Get Updates
Get notified of breaking news, exclusive insights, and must-see stories!

Lok Sabha Election: ಗೂಗಲ್‌ನಲ್ಲೂ ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ

ಪ್ರತಿ ಹಬ್ಬ ಹಾಗೂ ವಿಶೇಷ ದಿನದಂದೂ ಗೂಗಲ್‌ ಡೂಡಲ್‌ ಅದಕ್ಕೆ ಸಂಬಂಧಿಸಿದಂತೆ ವಿಭಿನ್ನವಾಗಿ ಜನರ ಮುಂದೆ ಬರುತ್ತದೆ. ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮದ ದಿನವಾದ ಶುಕ್ರವಾರ ಸಹ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಚುನಾವಣೆಯನ್ನು ಸಂಭ್ರಮಿಸಿದೆ.

ಭಾರತದಲ್ಲಿ 18ನೇ ಲೋಕಸಭೆಗೆ ಮತದಾನ ಆರಂಭವಾದ ಕೂಡಲೇ ಗೂಗಲ್ ತನ್ನ ಲೋಗೋವನ್ನು ಬದಲಿಸಿದೆ. Google ನ ಮುಖಪುಟವು ತೋರು ಬೆರಳನ್ನು ಮತದಾನದ ಶಾಯಿಯೊಂದಿಗೆ ತೋರಿಸುತ್ತದೆ. ಇದು ಭಾರತದ ಪ್ರಜಾಪ್ರಭುತ್ವವನ್ನು ತೋರಿಸುತ್ತದೆ.

Google Doodle Recognizes India s Initial Phase of 2024 Lok Sabha Elections

ಈ ಡೂಡಲ್‌ನಲ್ಲಿ, ಗೂಗಲ್ ಅದರ ಮೇಲೆ ಶಾಯಿಯನ್ನು ಹೊಂದಿರುವ ಬೆರಳನ್ನು ತೋರಿಸಿದೆ. ದೇಶದಲ್ಲಿ ಮತದಾನದ ಸಮಯದಲ್ಲಿ ವ್ಯಕ್ತಿ ಮತ ಚಲಾಯಿಸದ್ದಾನೆ ಧೃಡಪಡಿಸಿದ್ದಾನೆ ಎಂದು ಈ ಶಾಯಿ ಗುರುತು ತಿಳಿಸುತ್ತದ. ಈ ಗೂಗಲ್ ಡೂಡಲ್ ಕ್ಲಿಕ್ ಮಾಡುವ ಮೂಲಕ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ನೋಡಬಹುದು. ಗೂಗಲ್ ಎಂಬ ಇಂಗ್ಲಿಷ್ ಪದದ ಮೂರನೇ ಅಕ್ಷರ "O"ದ ಸ್ಥಳದಲ್ಲಿ, ಒಂದು ಬೆರಳಿನಿಂದ ಮತದಾನವನ್ನು ಸೂಚಿಸುವ ಕೈಯನ್ನು ತೋರಿಸಲಾಗಿದೆ.

2024 ರ ಲೋಕಸಭೆ ಚುನಾವಣೆಯ ಮೊದಲ ಹಂತ ಶುಕ್ರವಾರ ನಡೆಯುತ್ತಿದ್ದು, ಗೂಗಲ್‌ ವಿಭಿನ್ನ ಡೂಡಲ್‌ ಮತದಾರರನ್ನು ಆಕರ್ಷಿಸಿದೆ. ಅಲ್ಲದೆ ತಮ್ಮ ಹಬ್ಬವನ್ನು ಗೂಗಲ್‌ ಸಹ ಆಚರಿಸುತ್ತಿರುವುದನ್ನು ಕಂಡು ಮತದಾರ ಪ್ರಭು ಸಹ ಫುಲ್ ಖುಷ್ ಆಗಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ 8.4 ಕೋಟಿ ಪುರುಷರು ಮತ್ತು 8.23 ​​ಕೋಟಿ ಮಹಿಳೆಯರು ಸೇರಿದಂತೆ 16.63 ಕೋಟಿಗೂ ಹೆಚ್ಚು ಮತದಾರರು ಇಂದು 1.87 ಲಕ್ಷ ಮತಗಟ್ಟೆಗಳಲ್ಲಿ ಮತದಾನ ಮಾಡಲಿದ್ದಾರೆ.

Google Doodle Recognizes India s Initial Phase of 2024 Lok Sabha Elections

18ನೇ ಲೋಕಸಭೆಯ 543 ಸದಸ್ಯರನ್ನು ಆಯ್ಕೆ ಮಾಡಲು ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಚುನಾವಣೆಗಳು ನಡೆಯುತ್ತಿವೆ. ಎರಡನೇ ಹಂತದ ಮತದಾನ ಏಪ್ರಿಲ್ 26 ರಂದು ನಡೆಯಲಿದೆ. ಇದೇ ವೇಳೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ರಾಜ್ಯದ 18 ಜಿಲ್ಲೆಗಳಲ್ಲಿ ನಡೆಯಲಿದೆ. ಮೂರನೇ ಹಂತದ ಮೇ 7 ರಂದು ನಡೆಯಲಿದೆ. ಈ ವೇಳೆ ಕರ್ನಾಟಕದ 10 ಜಿಲ್ಲೆಗಳಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದೆ. ನಾಲ್ಕನೇ ಹಂತ ಮೇ 13 ರಂದು ಮತ್ತು ಐದನೇ ಹಂತ ಮೇ 20 ರಂದು ನಡೆಯಲಿದೆ. ಮೇ 25 ರಂದು 6 ನೇ ಹಂತ ಮತ್ತು ಜೂನ್ 1 ರಂದು 7 ನೇ ಹಂತಕ್ಕೆ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ಏನಿದು ಡೂಡಲ್?

Google ನ ಡೂಡಲ್ ಸಾಮಾನ್ಯವಾಗಿ ಸರ್ಚ್‌ ಇಂಜಿನ ಮುಖಪುಟಗಳಲ್ಲಿ ಗೋಚರಿಸುತ್ತದೆ. ಗೂಗಲ್ ಡೂಡಲ್ ಸಾಮಾನ್ಯವಾಗಿ ಯಾವುದೇ ಹಬ್ಬ ಅಥವಾ ರಜಾದಿನಗಳಲ್ಲಿ ಜನರೊಂದಿಗೆ ಸಂಭ್ರಮವನ್ನು ಹಂಚಿಕೊಳ್ಳಲು ಹಾಗೂ ತಾನು ಅದ್ರಲ್ಲಿ ಭಾಗಿ ಎಂದು ಬಿಂಬಿಸಲು ಡೂಡಲ್‌ ಸಿದ್ಧ ಪಡಿಸುತ್ತದೆ. ಇನ್ನು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೈದ ಸಾಧಕರ ಸಾಧನೆಯನ್ನು ಸಹ ಗೂಗಲ್‌ ಸಂಭ್ರಮಿಸುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+