ಲಿ ರಾಜಕೀಯ ಇರುವವರೆಗೂ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದರು. ಸಂಸದ ಪ್ರತಾಪ್ ಸಿಂಹ ಮೌನದ ಬಗ್ಗೆ ವ್ಯಂಗ್ಯವಾಡಿದ ಪ್ರಕಾಶ್ ರೈ, ಪ್ರಾಣಿಗಳು ಆಗಾಗ ಮೌನವಾಗಿರುತ್ತವೆ ಎಂದು ಹೇಳಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Even animals also keep silence sometime, actor Prakash Rai said about Mysuru-Kodagu MP Pratap Simha in Bagalkot on Wednesday. When question about Paratap Simha Silence. Prakash Rai again criticises UP CM Yogi Aditynath.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ