ಅಮಾಯಕರ ಜೀವ ಪಡೆಯುತ್ತಿರುವ ಚೀನಾ ಲೋನ್ ಆ್ಯಪ್‌ಗಳ ಕಾರ್ಯವಿಧಾನ, ವಂಚನೆ, ಸುಲಿಗೆಗಳ ಕುರಿತು ಸಂಪೂರ್ಣ ವಿವರ ತಿಳಿಯಿರಿ
ಬೆಂಗಳೂರು, ಜುಲೈ 13: ಚೀನಾ ಮೂಲದ ಲೋನ್ ಆ್ಯಪ್‌ಗಳ ವಂಚನೆಗೆ ಬೆಂಗಳೂರಿನಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ಕೇವಲ ₹40,000 ಸಾಲದ ಕಿರುಕುಳ ತಾಳಲಾರದೇ ಕೇರಳ ಮೂಲದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ಹೇಯ ಕೃತ್ಯ ಬೆಳಕಿಗೆ ಬಂದಿದೆ.
ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಚೀನಾ ಮೂಲಕ ಆ್ಯಪ್‌ಗಳ ಸುಲಿಗೆ ಹಾಗೂ ಬ್ಲ್ಯಾಕ್‌ಮೇಲ್‌ಗೆ ಕಳೆದ ಮೂರ್ನಾಲ್ಕು ವರ್ಷದಲ್ಲಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆ್ಯಪ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಸಾಲ ನೀಡಿದ ನಂತರ ಹೇಗೆ ಸುಲಿಗೆಗಳ ಇಳಿಯುತ್ತವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

ಕೋವಿಡ್ ಬಳಿಕ ಕ್ರಿಯಾಶೀಲವಾದ ಮೈಕ್ರೋಲೋನ್ ದಂಧೆ
ಕೋವಿಡ್ ಸಾಂಕ್ರಾಮಿಕವು ಜಗತ್ತಿನಾದ್ಯಂತ ಜನರನ್ನು ವ್ಯಾಪಕವಾಗಿ ಬಳಲುವಂತೆ ಮಾಡಿದೆ. ಇದೇ ಅಸಹಾಯಕತೆಯನ್ನು ಮುಂದಿಟ್ಟುಕೊಂಡು ಚೀನಾ ಮೂಲದ ಮೈಕ್ರೋಲೋನ್ ಆ್ಯಪ್‌ಗಳು ಜನಪ್ರಿಯಗೊಂಡಿವೆ. ಈ ಆ್ಯಪ್‌ಗಳಿಗೆ ವಿದ್ಯಾರ್ಥಿಗಳು, ಹಣಕಾಸಿನ ಬಗ್ಗೆ ಅರಿವು ಇಲ್ಲದವರು, ಕಡಿಮೆ ಆದಾಯ ಹೊಂದಿರುವ ಯುವಕರು ಹಾಗೂ ಜೂಜಾಟ ವ್ಯಸನಿಗಳೇ ಟಾರ್ಗೆಟ್ ಆಗಿದ್ದಾರೆ.
ಈ ಮೈಕ್ರೋ-ಕ್ರೆಡಿಟ್ ಲೋನ್ ಅಪ್ಲಿಕೇಶನ್‌ಗಳ ಜನಪ್ರಿಯತೆಯು ಕೇವಲ ಮಹಾನಗರದಲ್ಲಿ ಅಷ್ಟೇ ಅಲ್ಲದೇ ಭಾರತದ ಬಹುತೇಕ ನಗರ ಹಾಗೂ ಪಟ್ಟಣಗಳನ್ನೂ ತಲುಪಿವೆ. ಕೋವಿಡ್ ನಂತರದ ಆರ್ಥಿಕ ಹಾಗೂ ನಿರುದ್ಯೋಗ ಸಂಕಷ್ಟಗಳಲ್ಲಿ ಸಿಲುಕಿರುವ ಜನರನ್ನು ಗುರಿಯಾಗಿಸಿ ಈ ಆ್ಯಪ್‌ಗಳು ಸಾಲಗಳನ್ನು ನೀಡುತ್ತವೆ. ಇದು ಲಕ್ಷಾಂತರ ಸಾಲವಂತೂ ಅಲ್ಲ. ಕೆಲವು ಸಾವಿರ ರೂಪಾಯಿಗಳ ಸಾಲಗಳನ್ನು ಒದಗಿಸುವ ಮೂಲಕ ಸುಲುಗೆಗೆ ಇಳಿಯುತ್ತವೆ.
ಆ್ಯಪ್‌ಗಳ ಕಾರ್ಯವಿಧಾನ
ಚೀನಾ ಮೂಲದ ಲೋನ್ ಆ್ಯಪ್‌ಗಳನ್ನು Google Play ಸ್ಟೋರ್ ಮೂಲಕ ಫ್ರೀಯಾಗಿ ಡೌನ್‌ಲೋಡ್ ಮಾಡಬಹುದು. ಇವುಗಳು ಸುಲಭವಾಗಿ ಫೋನ್ ಅಪ್ಲಿಕೇಶನ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಈ ಲೋನ್ ಆ್ಯಪ್‌ಗಳು ಕಾಗದ ರಹಿತ ಲೋನ್ ನೀಡುವ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿವೆ.

ಈ ಲೋನ್ ಆ್ಯಪ್‌ಗಳು ವಿದ್ಯಾರ್ಥಿಗಳು ಹಾಗೂ ಕಡಿಮೆ ಆದಾಯ ಹೊಂದಿರುವ ಯುವಕರನ್ನು ಹೆಚ್ಚು ಟಾರ್ಗೆಟ್ ಮಾಡಿವೆ. ಇವುಗಳ ಮೂಲಕ ಕೆಲವು ಸಾವಿರದಷ್ಟು ಮಾತ್ರ ಸಾಲವನ್ನು ಪಡೆಯಬಹುದು. ಸಾಲ ನೀಡಿದ ನಂತರ ಆ್ಯಪ್ ಬಳಕೆದಾರರ ಡೇಟಾ ಹಾಗೂ ಇತರೇ ಸಂಪರ್ಕ ಮೂಲಗಳನ್ನು ಕದಿಯಲಾಗುತ್ತದೆ.
ಬಳಕೆದಾರರ ಫೋನ್‌ಗಳನ್ನೂ ಹ್ಯಾಕ್ ಮಾಡಲಾಗುತ್ತದೆ ಎಂದು ಈ ಹಿಂದಿನ ಕೆಲ ಪ್ರಕರಣಗಳಲ್ಲಿ ಧೃಡವಾಗಿದೆ. ಈ ಮೂಲಕ ಸಾಲಗಾರರ ಕುಟುಂಬ ಸದಸ್ಯರ ಫೋನ್ ನಂಬರ್‌ಗಳನ್ನು ಕಳ್ಳತನ ಮಾಡಲಾಗುತ್ತದೆ ಎಂದು ಬೆಳಕಿಗೆ ಬಂದಿದೆ.
ಭಾರತೀಯರ ಬಲಿ ಪಡೆಯುತ್ತಿರುವ ಚೀನಾದ ಲೋನ್ ಆ್ಯಪ್‌ಗಳು
ಭಾರತ ಸರ್ಕಾರ ಈ ಹಿಂದೆ ಚೀನಾದ ಹಲವು ಲೋನ್ ಆ್ಯಪ್‌ಗಳನ್ನು ನಿಷೇಧಿಸಿದೆ. ಆದರೂ, ಗೂಗಲ್ ಫ್ಲೇ ಸ್ಟೋರ್‌ನಲ್ಲಿ ಕೆಲ ಆ್ಯಪ್‌ಗಳು ಕ್ರಿಯಾಶೀಲವಾಗಿವೆ. ಇವುಗಳು ಚೀನಾದ ಮೂಲದಿಂದ ಬಂದಿದ್ದು, ಅಕ್ರಮವಾಗಿ ನಡೆಸಲ್ಪಡುತ್ತಿವೆ. ಇವುಗಳಿಗೆ ಸರ್ಕಾರದ ಪರವಾನಗಿ ಇರುವುದಿಲ್ಲ. ಮೋಸದ ಜಾಲ ಹೊಂದಿರುವ ಈ ಆ್ಯಪ್‌ಗಳು ಸಾಲ ನೀಡಿದ ಬಳಿಕ ಸುಲಿಗೆ ಇಳಿಯುತ್ತವೆ. ಇದಕ್ಕೆ ಬಗ್ಗದ ಸಾಲಗಾರರನ್ನು ಬ್ಲ್ಯಾಕ್ ಮೇಲ್ ಮಾಡಲು ಮುಂದಾಗುತ್ತವೆ.

ಸಾಲ ನೀಡುವ ಸಂದರ್ಭದಲ್ಲಿ ಕಡಿಮೆ ಬಡ್ಡಿ ದರದ ಆಮಿಷ
ಚೀನಾ ಮೂಲದ ಲೋನ್ ಆ್ಯಪ್‌ಗಳು ಸಾಲ ನೀಡುವ ಸಂದರ್ಭದಲ್ಲಿ ಜನರಿಗೆ ಕಡಿಮೆ ಬಡ್ಡಿದರದ ಆಮಿಷ ಒಡ್ಡುತ್ತವೆ. ಆ ನಂತರ ಬಡ್ಡಿದರವನ್ನು ಹೆಚ್ಚು ಮಾಡುತ್ತವೆ. ಇದಕ್ಕೆ ಹಲವಾರು ಕಾರಣಗಳನ್ನು ನೀಡಲು ಆರಂಭಿಸುತ್ತವೆ. ಒಂದು ವೇಳೆ, ಸಾಲಗಾರರು ಬಡ್ಡಿದರ ಏರಿಕೆ ಬಗ್ಗೆ ಪ್ರಶ್ನಿಸಿದರೆ, ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತವೆ.
ಬ್ಲ್ಯಾಕ್‌ಮೇಲ್‌ಗೆ ಮಾರ್ಪ್ ಫೋಟೊಗಳ ಬಳಕೆ
ಸಾಲಗಾರರ ಫೋಟೊಗಳನ್ನು ಮಾರ್ಪ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಬೆದರಿಕೆ ಹಾಕುತ್ತವೆ. ಉದಾಹರಣೆಗೆ, ಮುಖವಷ್ಟೇ ಸಾಲಗಾರರದ್ದು, ಅದಕ್ಕೆ ಅಂಟಿಸಿರುವ ನಗ್ನ ದೇಹ ಇನ್ನಾರದ್ದೋ ಆಗಿರುತ್ತದೆ. ಹೆಚ್ಚು ಬಡ್ಡಿದರವನ್ನು ಕಟ್ಟುವುದಿಲ್ಲವೆಂದು ಹೇಳುವ ಸಾಲಗಾರರಿಗೆ ಈ ಫೋಟೊಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿ ಬೆದರಿಕೆಯೊಡ್ಡಲಾಗುತ್ತದೆ.
ಇದಕ್ಕಿಂತ ಅಮಾನವೀಯವೆಂದರೆ, ಮಾರ್ಪ್ ಮಾಡಿದ ಮಗಳ ( ಅಂದರೆ ಸಾಲ ತೆಗೆದುಕೊಂಡಿರುವವರು ) ಫೋಟೊಗಳನ್ನು ತಂದೆಯ ವಾಟ್ಸಾಪ್‌ಗೆ ಕಳುಹಿಸಲಾಗುತ್ತದೆ. ಪೂರ್ತಿ ಸಾಲ ತೀರಿಸಿದ ನಂತರವೂ ಬಡ್ಡಿದರ ಹೆಚ್ಚಾಗಿದ್ದರೂ, ನೀವು ಕಟ್ಟಿಲ್ಲವೆಂದು ಮತ್ತೆ ಪೀಡಲಾಗುತ್ತದೆ. ಇದಕ್ಕೆ ದಂಡವನ್ನೂ ವಿಧಿಸಲಾಗುತ್ತದೆ. ಇದಕ್ಕೂ ಸಾಲಗಾರರು ಬಗ್ಗಲಿಲ್ಲವೆಂದರೆ, ದೈಹಿಕವಾಗಿ ಬಲಿಷ್ಠವಾಗಿರುವ ವ್ಯಕ್ತಿಗಳು ಅವರ ಮನೆಗೆ ಹೋಗಿ, ಮಾನ ಕಳೆಯುವುದಾಗಿ ಬೆದರಿಕೆ ಹಾಕಿದ ನಿದರ್ಶನಗಳೂ ಇವೆ.
ಇದಕ್ಕಿಂತಲೂ ದುರಂತವೆಂದರೆ, ಈ ಸಾಲಗಳನ್ನು ತೆಗೆದುಕೊಳ್ಳುವ ಜನರು ತಾವು ಪಡೆಯುವ ಸಾಲಗಳ ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳದಿರುವ ಘಟನೆಗಳೂ ಜರುಗಿವೆ.
ಗೂಗಲ್ ಫ್ಲೇಸ್ಟೋರ್‌ನಲ್ಲಿರುವ ಅಪ್ಲಿಕೇಶನ್‌ಗಳು
ರೈಸ್ ಕ್ಯಾಶ್, ಕ್ಯಾಶ್ ರೇ, ಮೊಬಿಪಾಕೆಟ್, ಇನ್ಫಿನಿಟಿ ಕ್ಯಾಶ್, ಕ್ರೆಡಿಟ್ ಮ್ಯಾಂಗೋ, ಸಿಬಿ ಲೋನ್, ಕ್ಯಾಶ್ ಟ್ರೀ, ಮಿನಿಟ್ ಕ್ಯಾಶ್, ಕ್ಯಾಶ್ ಲೈಟ್, ಎಚ್‌ಡಿಬಿ ಲೋನ್, ಸ್ನ್ಯಾಪ್‌ಇಟ್‌ಲೋನ್, ಗೋ ಕ್ಯಾಶ್ ಮತ್ತು ಓಕೆ ಕ್ಯಾಶ್ ಹೆಸರಿನ ಅಪ್ಲಿಕೇಶನ್‌ಗಳು ಭಾರತದಲ್ಲಿ ಕ್ರಿಯಾಶೀಲವಾಗಿದೆ. ಇವಲ್ಲದೇ ಇನ್ನೂ ನೂರಾರು ಲೋನ್ ಆ್ಯಪ್‌ಗಳು ಕಾರ್ಯನಿರ್ವಹಿಸುತ್ತಿವೆ.
ಈ ಆ್ಯಪ್‌ಗಳ ಮೂಲಕ ಜಾರಿ ಇರುವ ಬಲವಂತದ ವಸೂಲಿ ಪದ್ಧತಿಗಳು ಅಮಾಯಕರ ಜೀವವನ್ನು ಬಲಿಪಡೆಯುತ್ತಿವೆ. ಇಂತಹ ವಂಚನೆ ಸಾಲಗಳನ್ನು ಪಡೆದ ಹತ್ತಾರು ಸಂತ್ರಸ್ತರು ಬೆದರಿಕೆಗಳ ಒತ್ತಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೀನೀ ವಂಚಕರು ನೇಪಾಳ, ಕಾಂಬೋಡಿಯಾ, ವಿಯೆಟ್ನಾಂ ಸೇರಿದಂತೆ ನೆರೆಯ ದೇಶಗಳಲ್ಲಿ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಾರೆ. ಇದನ್ನು ತಡೆಗಟ್ಟದಿದ್ದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ದುರಂತಗಳು ನಡೆಯುವುದು ಶತಸಿದ್ಧ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications