• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದ ಭಾರಿ ಮಳೆಗೆ ಮೈದುಂಬಿ ಹರಿದ ಕೃಷ್ಣಾ ನದಿ

|

ಬೆಳಗಾವಿ, ಜುಲೈ 3: ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೃಷ್ಣಾ ನದಿ ತುಂಬಿ ಹರಿದಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾದ ಕಾರಣ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಗೆ ನೀರು ಹರಿದುಬಂದಿದೆ. ಮಹಾರಾಷ್ಟ್ರದಲ್ಲಿರುವ ರಾಜಪುರ್ ಜಲಾಶಯದ ಮೂಲಕ ನೀರು ಹರಿದುಬರುತ್ತಿದೆ. ಅಲ್ಲಿಂದ ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿದೆ.

ಉಕ್ಕಿ ಹರಿದ ತಿವಾರೆ ಜಲಾಶಯ, ಆರು ಸಾವು, 24 ಮಂದಿ ನಾಪತ್ತೆ

ಕರ್ನಾಟಕದಲ್ಲಿ 20 ಸಾವಿರದಿಂದ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಮುಂದಿನ ಐದಾರು ದಿನಗಳು ಇದೇ ರೀತಿ ಮುಂದುವರೆಯಲಿದೆ.ಬೆಳಗಾವಿ, ಬಾಗಲಕೋಟೆಯಲ್ಲಿ ಪ್ರವಾಹ ರೀತಿಯ ಪರಿಸ್ಥಿತಿ ನಿರ್ಮಾಣವಾಗುವ ಲಕ್ಷಣಗಳಿವೆ. ರಾಜಪುರ ಜಲಾಶಯದಿಂದ ನೀರು ಚಿಕ್ಕೋಡಿ, ರಾಯ್‌ಭಾಗ್, ಅಥಣಿ ತಾಲೂಕುಗಳ ಮೂಲಕ ಬಾಗಲಕೋಟೆಗೆ ಹರಿದುಬರುತ್ತದೆ.

ಒಂದೆಡೆ ನದಿ ತುಂಬಿರುವ ಸಂತೋಷವಾದರೆ ಇನ್ನೊಂದೆಡೆ ಆಗುತ್ತಿರುವ ಅನಾಹುತಗಳು ಕೂಡ ಕಣ್ಣಮುಂದಿದೆ. ಕಳೆದ ಕೆಲವು ದಿನಗಳಿಂದ ವರುಣದೇವ ತನ್ನ ರೌದ್ರಾವತಾರವನ್ನು ತೋರುತ್ತಿದ್ದಾನೆ.

ಆದ್ದರಿಂದ ನದಿ ತೀರದ ಗ್ರಾಮಸ್ಥರ ಸಂಚಾರಕ್ಕೆ ದೋಣಿ ಪ್ರಯಾಣ ಶುರವಾಗಿದೆ. ಇಷ್ಟು ದಿನಗಳಿಂದ ಮುಂಗಾರು ಆಗಮನವಾಗದೆ, ಹಿಂಗಾರು ಮಳೆಯೂ ಕೂಡ ಆಗದೆ ಬರಿದಾಗಿದ್ದ ನದಿಗೆ ಈ ಮರುಜೀವ ಬಂದಂತಿದೆ.

ಆದ್ದರಿಂದ ಮುಂಬೈ ನಗರ ಜಲಾವೃತಗೊಂಡಿದ್ದು ಜನಜೀವನ ಅಸ್ಥವ್ಯಸ್ತಗೊಂಡಿದೆ. ಆದರೆ ಮಹಾರಾಷ್ಟ್ರದಲ್ಲಿ ಆಗುತ್ತಿರುವ ಮಳೆಗೆ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆ ನದಿ ತೀರದ ಗ್ರಾಮಗಳ ನಡುವೆ ಸಂಪರ್ಕಕ್ಕಾಗಿ ಜನರು ದೋಣಿಯಾನ ಮಾಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮಹಿಷವಾಡಗಿ ಹಾಗೂ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ಪಟ್ಟಣಕ್ಕೆ ಹೋಗಬೇಕೆಂದರೆ ದೋಣಿಯಲ್ಲೇ ಸಾಗಬೇಕು. ದೋಣಿಯಲ್ಲಿ ಬೈಕ್ ಇಟ್ಟುಕೊಂಡು ಜನರು ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗುತ್ತಿದ್ದಾರೆ.

ಇನ್ನು ಮಹಾರಾಷ್ಟ್ರದ ರತ್ನಗಿರಿಯಲ್ಲಿ ತಿವಾರಿ ಜಲಾಶಯ ತುಂಬಿ ಹರಿಯುತ್ತಿದ್ದು ಸುಮಾರು 12 ಮನೆಗಳಿಗೆ ಹಾನಿಯಾಗಿದೆ, ಇದುವರೆಗೆ 6 ಮಂದಿ ಮೃತಪಟ್ಟಿದ್ದು, ಕಾಣೆಯಾದವರ ಬಗ್ಗೆ ಶೋಧ ನಡೆಸಲಾಗುತ್ತಿದೆ. 7 ಹಳ್ಳಿಗಳಿಗೆ ಆಪತ್ತು ಕಾದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After heavy rain in Maharashtra Krishna river water inflow increases and floods warning issued, Water from Rajapur dam has crossed Chikkodi, Raibag, and Athani taluks before flowing into Bagalkot district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more