ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರೂಜಿ ಮಾಹಿತಿ ತೆಗೆದುಹಾಕಲು Googleಗೆ ಆದೇಶ

By Srinath
|
Google Oneindia Kannada News

delete-derogatory-content-against-ravi-shankar-google
ನವದೆಹಲಿ, ಮೇ11: ಆರ್ಟ್‌ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿ ವಿರುದ್ಧ blogನಲ್ಲಿ ಬಂದಿರುವ ಅವಹೇಳನಕಾರಿ ಮಾಹಿತಿಯನ್ನು 36 ಗಂಟೆಗಳಲ್ಲಿ Delete ಮಾಡುವಂತೆ Googleಗೆ ದೆಹಲಿ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಶ್ರೀ ರವಿಶಂಕರ ಗುರೂಜಿ ಅವರ ಅನುಯಾಯಿಗಳು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಆಲಿಸಿದ ಜಸ್ಟೀಸ್ ಮನಮೋಹನ್ ಸಿಂಗ್ ಅವರು Google ಕಂಪನಿಗೆ ಮತ್ತು ಅವಹೇಳನಕಾರಿ ಮಾಹಿತಿ ಪ್ರಕಟಿಸಿದ ಬ್ಲಾಗರ್ ಜಿತೇಂದರ್ ಬಗ್ಗಾ ಅವರಿಗೆ ಈ ಆದೇಶ ನೀಡುವುದರ ಜತೆಗೆ ನೋಟಿಸ್ ಸಹ ಜಾರಿ ಮಾಡಿದೆ.

ಮಧ್ಯಂತರ ತೀರ್ಪನ್ನು ಪಾಲಿಸದಿದ್ದಲ್ಲಿ ತೀವ್ರ ಕಟ್ಟುನಿಟ್ಟಿನ ಕ್ರಮ ಮತ್ತು ಅಪಾರ ನಷ್ಟ ಎದುರಿಸಬೇಕಾಗುತ್ತದೆ ಎಂದೂ ನ್ಯಾಯಪೀಠ ಎಚ್ಚರಿಸಿದೆ. ಮುಂದಿನ ಆದೇಶ ಜಾರಿಯಾಗುವವರೆಗೂ ಈ ತಕ್ಷಣಕ್ಕೆ ಅನ್ವಯವಾಗುವಂತೆ ಅಂದರೆ ಮಧ್ಯಂತರ ಆದೇಶದ ಪ್ರತಿ ಕೈಸೇರಿದ 36 ಗಂಟೆಯೊಳಗಾಗಿ ಆಕ್ಷೇಪಾರ್ಹ ಮಾಹಿತಿಯನ್ನು ಕಡ್ಡಾಯವಾಗಿ ತೆಗೆದುಹಾಕಲೇಬೇಕು ಎಂದು ಪೀಠ ಆದೇಶ ನೀಡಿದೆ.

ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ ಅಥವಾ ಶ್ರೀ ರವಿಶಂಕರ ಗುರೂಜಿ ಅವರಿಗೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬ್ಲಾಗರ್ ಜಿತೇಂದರ್ ಬಗ್ಗಾ ಇಮೇಲ್ ಮಾಡಬಾರದೂ ಎಂದೂ ಪೀಠ ನಿರ್ದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 30ಕ್ಕೆ ನಿಗದಿಪಡಿಸಲಾಗಿದೆ.

ಶ್ರೀ ರವಿಶಂಕರ ಗುರೂಜಿ ಅವರ ಕೆಲ ಅನುಯಾಯಿಗಳೂ ಸೇರಿದಂತೆ Vyakti Vikas Kendra, India Public Charitable Trust ಈ ಮಾನನಷ್ಟ ಮೊಕದ್ದಮೆ ಹೂಡಿತ್ತು. ಪ್ರಕರಣದಲ್ಲಿ 5 ಕೋಟಿ ರುಪಾಯಿ ಮಾನನಷ್ಟ ಪರಿಹಾರ ಸಹ ಕೇಳಿದೆ.

http://www.blogger.com/ ಮುಖಾಂತರ ಬ್ಲಾಗರ್ ಜಿತೇಂದರ್ ಬಗ್ಗಾ ಅವರು ಅಸಂಖ್ಯಾತ ಇಮೇಲುಗಳು ಮತ್ತು ಲೇಖನಗಳನ್ನು ಅವ್ಯಾಹತವಾಗಿ ಕಳುಹಿಸಿದ್ದರು. ಅದರಲ್ಲಿ ನಿಂದಾನಾತ್ಮಕ, ಅಶ್ಲೀಲ ಮತ್ತು ದುರುದ್ದೇಶಪೂರಿತ ಮಾಹಿತಿಯಿತ್ತು ಎಂದು ಟ್ರಸ್ಟ್ ನ್ಯಾಯಾಲಯದ ಗಮನ ಸೆಳೆದಿತ್ತು.

English summary
The Delhi High Court has directed Google on May 10, 2012 to delete, within 36 hours, derogatory content against the Art of Living foundation (Bangalore) Spiritual leader Sri Ravi Shankar Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X