Heavy Rain: ಬೆಳಗಾವಿಯಲ್ಲಿ ಭಾರಿ ಮಳೆಗೆ ರಸ್ತೆ ಜಲಾವೃತ; ವಿಡಿಯೋ ನೋಡಿ

ಕರ್ನಾಟದ ಪಾಲಿಗೆ ಯುಗಾದಿ ಹೊಸ ಸಂಭ್ರಮ ತಂದಿದೆ. ಮಂಗಳವಾರ ಯುಗಾದಿ ಹಬ್ಬದ ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದರೆ, ಬುಧವಾರ ಕೂಡ ರಾಜ್ಯದ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ವ್ಯಾಪಕ ಮಳೆಯಾಗಿದೆ.

ಬುಧವಾರ ಬೆಳಗಾವಿಯಲ್ಲಿ ಭಾರಿ ಮಳೆಯಾಗಿದ್ದು ಬಿಸಿಲಿಂದ ಹೈರಾಣಾಗಿದ್ದ ಜನರಿಗೆ ನೆಮ್ಮದಿ ತಂದಿದೆ. ಬೆಳಗಾವಿ ನಗರ ಮಾತ್ರವಲ್ಲದೆ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ. ಗಾಳಿಯೊಂದಿಗೆ ಭಾರಿ ಮಳೆಯಾಗಿದ್ದು ಜನರ ಹಬ್ಬದ ಸಂಭ್ರಮ ಹೆಚ್ಚಾಗಿದೆ.

Heavy Rain Lashes Belagavi and Shivamogga Districts on April 10th

ಸಂಜೆ ವೇಳೆಗೆ ಬೆಳಗಾವಿಯ ಕಾಕತಿಯಲ್ಲಿ 46 ಮಿ.ಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ತನ್ನ ವರದಿಯಲ್ಲಿ ಹೇಳಿದೆ. ಹುಕ್ಕೇರಿಯ ನೆರ್ಲಿಯಲ್ಲಿ 57 ಮಿ.ಮೀ ಮಳೆಯಾಗಿದೆ, ಹೊನಗದಲ್ಲಿ 40 ಮಿ.ಮೀ. ಮಳೆಯಾಗಿದ್ದರೆ, ಕೆಡ್ನೂರಿನಲ್ಲಿ 38 ಮಿ.ಮೀ ಮತ್ತು ಕಡೋಲಿಯಲ್ಲಿ 30 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.

ಬೆಳಗಾವಿ ನಗರದಲ್ಲಿ ರಸ್ತೆ ಜಲಾವೃತ

ಬುಧವಾರ ಸಂಜೆ ಸುರಿದ ಮಳೆಗೆ ರಾಜ್ಯದ ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತವಾಗಿದೆ. ನಗರದ ರಾಣಿ ಚನ್ನಮ್ಮ ಝೂ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತ ಕಾರಣ ವಾಹನಗಳ ಸಂಚಾರ ನಿಧಾನವಾಗಿತ್ತು.

ಹಾವೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ಕೂಡ ಉತ್ತಮ ಮಳೆಯಾಗಿದೆ. ಯುಗಾದಿ ದಿನ ಕೂಡ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿತ್ತು, ಸತತ ಎರಡನೇ ದಿನವೂ ಮಳೆಯಾಗಿರುವುದು ಜನರ ಸಂತಸ ಹೆಚ್ಚಿಸಿದೆ. ಗೋಕಾಕ, ಶಿಗ್ಗಾವಿ ಮತ್ತು ಶಿಕಾರಿಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಡ ಮಳೆಯಾಗಿದೆ.

ಏಪ್ರಿಲ್ 15ರವರೆಗೆ ಮಳೆ ನಿರೀಕ್ಷೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 15ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಲಾಗಿದೆ. ಭಾರಿ ಬಿಸಿಲಿನಿಂದ ಬಳಲಿರುವ ರಾಜ್ಯದ ಜನ ಇನ್ನು ಕೆಲವು ದಿನಗಳಲ್ಲೇ ಮಳೆಯಿಂದ ತಂಪಾಗುವುದು ಬಹುತೇಕ ಖಚಿತವಾಗಿದೆ.

ಕಳೆದ ಕೆಲವು ದಿನಗಳಿಂದ ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಬೀದರ್, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ಇನ್ನೂ ವರ್ಷದ ಮೊದಲ ಮಳೆಗಾಗಿ ಕಾಯುತ್ತಿವೆ.

ಏಪ್ರಿಲ್ 13ರ ಬಳಿಕ ಬೆಂಗಳೂರು ನಗರದಲ್ಲಿ ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+