ಜಾರ್ಜ್ ರಾಜಿನಾಮೆ ಪ್ರಶ್ನೆಗೆ ಸಿದ್ದರಾಮಯ್ಯ ಖಡಕ್ ಉತ್ತರ

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 13 : ಚಳಿಗಾಲದ ಅಧಿವೇಶನಕ್ಕಾಗಿ ನವೆಂಬರ್ 13 ರ ಸೋಮವಾರ ಬೆಳಗಾವಿಗೆ ಬಂದ ಸಿ.ಎಂಸಿದ್ದರಾಮಯ್ಯ ತಮಗೆ ಎದುರಾದ ಮಾಧ್ಯಮದವರು ಕೇಳಿದ 'ಬಿ.ಜೆ.ಪಿ ಅವರು ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದ್ರೆ ಏನ್ ಮಾಡ್ತೀರಿ' ಎಂಬ ಪ್ರಶ್ನೆಗೆ ಖಡಕ್ಕಾಗಿಉತ್ತರಿಸಿದ್ದಾರೆ.

ಚಳಿಗಾಲದ ಅಧಿವೇಶನ : ಯಾವ ಪಕ್ಷದ ಪಟ್ಟು ಯಾವುದರ ಮೇಲೆ

ಬಿ.ಜೆ.ಪಿಯ ಸುಮಾರು 25 ಲೋಕಸಭಾ ಸದಸ್ಯರ ಹೆಸರಿನಲ್ಲಿ ಎಫ್.ಐ.ಆರ್ ದಾಖಲಾಗಿದೆ ಅವೆರೆಲ್ಲಾ ರಾಜಿನಾಮೆ ನೀಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ತಾವು ವಿರೋಧ ಪಕ್ಷಗಳ ಎಲ್ಲ ಪಟ್ಟುಗಳಿಗೆ ಪ್ರತಿಪಟ್ಟು ಕಲಿತು ಬಂದಿರುವುದನ್ನು ಸೂಚ್ಯಗೊಳಿಸಿದ್ದಾರೆ.

Chief minister backs K.J.George

ಮುಂದೆ ಮಾತನಾಡಿದ ಮುಖ್ಯಮಂತ್ರಿಗಳು ಈ ಬಿ.ಜೆ.ಪಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಜಾರ್ಜ್ ವಿಷಯವನ್ನು ಎತ್ತುತ್ತಿದ್ದಾರೆ ಅವರಿಗೆ ಸರ್ಕಾರದ ಸಾಧನೆಯ ಬಗ್ಗೆ ಅಸೂಯೆ ಉಂಟಾಗಿರುವ ಕಾರಣ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ಯಡಿಯೂರಪ್ಪ ದಾಖಲೆ ಬಿಡುಗಡೆ ಮಾಡಲಿ : ಸಿದ್ದರಾಮಯ್ಯ

ಚಳಿಗಾಲದ ಅಧಿವೇಶನದಲ್ಲಿ ಬಿ.ಜೆ.ಪಿ ಸದಸ್ಯರು ಮುಖ್ಯವಾಗಿ ಡಿ.ವೈ.ಎಸ್.ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕಣದಲ್ಲಿ ಸಿ.ಬಿ.ಐ ತನಿಖಾ ದಳ ಕೆ.ಜೆ.ಜಾರ್ಜ್ ಅವರ ಮೇಲೆ ಎಪ್.ಐ.ಆರ್ ದಾಖಲಿಸಿರುವುದನ್ನು ಮುನ್ನೆಲೆಗೆ ತಂದು ಜಾರ್ಜ್ ಅವರ ರಾಜಿನಾಮೆಗೆ ಪಟ್ಟುಹಿಡಿಯಲಿದ್ದಾರೆ.

ಸಿದ್ದರಾಮಯ್ಯ ಅವರ ಈ ವಾದ ಬಿ.ಜೆ.ಪಿ ಅವರನ್ನು ಸುಮ್ಮನಾಗಿಸುತ್ತದೆಯೊ ಅಥವಾ ಜಾರ್ಜ್ ತಲೆದಂಡ ಪಡೆಯುವಲ್ಲಿ ಬಿ.ಜೆ.ಪಿ ಸಫಲವಾಗುತ್ತದೆಯೊ ಕಾದು ನೋಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddraramaiahh backs K.J.George and said 'karnataka B.J.P members should ask resignation from their party members who has F.I.R's in their names.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ