ಐಪಿಎಲ್ ಬೆಟ್ಟಿಂಗ್ ಮಾಡಿದ್ದು ನಿಜ: ತಪ್ಪೊಪ್ಪಿಕೊಂಡ ಅರ್ಬಾಜ್ ಖಾನ್

ಮುಂಬೈ, ಜೂನ್ 02: ಐಪಿಎಲ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದು ನಿಜ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ, ನಟ ನಿರ್ಮಾಪಕ ಅರ್ಬಾಜ್ ಖಾನ್ ತಪ್ಪೊಪ್ಪಿಕೊಂಡಿದ್ದಾರೆ.

ಐಪಿಎಲ್‌ ಬೆಟ್ಟಿಂಗ್ ಆರೋಪದಡಿ ಥಾಣೆ ಪೊಲೀಸರಿಂದ ಸಮನ್ಸ್ ಬಂದ ಹಿನ್ನೆಲೆಯಲ್ಲಿ ಇಂದು ಪೊಲೀಸ್ ಠಾಣೆಗೆ ಬಂದು ಅರ್ಬಾಜ್ ಖಾನ್ ಅವರು ಹೇಳಿಕೆ ದಾಖಲಿಸಿದ್ದು, ಐಪಿಎಲ್ ಬೆಟ್ಟಿಂಗ್‌ನಲ್ಲಿ ಭಾಗಿ ಆಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಐದು ವರ್ಷದಿಂದಲೂ ಬೆಟ್ಟಿಂಗ್ ಆಡುತ್ತಿದ್ದಾಗಿ ಹೇಳಿರುವ ಅರ್ಬಾಜ್ ಖಾನ್, ಬುಕ್ಕಿ ಸೋನು ಜುಲನ್ ಜೊತೆಗೂ ಬಹಳ ವರ್ಷದಿಂದ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ.

Actor Arbaaz Khan confesses of IPL betting

ಬೆಟ್ಟಿಂಗ್‌ಗೆ ಮನೆಯರ ವಿರೋಧವಿತ್ತು ಆದರೂ ಬೆಟ್ಟಿಂಗ್ ಆಡುತ್ತಿದ್ದಾಗಿ ಹೇಳಿರುವ ಅರ್ಬಾಜ್ ಖಾನ್, ಐಪಿಎಲ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ಮಾಡಿದ್ದಾಗಿ ಹೇಳಿಕೆ ದಾಖಲಿಸಿದ್ದಾರೆ.

ಬೆಟ್ಟಿಂಗ್‌ನಿಂದಾಗಿ ಸುಮಾರಿ ಮೂರು ಕೋಟಿ ರೂಪಾಯಿ ಕಳೆದುಕೊಂಡಿದ್ದಾಗಿಯೂ ಹೇಳಿರುವ ಅರ್ಬಾಜ್ ಖಾನ್ ಅವರು, ಇದೇ ಕಾರಣಕ್ಕೆ ಬುಕ್ಕಿ ಸೋನು ಜಲಾನ್ ತನ್ನನ್ನು ಬೆದರಿಸುತ್ತಿದ್ದಾಗಿಯೂ ಪೊಲೀಸರ ಮುಂದೆ ಹೇಳಿದ್ದಾರೆ.

ಐಪಿಎಲ್ ಬೆಟ್ಟಿಂಗ್: ಸಲ್ಮಾನ್ ಸೋದರ ಅರ್ಬಾಜ್ ಗೆ ಪೊಲೀಸರಿಂದ ಸಮನ್ಸ್

ಥಾಣೆ ಪೊಲೀಸರು ಅರ್ಬಾಜ್ ಖಾನ್ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಸೆಷನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ಮೇ 16ರಂದು ಥಾಣೆ ಕ್ರೈಂ ಬ್ರಾಂಚ್ ಪೊಲೀಸರು ಹೊಟೆಲ್ ಒಂದರ ಮೇಲೆ ದಾಳಿ ನಡೆಸಿ ಬುಕ್ಕಿಗಳನ್ನು ಬಂಧಿಸಿದ್ದರು ಅದರಲ್ಲಿ ಸೋನು ಜಲಾನ್ ಕೂಡ ಒಬ್ಬನಾಗಿದ್ದ. ಆತನೇ ಅರ್ಬಾಜ್ ಖಾನ್ ಬಗ್ಗೆ ಮಾಹಿತಿ ನೀಡಿದ್ದ.

ಬಂಧಿತ ಸೋನು ಜಲಾನ್, ದಾವೂದ್ ಗ್ಯಾಂಗ್‌ನ ಅನಿಲ್ ತುಂಡಾ, ರಯೀಸ್ ಫರೂಕಿ ಅವರುಗಳೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಸೋನು ಜಲಾನ್‌ನೊಂದಿಗೆ ಅರ್ಬಾಜ್ ಖಾನ್ ಇರುವ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+