Get Updates
Get notified of breaking news, exclusive insights, and must-see stories!

‘ದೇಶ ಸುರಕ್ಷಿತವಾಗಿರಲು ನರೇಂದ್ರ ಮೋದಿ ಅವರೇ ಪ್ರಧಾನಿ ಆಗಬೇಕು!’

ಹೊಸಕೋಟೆ: ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಬರ ಗ್ಯಾರಂಟಿಯನ್ನ, ಭಯೋತ್ಪಾದನೆ ಗ್ಯಾರಂಟಿ, ರೈತರ ಆತ್ಮಹತ್ಯೆ ಗ್ಯಾರಂಟಿಗಳನ್ನ ನೀಡಿದೆ. ಹೀಗಾಗಿ ಇಡೀ ರಾಜ್ಯ & ದೇಶ ಸುರಕ್ಷಿತವಾಗಿ ಇರಲು ನರೇಂದ್ರ ಮೋದಿ ಅವರನ್ನ ಮತ್ತೆ ಪ್ರಧಾನಿಯಾಗಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಕೆ. ಸುಧಾಕರ್, ಕಾಂಗ್ರೆಸ್ ನಾಯಕರು ಚುನಾವಣಾ ಗಿಮಿಕ್ ಮಾಡುವಲ್ಲಿ ನಿಸ್ಸೀಮರು. ಸೋಲು ಸ್ಪಷ್ಟವಾಗಿ ಕಾಣುತ್ತಿರುವ ಹಿನ್ನೆಲೆ, ಅಪಪ್ರಚಾರ ಮಾಡುತ್ತಿದ್ದಾರೆ. ಹೇಳಲು ಯಾವುದೇ ಸಾಧನೆ ಇಲ್ಲದೆ ಇದ್ದಾಗ ಚಾರಿತ್ರ್ಯ ವಧೆ, ತೇಜೋವಧೆ ಮಾಡುತ್ತಿದ್ದಾರೆ. ಮತದಾರ ಬಂಧುಗಳು ಇವ್ಯಾವುದಕ್ಕೂ ಕಿವಿಗೊಡಬೇಡಿ ಎಂದು ಡಾ. ಕೆ. ಸುಧಾಕರ್ ಅವರು ಇದೇ ವೇಳೆ ಮನವಿ ಮಾಡಿದರು.

Lok Sabha Election 2024 Dr K Sudhakar Said That PM Modi Is Should Be In Power For The Nation

ಹುಬ್ಬಳ್ಳಿ ನೇಹಾ ಘಟನೆ ಪ್ರಸ್ತಾಪ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಬರ ಗ್ಯಾರಂಟಿ, ರೈತರ ಆತ್ಮಹತ್ಯೆ ಗ್ಯಾರಂಟಿ, ಭಯೋತ್ಪಾದನೆ ಗ್ಯಾರಂಟಿ, ಖಜಾನೆ ಖಾಲಿ ಗ್ಯಾರಂಟಿ, ಕೋಮುವಾದ ಗ್ಯಾರಂಟಿಗಳೇ ಸಿಗುತ್ತಿದೆ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು ಡಾ. ಕೆ. ಸುಧಾಕರ್. ಹಾಗೇ, ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಗೆ ಲವ್ ಜಿಹಾದ್ ಕಾರಣ ಎಂದು ಅವರ ತಂದೆಯೇ ಹೇಳಿದ್ದಾರೆ. ಆದರೆ ಕಾಂಗ್ರೆಸ್ ನಾಯಕರಿಗೆ ಮಾತ್ರ, ತುಷ್ಟೀಕರಣ ರಾಜಕಾರಣದಿಂದ ಮತ ಪಡೆಯುವುದು ಮಾತ್ರ ಮುಖ್ಯ. ಸಮ ಸಮಾಜ ನಿರ್ಮಾಣ ಅವರಿಗೆ ಮುಖ್ಯವಲ್ಲ. ಸಿಬಿಐಗೆ ಪ್ರಕರಣ ವಹಿಸಿ ಎಂದರೂ ಸಿಐಡಿಗೆ ವಹಿಸಿದ್ದು, ಇದರಿಂದ ನ್ಯಾಯ ಸಿಗುವುದೇ ಇಲ್ಲ ಎಂದು ಇದೇ ವೇಳೆ ಡಾ. ಕೆ. ಸುಧಾಕರ್ ಅವರು ಆರೋಪ ಮಾಡಿದರು.

ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿದೆ

ಮೋದಿ ಸರ್ಕಾರದಿಂದ ದೇಶದಲ್ಲಿ ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಕಾಂಗ್ರೆಸ್ ಸರ್ಕಾರದಿಂದ ಭಯೋತ್ಪಾದನೆ ಹೆಚ್ಚಿದೆ ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಲಾಗಿದೆ ನಕ್ಸಲ್ ಹಾವಳಿ ಶುರುವಾಗಿದೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕಕ್ಕೆ 7 ಲಕ್ಷ ಕೋಟಿ ರೂಪಾಯಿಗೂ ಅಧಿಕ ಅನುದಾನ ನೀಡಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಕಾಂಗ್ರೆಸ್ ತೆರಿಗೆ ಅನ್ಯಾಯ ಎಂಬ ನಾಟಕ ಮಾಡುತ್ತಿದೆ ಎಂದು ಡಾ.ಕೆ.ಸುಧಾಕರ್ ದೂರಿದ್ದಾರೆ.

ಖಾಲಿ ಚೊಂಬು ಎಂದು ಹೇಳುವ ಕಾಂಗ್ರೆಸ್ ನ ಸರ್ಕಾರ ಗ್ಯಾರಂಟಿಗಳಿಂದಾಗಿ ಅನುದಾನವಿಲ್ಲದೆ ಖಾಲಿ ಚೊಂಬನ್ನೇ ಜನರಿಗೆ ನೀಡಿದೆ. ಒಂದೇ ಒಂದು ಅಭಿವೃದ್ಧಿ ಕೆಲಸ ರಾಜ್ಯದಲ್ಲಿ ನಡೆದಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅನೇಕ ಪ್ರದೇಶ ಹಿಂದುಳಿದಿದ್ದು, ಇಲ್ಲಿನ ಅಭಿವೃದ್ಧಿಗೂ ಏನೂ ಮಾಡಿಲ್ಲ. ಆದ್ರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ 10 ವರ್ಷಗಳಲ್ಲಿ 7 ಲಕ್ಷ ಕೋಟಿ ರೂ. ಅನುದಾನ ನೀಡಿದೆ. ಈ ಮೂಲಕ ಕಾಂಗ್ರೆಸ್ ಜನರಿಗೆ ನೀಡಿದ್ದ ಚೊಂಬನ್ನ ಅಕ್ಷಯ ಪಾತ್ರೆಯಾಗಿ ಪರಿವರ್ತನೆ ಮಾಡಿದೆ ಎಂದು, ಡಾ. ಕೆ. ಸುಧಾಕರ್ ಅವರು ಈ ವೇಳೆ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ವೋಟ್ ಮಾಡುವಂತೆ ಮನವಿ

ಮತದಾರರು ಮತದಾನ ಮಾಡುವುದನ್ನು ಕರ್ತವ್ಯ ಎಂದು ಪರಿಗಣಿಸಬೇಕು‌. ನಗರಗಳ ಜನರು ಸುಶಿಕ್ಷಿತರಾಗಿದ್ದು ರಜೆಯಲ್ಲಿ ಎಲ್ಲಿಗೂ ಪ್ರವಾಸ ಹೋಗದೆ ಕಡ್ಡಾಯವಾಗಿ ವೋಟ್ ಮಾಡಬೇಕು ಎಂದು ಇದೇ ವೇಳೆ ಮನವಿ ಮಾಡಿದರು. ದೇಶದ ಸುರಕ್ಷತೆಗೆ, ವಿಕಸಿತ ಭಾರತಕ್ಕಾಗಿ, ನರೇಂದ್ರ ಮೋದಿ ಅವರನ್ನು ಗೆಲ್ಲಿಸಬೇಕು ಎಂದು ಡಾ.ಕೆ.ಸುಧಾಕರ್ ಅವರು ಮನವಿ ಮಾಡಿದರು. ಈ ಸಮಯದಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಸೇರಿದಂತೆ ಹಲವು ಮುಖಂಡರುಗಳು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+