ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪಾಟ್ ಫಿಕ್ಸಿಂಗ್ : ಬಿಸಿಸಿಐ ಸುದ್ದಿಗೋಷ್ಠಿ ಮುಖ್ಯಾಂಶಗಳು

By Mahesh
|
Google Oneindia Kannada News

BCCI's Working Committee meets to discuss IPL spot-fixing
ಚೆನ್ನೈ, ಮೇ.19: ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತುರ್ತು ಸಭೆ ಸೇರಿ ಕೆಲ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದೆ. ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಹಾಗೂ ಕಾರ್ಯದರ್ಶಿ ಸಂಜಯ್ ಜಗದಾಳೆ ಅವರು ಸುದ್ದಿಗೋಷ್ಠಿ ನಡೆಸಿದರು.

ಇವತ್ತು ನಡೆದ ಕಾರ್ಯಕಾರಿ ಸಭೆಯಲ್ಲಿ ಮಾಜಿ ನಾಯಕ ಅನಿಲ್ ಕುಂಬ್ಳೆ ಹಾಗೂ ರವಿಶಾಸ್ತ್ರಿ ಭಾಗಿಯಾಗಿದ್ದರು. ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ವಿಷಯ ಕುರಿತು ಬಿಸಿಸಿಐ ಸಭೆಯಲ್ಲಿ ಚರ್ಚಿಸಲಾಯಿತು. ಸುದ್ದಿಗೋಷ್ಠಿ ಮುಖ್ಯಾಂಶಗಳು ಇಲ್ಲಿವೆ.

* ಐಸಿಸಿ ಭ್ರಷ್ಟಾಚಾರ ತಡೆ ಘಟಕ(ACSU)ದ ಮುಖ್ಯಸ್ಥ ವೈಪಿ ಸಿಂಗ್ ಸಭೆಯಲ್ಲಿ ಭಾಗಿಯಾಗಿದ್ದರು. ಬಿಸಿಸಿಐ ಉಪಾಧ್ಯಕ್ಷ ಅರುಣ್ ಜೇಟ್ಲಿ, ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.

* ಈ ಪ್ರಕರಣದ ವಿವರಗಳನ್ನು ನೀಡುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಕೇಳಲಾಗಿದೆ. ವಿವರ ಸಿಕ್ಕ ನಂತರ ಆಂತರಿಕ ತನಿಖೆ ನಡೆಸಲಾಗುತ್ತದೆ.

* ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರವಿ ಸವಾನಿ ಅವರನ್ನು ಆಂತರಿಕ ತನಿಖಾ ತಂಡದ ಆಯುಕ್ತರನ್ನಾಗಿ ಬಿಸಿಸಿಐ ನೇಮಿಸಿದೆ.

* ಈ ನಡುವೆ ಆರೋಪಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ರಾಜಸ್ಥಾನ ರಾಯಲ್ಸ್ ತಂಡ ನಿರ್ಧರಿಸಿದೆ. ಇದೇ ಕ್ರಮವನ್ನು ಜರುಗಿಸಲು ಬಿಸಿಸಿಐ ಕೂಡಾ ಮುಂದಾಗುವ ಸಾಧ್ಯತೆಯಿದೆ.

* ಸದ್ಯಕ್ಕೆ ಆಜೀವ ನಿಷೇಧದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಮೂವರು ಆರೋಪಿಗಳು ಮಾತ್ರ. ತನಿಖೆ ನಡೆದು ಅಪರಾಧಿಗಳಾಗಿ ಘೋಷಿಸಿದ ನಂತರ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ.

* ಐಪಿಎಲ್ ಭ್ರಷ್ಟಾಚಾರ ನಿಗ್ರಹ ದಳ ತನ್ನ ಮಿತಿಯೊಳಗೆ ಕಾರ್ಯ ನಿರ್ವಹಿಸಬೇಕಿದೆ. ಪೊಲೀಸರ ಸಹಕಾರದೊಂದಿಗೆ ನಮ್ಮ ತನಿಖೆ ಮುಂದುವರೆಯಲಿದೆ.

ಐಪಿಎಲ್ ಕಳ್ಳಾಟದ ತನಿಖೆಯನ್ನು ಚುರುಕುಗೊಳಿಸಿರುವ ದೆಹಲಿ, ಮುಂಬೈ ಪೊಲೀಸರು ಇಂದು ಕಳಂಕಿತ ಕ್ರಿಕೆಟಿಗ ಎಸ್. ಶ್ರೀಶಾಂತ್ ಹಾಗೂ ಆತನ ಸಂಬಂಧಿ ಹಾಗೂ ಬುಕ್ಕಿ ಜಿಜೂ ಜನಾರ್ದನ್ ಗೆ ಸೇರಿದ್ದ ಮೊಬೈಲ್, ಐ ಫೋನ್, ಲ್ಯಾಪ್‌ಟಾಪ್, ಡಾಟಾ ಕಾರ್ಡ್ಸ್ ಹಾಗೂ ಇತರ ವೈಯಕ್ತಿಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೊಂದೆಡೆ ಅಜಿತ್ ಚಂಡಿಲ ಲಕ್ಷಾಂತರ ರುಪಾಯಿ ಸುರಿದು 2 ಜೀನ್ಸ್ ಪ್ಯಾಂಟ್ ತೆಗೆದುಕೊಂಡಿದ್ದು ಸೇರಿದಂತೆ ಸ್ಪಾಟ್ ಫಿಕ್ಸಿಂಗ್ ಈಗ ಸಾಮಾಜಿಕ ಜಾಲ ತಾಣ ಟ್ವಿಟರ್ ಬಹುಚರ್ಚಿತ ವಿಷಯವಾಗಿದೆ. ಕೆಲವು ಟ್ವೀಟ್ ಗಳ ಝಲಕ್ ಇಲ್ಲಿದೆ...

English summary
The Board of Control for Cricket in India's Working Committee held meeting in Chennai today(May.19). BCCI has appointed Ravi Sawani as the commissioner to probe into spot-fixing allegations against three Rajasthan Royals players said N Sreenivasan, BCCI president
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X