Get Updates
Get notified of breaking news, exclusive insights, and must-see stories!

Belagavi Lok Sabha: ಬೆಳಗಾವಿ ಕದನದಲ್ಲಿ ಒಬ್ಬಂಟಿಯಾದ ಜಗದೀಶ್ ಶೆಟ್ಟರ್: ವರದಿ, ವಿಶ್ಲೇಷಣೆ

ಬೆಂಗಳೂರು, ಏಪ್ರಿಲ್ 10: ಬೆಳಗಾವಿ ಲೋಕಸಭಾ ಚುನಾವಣೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಗದೀಶ್ ಶೆಟ್ಟರ್ ಚುನಾವಣಾ ಅಖಾಡದಲ್ಲಿ ಒಬ್ಬಂಟಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ವಿರೋಧದ ನಡುವೆ ಲೋಕಸಭೆಗೆ ಟಿಕೆಟ್ ಪಡೆದ ಅವರ ಬೆಂಬಲಕ್ಕೆ ನಿಲ್ಲದೇ ಸ್ಥಳೀಯ ನಾಯಕರು ಕಡೆಗಣಿಸಿದ್ದಾರೆ ಎನ್ನಲಾಗಿದೆ.

ಎರಡು ಲೋಕಸಭಾ ಚುನಾವಣೆ ಟಿಕೆಟ್ ಮಿಸ್ ಆದ ಬಳಿಕ ಬೆಳಗಾವಿ ಸ್ಥಳೀಯ ನಾಯಕರ ವಿರೋಧದ ಮಧ್ಯೆ ವರಿಷ್ಠರ ಜತೆ ನಿರಂತರ ಮಾತುಕತೆ, ಲಾಭಿ ಬಳಿಕ ಬೆಳಗಾವಿ ಟಿಕೆಟ್ ಪಡೆಯುವಲ್ಲಿ ಜಗದೀಶ್ ಶೆಟ್ಟರ್ ಯಶಸ್ವಿಯಾದರು. ಸದ್ಯ ಕ್ಷೇತ್ರ ತುಂಬೆಲ್ಲ ಓಡಾಡಿ ಪ್ರಚಾರ ನಡೆಸುತ್ತಿರುವ ಅವರ ಬೆಂಬಲಕ್ಕೆ ಸ್ಥಳೀಯ ನಾಯಕರೇ ಬರುತ್ತಿಲ್ಲ ಎನ್ನಲಾಗಿದೆ.

Belagavi Lok Sabha Jagdish Shettar Alone in Election Race Without Support of Local Leaders

ಸ್ಥಳೀಯ ನಾಯಕರು ಒಕ್ಕೋರಲಿನಿಂದ ಪ್ರಚಾರದಲ್ಲಿ ಪಾಲ್ಗೊಳ್ಳುವುದು, ಪರವಾಗಿ ನಿಲ್ಲುವುದು ಚುನಾವಣೆ ಅಭ್ಯರ್ಥಿಗೆ ಮತ್ತಷ್ಟು ಬಲ ಬರಲು, ಹುಮ್ಮಸ್ಸು, ಗೆಲುವಿನ ವಿಶ್ವಾಸ ತಂದುಕೊಡಲು ಕಾರಣವಾಗುತ್ತದೆ. ಆದರೆ ಇದಕ್ಕೆ ಬೆಳಗಾವಿ ವಿರುದ್ಧವಾಗಿದೆ ಎಂದರೆ ತಪ್ಪಾಗಲಾರದು.

ಜಾತಿ ಆಧಾರದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ನಿಂದಲೂ ಪ್ರಭಾವಿ ನಾಯಕರ ಪುತ್ರ ಕಣಕ್ಕಿಳಿದಿದ್ದಾರೆ. ಆದರೆ ಅವರ ಮುಂದೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಚಾರವು ಸ್ಥಳೀಯ ನಾಯಕರಿಲ್ಲ ಮಬ್ಬು ಕವಿದಿದೆ. ಹೀಗಾಗಿ ಹಠಕ್ಕೆ ಬಿದ್ದು ಟಿಕೆಟ್ ಪಡೆದ ಶೆಟ್ಟರ್ ಅವರು ರಣಕಣದಲ್ಲಿ ಏಕಾಂಗಿಯಾದರೆ? ಎಂಬ ಅನುಮಾನ ಮೂಡಿದೆ.

ಜೋರಿದೆ ಶೆಟ್ಟರ್ ಹೊರಗಿನವರೆಂಬ ಕೂಗು

ಜಗದೀಶ್ ಶೆಟ್ಟರ್ ಮೂಲತಃ ಬೆಳಗಾವಿಯವರಲ್ಲ. ಅವರು ಆ ಕ್ಷೇತ್ರವನ್ನು ಪ್ರತಿನಿಧಿಸಿಲ್ಲ. ಅವರು ಹುಬ್ಬಳ್ಳಿ-ಧಾರವಾಡ ಕೇಂದ್ರದ ಕ್ಷೇತ್ರದವರು. ಚುನಾವಣೆಗಾಗಿ ಬೆಳಗಾವಿ ನನ್ನ ಕರ್ಮಭೂಮಿ ಎನ್ನುತ್ತಿರುವ ಅವರಿಗೆ ಕಾಂಗ್ರೆಸ್‌ನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸರಿಯಾಗೇ ತಿರುಗೇಟು ಕೊಟ್ಟಿದ್ದರು. ಬೆಳಗಾವಿಗೆ ನಿಮ್ಮ ಕೊಡುಗೆ ಏನೆಂದು ಬಹಿರಂಗವಾಗಿ ಟೀಕಿಸಿದ್ದರು.

Belagavi Lok Sabha Jagdish Shettar Alone in Election Race Without Support of Local Leaders

ಸದರಿ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಮತ್ತು ಧಾರವಾಡ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಜಗದೀಶ್ ಶೆಟ್ಟರ್‌ಗೆ ಅದೃಷ್ಟ ಕೈಕೊಟ್ಟ ಪರಿಣಾಮ ಅವರು, ಕಾಡಿ-ಬೇಡಿ, ಅಸಾಮಾಧಾನ ವ್ಯಕ್ತಪಡಿಸಿ ಬೆಳಗಾವಿ ಟಿಕೆಟ್ ಪಡೆದರು. ಇದಕ್ಕೆ ಬಿಜೆಪಿ ಸ್ಥಳೀಯ ನಾಯಕರೇ ವಿರೋಧಿಸಿದರು. ಹೊರಗಿನವರಿಗೆ ಟಿಕೆಟ್ ನೀಡಲು ಅವರು ಒಪ್ಪಲಿಲ್ಲ.

ಸ್ಥಳೀಯರಿಗೆ ಬಿಜೆಪಿ ಟಿಕೆಟ್ ನೀಡಲು ಒತ್ತಡ

ಬೆಳಗಾವಿ ಸ್ಥಳೀಯ ಬಿಜೆಪಿ ಪ್ರಮುಖ ನಾಯಕರಾದ ಪ್ರಭಾಕರ್ ಕೋರೆ, ಈರಣ್ಣ ಕಡಾಡಿ ಇನ್ನಿತರ ಮುಖಂಡರು ಗೋ ಬ್ಯಾಕ್ ಅಭಿಮಾನ ಮಾಡಿದರು. ಸಭೆ ಮಾಡಿ ವರಿಷ್ಠ ಮೇಲೆ ಶೆಟ್ಟರ್ ಅವರಿಗೆ ಟಿಕೆಟ್ ನೀಡದಂತೆ ಒತ್ತಡ ತರಲು ಯತ್ನಿಸಿದರೂ. ಹೊರಗಿನವರಿಗೆ ಬದಲಾಗಿ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಲು ಅವರು ಮನವಿ ಮಾಡಿದರು.

ಆದರೆ ಬಿಜೆಪಿ ವರಿಷ್ಠರು ಶೆಟ್ಟರ್‌ಗೆ ಟಿಕೆಟ್ ಕೊಟ್ಟರು. ಇದು ಸಹ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಯಿತು. ವರಿಷ್ಠ ನಿರ್ಧಾರದಿಂದ ಮತ್ತೊಮ್ಮೆ ಸ್ಪರ್ಧೆಗೆ ಆಕಾಂಕ್ಷಿಯಾಗಿದ್ದ ಮಂಗಳಾ ಸುರೇಶ್ ಅಂಗಡಿ ಅವರಿಗೆ ಟಿಕೆಟ್ ಕೈ ತಪ್ಪಿತು. ಇದು ಅವರ ಬೆಂಬಲಿಗರ ಕಣ್ಣು ಕೆಂಪಾಗಲು ಕಾರಣವಾಗಿಯಿತು. ಈ ಎಲ್ಲ ಅಂಶಗಳಿಂದ ಶೆಟ್ಟರ್ ಒಂಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮುಳುವಾಯ್ತು ಪಕ್ಷಾಂತರ ನಿರ್ಧಾರ?

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಎಲ್ಲ ಸ್ಥಾನಮಾನ ಪಡೆದು ಸಹ ಜಗದೀಶ್ ಶೆಟ್ಟರ್ ಅವರು ಸ್ಪರ್ಧೆ ಬಯಸಿದ್ದರು. ಆದರೆ ಬಿಜೆಪಿ ಟಿಕೆಟ್ ಕೊಡದ್ದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿ ಅಧಿಕಾರಕ್ಕಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು. ಬಳಿಕ ಅಲ್ಲಿಂದಲೂ ವಿಧಾನಸಭೆ ಚುನಾವಣೆಯಲ್ಲಿ ಸೋತರು.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ವರಸೆ ಬದಲಿಸಿದ ಜಗದೀಶ್ ಶೆಟ್ಟರ್ ಅವರು, ಮರಳಿ ಬಿಜೆಪಿಗೆ ಬಂದು ಕಾಂಗ್ರೆಸ್‌ನ ದೂರಲಾರಂಭಿಸಿದರು. ಹಿರಿಯ ನಾಯಕರು ಈ ರೀತಿ ಪಕ್ಷಾಂತರ ನಿರ್ಧಾರ ಕಾರ್ಯಕರ್ತರಲ್ಲಿ ಅವಿಶ್ವಾಸ ಮೂಡಲು ಕಾರಣವಾಯಿತು ಎಂದು ವಿಶ್ಲೇಷಿಸಲಾಗಿದೆ.

ಶೆಟ್ಟರ್ ಅವರ ಪಕ್ಷಾಂತರ ನಿರ್ಧಾರ, ಕಾಂಗ್ರೆಸ್-ಬಿಜೆಪಿ ವಿರುದ್ಧ ತಾತ್ಕಾಲಿಕ ನಿಲುವುಗಳು, ಅಧಿಕಾರದ ಆಸೆ ಅವರಿಗೆ ಇಂದು ಕ್ಷೇತ್ರದಲ್ಲಿ ಬೆಂಬಲ ಸಿಗದಂತೆ ಮಾಡಿವೆ.

ಕಣದಲ್ಲಿ ಪ್ರಬಲ ಕಾಂಗ್ರೆಸ್ ಅಭ್ಯರ್ಥಿ

ಬೆಳಗಾವಿ ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿದ್ದಾರೆ. ಜಗದೀಶ್ ಶೆಟ್ಟರ್ ಲಿಂಗಾಯತ ನಾಯಕರಾದರೂ ಅವರ ಪ್ರಭಾವ ಕ್ಷೇತ್ರದಲ್ಲಿ ಇಲ್ಲ. ಬದಲಾಗಿ ಸ್ಥಳೀಯ ನಾಯಕರ ಪ್ರಭಾವ ಹೆಚ್ಚಿದೆ. ಈ ಭಾಗದಲ್ಲಿ ಜಾರಕಿಹೊಳಿ ಕುಟುಂಬ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರಭಾವ ಇದೆ.

ಸದ್ಯ ಕಾಂಗ್ರೆಸ್‌ನಿಂದ ಶೆಟ್ಟರ್ ವಿರುದ್ಧ ಹಾಲಿ ರಾಜ್ಯ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಕಣಕ್ಕಿಳಿಸಲಾಗಿದೆ. ಪುತ್ರನನ್ನು ಶತಾಯಗತಾಯ ಗೆಲ್ಲಿಸಲು ಸಚಿವೆ ಪಣತೊಟ್ಟಿದ್ದಾರೆ. ಇವರು ಜಾತಿ ವಿಚಾರದಲ್ಲಿ ಪಂಚಮಸಾಲಿ ಲಿಂಗಾಯಿತ ಸಮುದಾಯಕ್ಕೆ ಸೇರಿದವರು. ಈ ಮತಗಳು ಚುನಾವಣೆ ವೇಳೆ ಕದಲದಂತೆ ಅವರು ತಂತ್ರಗಾರಿಕೆ ಹೆಣೆದಿದ್ದಾರೆ.

ಒಂದು ಕಡೆ ಸ್ಥಳೀಯರ ಬೆಂಬಲ ಕೊರತೆ ಮತ್ತೊಂದು ಪ್ರಬಲ ಎದುರಾಳಿ ಇದ್ದಾರೆ. ಪ್ರಚಾರ ಕಾರ್ಯ ಆರಂಭಿಸಿರುವ ಶೆಟ್ಟರ್ ಅಖಾಡದಲ್ಲಿ ಸಿಂಗಲ್ ಆಗಿ ನಿಂತಿದ್ದಾರೆ. ರಮೇಶ್ ಜಾರಕಿಹೊಳಿ, ಮಂಗಳಾ ಅಂಗಡಿಯವರು ತಮಗೆ ಬೆಂಬಲ ಕೊಡುವುದಾಗಿ, ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆಯುವುದಾಗಿ ಹೇಳಿದ್ದ ಶೇಟ್ಟರ್ ಕದನದಲ್ಲಿ ಒಬ್ಬಂಟಿಯಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+