ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದರ ಕಾಟದಿಂದ ಊರನ್ನೇ ಬಿಟ್ಟು ಹೋಗುತ್ತಿದ್ದಾರೆ ಚಿಲಕನಹಳ್ಳಿ ಗ್ರಾಮಸ್ಥರು

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಫೆಬ್ರವರಿ 28: ಕುಡಿಯುವ ನೀರು, ರಸ್ತೆ ಸೌಲಭ್ಯ, ಶೌಚಾಲಯ... ಇಂಥ ಮೂಲ ಸೌಕರ್ಯಗಳ ಕುರಿತು ಸಾಮಾನ್ಯವಾಗಿ ಗ್ರಾಮಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸೌಲಭ್ಯಗಳಿಗಾಗೇ ಎಷ್ಟೋ ಗ್ರಾಮಗಳಲ್ಲಿ ಪ್ರತಿಭಟನೆಗಳೂ ನಡೆಯುತ್ತವೆ. ಆದರೆ ಈ ಗ್ರಾಮದಲ್ಲಿ ಈ ಎಲ್ಲಾ ಸೌಲಭ್ಯವೂ ಇವೆ. ಆದರೂ ಗ್ರಾಮಸ್ಥರು ನೆಮ್ಮದಿಯಿಂದ ಇರಲು ಆಗುತ್ತಿಲ್ಲ.

ಇದಕ್ಕೆಲ್ಲಾ ಕಾರಣ ನೊಣಗಳು. ಈ ಗ್ರಾಮದಲ್ಲಿ ನೊಣಗಳ ಕಾಟ ವಿಪರೀತವಾಗಿದ್ದು, ಇದರಿಂದ ಬೇಸತ್ತಿರುವ ಜನ ಗ್ರಾಮವನ್ನೇ ತೊರೆಯಲು ಮುಂದಾಗಿದ್ದಾರೆ. ಅಷ್ಟಕ್ಕೂ ಆ ಗ್ರಾಮ ಯಾವುದು, ಇಲ್ಲಿ ನೊಣಗಳ ಕಾಟಕ್ಕೆ ಕಾರಣ ಏನಿರಬಹುದು? ಇಲ್ಲಿದೆ ಅದರ ವಿವರ...

ಮದ್ಯದ ಅಂಗಡಿ ತೆರವುಗೊಳಿಸಲು ಹೀಗೆ ಮಾಡಿದ ರಮ್ಮನಹಳ್ಳಿ ಗ್ರಾಮಸ್ಥರುಮದ್ಯದ ಅಂಗಡಿ ತೆರವುಗೊಳಿಸಲು ಹೀಗೆ ಮಾಡಿದ ರಮ್ಮನಹಳ್ಳಿ ಗ್ರಾಮಸ್ಥರು

 ಹೊಸಪೇಟೆಯ ಚಿಲಕನಹಟ್ಟಿ ಗ್ರಾಮದಲ್ಲಿ ನೊಣದ ಕಾಟ

ಹೊಸಪೇಟೆಯ ಚಿಲಕನಹಟ್ಟಿ ಗ್ರಾಮದಲ್ಲಿ ನೊಣದ ಕಾಟ

ಈ ಗ್ರಾಮದಲ್ಲಿ ನೊಣಗಳು ಜನರಿಗೆ ಸಹಿಸಲಾರದಂಥ ಕಾಟ ಕೊಡುತ್ತಿವೆ. ತಿನ್ನುವ ಊಟ, ಪಾತ್ರೆ ಬಟ್ಟೆ ಎನ್ನದೇ ಎಲ್ಲಂದರಲ್ಲಿ ಅವುಗಳದ್ದೇ ರಾಜ್ಯಭಾರ. ಇದು ಬಳ್ಳಾರಿ ಹೊಸಪೇಟೆ ತಾಲ್ಲೂಕಿನ ಚಿಲಕನಹಟ್ಟಿ ಗ್ರಾಮ. ಈ ಗ್ರಾಮದಲ್ಲಿ ನೊಣಗಳ ಕಾಟ ವಿಪರೀತ ಎನ್ನುವಂತಾಗಿದೆ. ಅದಕ್ಕೆ ಕಾರಣ ಗ್ರಾಮದ ಪಕ್ಕದಲ್ಲಿರುವ ಕೋಳಿ ಫಾರ್ಮ್.

 ಕೋಳಿ ಫಾರ್ಮ್ ನಿಂದ ಸಂಕಷ್ಟ

ಕೋಳಿ ಫಾರ್ಮ್ ನಿಂದ ಸಂಕಷ್ಟ

ಈ ಕೋಳಿ ಫಾರ್ಮ್ ನಿಂದಾಗಿ ಇಲ್ಲಿ ಜೀವಿಸುವುದೇ ಕಷ್ಟಕರವಾಗಿದೆ. ಈ ಕೋಳಿ ಫಾರ್ಮ್ ಸುತ್ತಮುತ್ತ ಸತ್ತ ಕೋಳಿಗಳನ್ನು ಮತ್ತು ಅದರ ತ್ಯಾಜ್ಯವನ್ನು ಚೆಲ್ಲುತ್ತಿದ್ದಾರೆ. ಹೀಗಾಗಿ ಇಲ್ಲಿ ನೊಣಗಳು ಮುತ್ತಿಕೊಳ್ಳುತ್ತಿದ್ದು, ಇಡೀ ಗ್ರಾಮಕ್ಕೆ ನೊಣದ ಕಾಟ ಹಬ್ಬಿದೆ. ನೊಣಗಳ ಸಂತತಿಯೂ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಈ ಗ್ರಾಮಸ್ಥರು ಬೇಸತ್ತಿದ್ದಾರೆ

ಚಿರಕನಹಳ್ಳಿಯಲ್ಲಿ ಅಪಾಯದ ಸೂಚನೆ ಕೊಡುತ್ತಿದೆ ಈ ನೀರಿನ ಟ್ಯಾಂಕ್ಚಿರಕನಹಳ್ಳಿಯಲ್ಲಿ ಅಪಾಯದ ಸೂಚನೆ ಕೊಡುತ್ತಿದೆ ಈ ನೀರಿನ ಟ್ಯಾಂಕ್

 ನೋಟೀಸ್ ಬಂದರೂ ಎಚ್ಚೆತ್ತುಕೊಂಡಿಲ್ಲ

ನೋಟೀಸ್ ಬಂದರೂ ಎಚ್ಚೆತ್ತುಕೊಂಡಿಲ್ಲ

ಕಳೆದ ಐದು ವರ್ಷಗಳಿಂದ ಇಲ್ಲಿನ ಜನ ಈ ಕೋಳಿ ಫಾರ್ಮ್ ನಿಂದ ಕಷ್ಟ ಎದುರಿಸುತ್ತಿದ್ದಾರೆ. ಕೋಳಿ ಫಾರ್ಮ್ ನವರು ಚಿಲಕನಹಟ್ಟಿ ಗ್ರಾಮ ಪಂಚಾಯತಿಗೆ ಯಾವುದೇ ಬಾಡಿಗೆ ಕಟಿಲ್ಲ. ಹೀಗಾಗಿ ಗ್ರಾಮ ಪಂಚಾಯತಿಯವರು ಸುಮಾರು ಸಾರಿ ನೋಟಿಸ್ ನೀಡಿದವರೂ ಕೋಳಿ ಫಾರ್ಮ್ ನವರು ಕ್ಯಾರೆ ಎನ್ನುತಿಲ್ಲ. ಹೀಗಾಗಿ ಜನ ಈ ಗ್ರಾಮವನ್ನು ಬಿಡುವ ನಿರ್ಧಾರ ಮಾಡಿದ್ದಾರೆ.‌

 ಗ್ರಾಮ ಬಿಡುವ ನಿರ್ಧಾರ ಕೈಗೊಂಡ ಗ್ರಾಮಸ್ಥರು

ಗ್ರಾಮ ಬಿಡುವ ನಿರ್ಧಾರ ಕೈಗೊಂಡ ಗ್ರಾಮಸ್ಥರು

ನೊಣಗಳ ಕಾಟ ಮಾತ್ರವಲ್ಲ, ಗಬ್ಬುವಾಸನೆಗೆ ಊರ ಜನರು ಉಸಿರಾಡುವುದೂ ಕಷ್ಟವಾಗಿದೆ. ಇವೆಲ್ಲವೂ ಜನರನ್ನು ಇಲ್ಲಿ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಹೀಗಾಗಿ ಈ ಗ್ರಾಮವನ್ನೇ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಗ್ರಾಮಸ್ಥರು. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ನಮ್ಮ‌ಊರನ್ನು ಉಳಿಸಿ. ಇಲ್ಲವಾದರೆ ಇ ಗ್ರಾಮವನ್ನು ತೊರೆಯುವುದೊಂದೇ ನಮಗಿರುವ ದಾರಿ ಎನ್ನುತ್ತಿದ್ದಾರೆ ಈ ಗ್ರಾಮಸ್ಥರು.

English summary
Villagers decided to leave chilakanahalli of hosapete in ballari because of flies problem,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X