ಒಂದಲ್ಲ, ಎರಡಲ್ಲ 680 ಪಂದ್ಯಗಳು ಮ್ಯಾಚ್ ಫಿಕ್ಸ್

ಯುರೋಪಿನ ಪೊಲೀಸರು, ಅಪರಾಧ ನಿಗ್ರಹ ಸಂಸ್ಥೆ ಮತ್ತು ನ್ಯಾಶನಲ್ ಪ್ರಾಸಿಕ್ಯೂಟರ್ಸ್ ಜಂಟಿಯಾಗಿ ನಡೆಸಿದ ತನಿಖೆಯಲ್ಲಿ ವಿಶ್ವಕಪ್ ಫುಟ್ಬಾಲ್ ಮತ್ತು ಚಾಂಪಿಯನ್ಸ್ ಲೀಗ್ ಅರ್ಹತಾ ಪಂದ್ಯಾವಳಿಯಲ್ಲಿ ನಡೆಯುತ್ತಿರುವ ಬೃಹತ್ ಮ್ಯಾಚ್ ಫಿಕ್ಸಿಂಗ್ ಹಗರಣವೊಂದು ಬೆಳಕಿಗೆ ಬಂದಿದೆ. ವಿಶ್ವಕಪ್, ಯುರೋಪಿಯನ್ ಚಾಂಪಿಯನ್ಸ್‌ಶಿಪ್ ಹಾಗೂ ಚಾಂಪಿಯನ್ಸ್ ಲೀಗ್ ಅರ್ಹತಾ ಪಂದ್ಯಗಳು ಸೇರಿದಂತೆ 680 ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವುದು ಪತ್ತೆಯಾಗಿದೆ.
ಜಾಗತಿಕ ಫಿಕ್ಸಿಂಗ್ ಜಾಲವೊಂದು ಸಿಂಗಾಪುರವನ್ನು ಕೇಂದ್ರವನ್ನಾಗಿರಿಸಿಕೊಂಡು ಕಾರ್ಯಾಚರಿಸುತ್ತಿರುವುದು ತನಿಖೆಯ ಮೂಲಕ ಬಹಿರಂಗಗೊಂಡಿದ್ದು, 2008 ಮತ್ತು 2011ರ ಅವಧಿಯಲ್ಲಿ ಯುರೋಪ್‌ನಲ್ಲಿ ಆಡಲಾಗಿರುವ 380 ಪಂದ್ಯಗಳಲ್ಲಿ ಹಾಗೂ ಇದೇ ಅವಧಿಯಲ್ಲಿ ಅಫ್ರಿಕಾ, ಏಷ್ಯಾ, ದಕ್ಷಿಣ ಮತ್ತು ಕೇಂದ್ರ ಅಮೆರಿಕದಲ್ಲಿ ನಡೆದ 300 ಫುಟ್ಬಾಲ್ ಪಂದ್ಯಗಳಲ್ಲಿ ಫಿಕ್ಸಿಂಗ್‌ನಡೆದಿದೆ ಎಂದು ಯುರೋಪೊಲ್ ಮುಖ್ಯಸ್ಥ ರಾಬ್ ವೆಯ್ನಿರೈಟ್ ಇಂದು ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದ್ದಾರೆ.
ಭಾರಿ ಮೊತ್ತದ ಬೆಟ್ಟಿಂಗ್: ಕಳೆದ ವರ್ಷ ಭ್ರಷ್ಟಾಚಾರ ನಿಗ್ರಹ ಕಾವಲು ಪಡೆಯು ನಡೆಸಿರುವ ತನಿಖೆಯಲ್ಲಿ ಪ್ರತಿವರ್ಷ ಒಂದು ಟ್ರಿಲಿಯನ್ ಡಾಲರ್ ಹಣ ಫುಟ್ಬಾಲ್‌ನ ಬೆಟ್ಟಿಂಗ್‌ಗಾಗಿ ಬಳಕೆಯಾಗುತ್ತಿದೆ. ಈ ಪೈಕಿ ಬಹುತೇಕ ಹಣ ಏಷ್ಯಾದ ರಾಷ್ಟ್ರಗಳಿಂದ ಹರಿದು ಬರುತ್ತಿರುವುದು ಗೊತ್ತಾಗಿದೆ.
ಜರ್ಮನಿಯ ತನಿಖಾಧಿಕಾರಿಗಳ ಅಭಿಪ್ರಾಯದಂತೆ ಫುಟ್ಬಾಲ್‌ನ ಫಿಕ್ಸಿಂಗ್ ಜಾಲ ಜಾಗತಿಕ ಮಟ್ಟದಲ್ಲಿ ಹರಡಿಕೊಂಡಿದೆ. ಫುಟ್ಬಾಲ್ ಆಡುತ್ತಿರುವ ಜಗತ್ತಿನ ಬಹುತೇಕ ದೇಶಗಳಲ್ಲಿ ಆಟಗಾರರು, ರೆಫರಿಗಳು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ. 15 ದೇಶಗಳಲ್ಲಿ ಕಳ್ಳಾಟ ತೀವ್ರವಾಗಿದ್ದು, 425 ಅಧಿಕಾರಿಗಳು, ರೆಫರಿಗಳು ಹಾಗೂ ಆಟಗಾರರು ಬೆಟ್ಟಿಂಗ್ ಜಾಲದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.
150 ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿರುವುದಕ್ಕೆ ಸಾಕ್ಷಾಧಾರಗಳು ಲಭಿಸಿವೆ. ಸಿಂಗಾಪುರದಲ್ಲಿ ಫಿಕ್ಸಿಂಗ್ ಜಾಲ ಕಾರ್ಯಾಚರಿಸುತ್ತಿದ್ದು, ಫಿಕ್ಸಿಂಗ್ ನಡೆಸಲು ಪ್ರತಿಯೊಂದು ಪಂದ್ಯಗಳಿಗೆ 100,000 ಯುರೋ ಲಂಚ ನೀಡಲಾಗುತ್ತಿದೆ ಎಂದು ಜರ್ಮನಿ ನಗರ ಬೊಕುಮ್‌ನಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸ್ ತಂಡದ ಮುಖ್ಯಸ್ಥ ಫ್ರೆಡ್‌ಹೆಲ್ಮ್ ಅಥೆನ್ಸ್ ತಿಳಿಸಿದ್ದಾರೆ.
ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಕ್ಲಬ್ ಅಥವಾ ಅಟಗಾರರ ಹೆಸರನ್ನು ಈ ವರೆಗೆ ಬಹಿರಂಗಪಡಿಸಿಲ್ಲ. ಯುರೋಪ್‌ನ ದೇಶಗಳಲ್ಲಿ ನಡೆಯುವ ನ್ಯಾಶನಲ್ ಲೀಗ್ ಪಂದ್ಯಗಳು, ಬ್ರಿಟನ್‌ನಲ್ಲಿ ಆಡಿರುವ ಪಂದ್ಯ ಸೇರಿದಂತೆ ಎರಡು ಚಾಂಪಿಯನ್ಸ್ ಲೀಗ್ ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications