ಕಳ್ಳಾಟವಾಡಿದ ಪಾಕಿಗಳಿಗೆ ನಿಷೇಧ: ಐಸಿಸಿ

ಐಸಿಸಿ, ಇಸಿಬಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧಿಕಾರಿಗಳ ನಡುವಿನ ಸುದೀರ್ಘ ಮಾತುಕತೆಯ ಬಳಿಕ ಈ ಬೆಳವಣಿಗೆ ಆಗಿದೆ. ಆದರೆ ಪಿಸಿಬಿಯು ತನ್ನ ಆಟಗಾರರಿಗೆ ಪೂರ್ಣ ಬೆಂಬಲ ಸೂಚಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ)ಯ ಒತ್ತಡಕ್ಕೆ ಮಣಿದ ಪಿಸಿಬಿ ಅನ್ಯ ಮಾರ್ಗವಿಲ್ಲದೆ ಈ ಕ್ರಮ ಕೈಗೊಂಡಿದೆ. ಈ ಮೂವರು ಆಟಗಾರರು ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಮತ್ತು ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡಿದ್ದಾರೆ.
ಈ ಆಟಗಾರರು ಪ್ರಕರಣದ ವಿಚಾರಣೆ ನಡೆಸುತ್ತಿರುವ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರಿಗೆ ನೆರವು ನೀಡುವ ನಿಟ್ಟಿನಲ್ಲಿ ಇಂಗ್ಲೆಂಡ್‌ನಲ್ಲೇ ಉಳಿದುಕೊಳ್ಳುವರು. ಕಳೆದ ಒಂದು ವಾರದ ಅವಧಿಯಲ್ಲಿ ನಡೆದ ಬೆಳವಣಿಗೆಗಳು ಆಟಗಾರರು ಮಾನಸಿಕ ಕಿರುಕುಳ ಅನುಭವಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಅವರು ಆಡುವ ಸ್ಥಿತಿಯಲ್ಲಿಲ್ಲ. ಆರೋಪ ಮುಕ್ತರಾಗುವವರೆಗೆ ತಂಡಕ್ಕೆ ತಮ್ಮನ್ನು ಪರಿಗಣಿಸಬಾರದು ಎಂದು ಈ ಆಟಗಾರರು ಪಿಸಿಬಿಯಲ್ಲಿ ಕೇಳಿಕೊಂಡರು" ಎಂಬುದಾಗಿ ಪಾಕ್ ಹೈಕಮಿಷನರ್ ವಾಜಿದ್ ಎಸ್. ಹಸನ್ ತಿಳಿಸಿದರು.











Click it and Unblock the Notifications