Hubballi: ಎಲ್ಪಿನ್ ಟ್ರೋಫಿ 20-20 ಕ್ರಿಕೆಟ್: 5 ವಿಕೇಟ್‌ನಿಂದ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ಗೆ ಜಯ

ಹುಬ್ಬಳ್ಳಿ, ಏಪ್ರಿಲ್ 15: ನಗರದ ಜಿಮ್ಕಾನ ಮೈದಾನದಲ್ಲಿ ಭಾನುವಾರ ನಡೆದ ಎಲ್ಪಿನ್ ಟ್ರೋಫಿ 20-20 ಕ್ರಿಕೆಟ್ ಫೈನಲ್ ಪಂದ್ಯಗಳು ಜರುಗಿದವು. ಈ ವೇಳೆ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ತಂಡವು ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡದ ಎದುರು 5 ವಿಕೆಟ್‌ಗಳಿಂದ ವಿಜಯ ಸಾಧಿಸಿತು.

ಒಟ್ಟು 208 ರನ್‌ಗಳ ಗೆಲುವಿನ ಗುರಿ ಮುಟ್ಟಬೇಕಿತ್ತು. ಈ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಚೇಸಿಂಗ್ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ಪಂದ್ಯದ ಗೆಲುವನ್ನು ತಂಡ ತನ್ನದಾಗಿಸಿಕೊಂಡಿತು.

Hubballi Cricket Elpin Trophy 20-20 Cricket Hubballi Sports Club Team Got Champion More Details

ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಗೆಲುವಿಗೆ ಕೊನೆಯ ಎಸೆತದಲ್ಲಿ 04 ರನ್‌ಗಳ ಅವಶ್ಯಕತೆ ಇತ್ತು. ಆಗ ಸಿಕ್ಸ‌ರ್ ಬಾರಿಸಿದ ಅಜೀಮ್ ತಂಡಕ್ಕೆ ಗೆಲುವು ದಾರಿ ಸುಗಮವಾಯಿತು. ಇದಕ್ಕೂ ಮುನ್ನ 19ನೇ ಓವರ್‌ನಲ್ಲಿ ಅಜೀಮ್ ನಾಲ್ಕು ಸಿಕ್ಸರ್ ಬಾರಿಸಿ ಮಿಂಚಿದರು. ಅವರ ಇನಿಂಗ್ಸ್‌ನಲ್ಲಿ 4 ಬೌಂಡರಿ, 10 ಸಿಕ್ಸರ್ ಬಾರಿಸಿದರು.

ಅರ್ಧಶತಕ ಗಳಿಸಿದ ಸುಧನ್ವ ಕುಲಕರ್ಣಿ

ಆರಂಭಿಕ ಬ್ಯಾಟ್ಸ್‌ಮನ್ ಸುಧನ್ವ ಕುಲಕರ್ಣಿ ಅರ್ಧಶತಕ ಗಳಿಸಿದ್ದು, ನಂತರ ಓಂಕಾರ ವರ್ಣೇಕ‌ರ್ ಬೌಲಿಂಗ್‌ನಲ್ಲಿ ಸ್ವಪ್ಟಿಲ್ ಯಳವೆಗೆ ಕ್ಯಾಚ್ ಕೊಟ್ಟು ಬ್ಯಾಟ್ ಬಿಟ್ಟು ಹೊರ ನಡೆದರು.

ಈ ವಿಜಯಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡವು ಆರಂಭಿಕ ಆಟಗಾರ ಕವೀಶ ಮುಕ್ಕಣ್ಣವರ ಅವರ ವಿಕೆಟ್ ಅನ್ನು ಬೇಗ ಕಳೆದುಕೊಂಡಿತು. ಈ ಹಂತದಲ್ಲಿ ತಂಡದ ನಾಯಕ ಸ್ಟಪ್ಟಿಲ್ ಯಳವೆ 40 (31ಎ, 3X4, 6X3) ರನ್ ಗಳಿಸಿ ಚೇತರಿಕೆ ನೀಡಿದರು.

ನಂತರ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಆಟವಾಡಿದ ಓಂಕಾರ ವರ್ಣೇಕರ ಅರ್ಧಶತಕ (ಅಜೇತ 51; 23ಎ, 4X2, 6X5) ಗಳಿಸಿ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾದರು.

ಸ್ಕೋರ್ ವಿವರಣೆ

ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡದವರು ಒಟ್ಟು 20 ಓವರ್‌ಗಳಲ್ಲಿ 6ಕ್ಕೆ 208 ಗಳಿಸಿದರು. ಇದರಲ್ಲಿ ಓಂಕಾರ ವರ್ಣೇಕರ್ 51, ಸ್ವಪ್ಟಿಲ್ ಯಳವೆ 40, ಪಾರ್ಥ ಪಾಟೀಲ್ 36, ವಿಜಯ್ 36; ಆಕಾಶ ಪತ್ತಾರ 44ಕ್ಕೆ 3, ರೋಹನ್ ಯರೆಶೀಮಿ 21 ರನ್ ಗಳಿಸಿದರು.

ನಂತರ ಬೆಳಗಾವಿ ತಂಡವನ್ನು ಬೆನ್ನಟ್ಟಿದ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ತಂಡದ ಸದಸ್ಯರು 20 ಓವರ್‌ಗಳಲ್ಲಿ 5 ವಿಕೇಟ್ ಜೊತೆಗೆ 211 ರನ್ ಗಳಿಸಿದ ಗೆದ್ದರು. ಇದರಲ್ಲಿ ಸದಸ್ಯರಾದ ಅಜೀಮ್ ಜಿ 90, ಸುಧನ್ವ ಕುಲಕರ್ಣಿ 59, ಆಕಾಶ ಪತ್ತಾರ 25 ರನ್, ಪಾಟೀಲ ರೋಹಿತ್ 52 ರನ್ ಗಳಿಸಿದರು.

ಟ್ರೋಪಿ, ಬಹುಮಾನದ ಮಾಹಿತಿ

ವಿಜೇತ ತಂಡ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ಗೆ ₹75 ಸಾವಿರ ಮತ್ತು ಟ್ರೋಫಿ ರನ್ನರ್ ಅಪ್ ಆದ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್‌ಗೆ ₹50 ಸಾವಿರ ಟ್ರೋಫಿ ಪ್ರದಾನ ಮಾಡಲಾಯಿತು. ಸೆಮಿಫೈನಲ್‌ನಲ್ಲಿ ತಲುಪಿದ್ದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಮತ್ತು ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿಗೆ ತಲಾ ₹20 ಸಾವಿರ ನೀಡಲಾಯಿತು.

ಇನ್ನೂ ಸುಧನ್ವ ಕುಲಕರ್ಣಿ ಉತ್ತಮ ಬ್ಯಾಟರ್ ಆಕಾಶ ಪತ್ತಾರ ಉತ್ತಮ ಬೌಲರ್ ಆರವ್ ಓಸ್ವಾಲ್ ಉತ್ತಮ ಫೀಲ್ಡರ್ ಸ್ವಪ್ಟಿಲ್ ಯಳವೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಶಾಲಿನಿ ಎಂಟರ್‌ಪ್ರೈಸಸ್‌ನ ದಿನೇಶ್ ಪೈ ಹ್ಯಾಂಗೊ ಐಸ್‌ಕ್ರೀಂನ ಬ್ರಯಾನ್ ಡಿಸೋಜಾ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ವೀರಣ್ಣ ಸವಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+