Get Updates
Get notified of breaking news, exclusive insights, and must-see stories!

Chandrayaan 3: ಭಾರತದ ಐತಿಹಾಸಿಕ ಸಾಧನೆಗೆ ಗೂಗಲ್ ಡೂಡಲ್ ಬಹುಪರಾಕ್‌

ನವದೆಹಲಿ, ಆಗಸ್ಟ್‌ 24: ಚಂದ್ರಯಾನ 3 ಸಾಫ್ಟ್‌ ಲ್ಯಾಂಡಿಂಗ್ ಸಾಧನೆಯನ್ನು ಭಾರತೀಯರು ಹೆಮ್ಮೆಯಿಂದ ಆಚರಿಸುತ್ತಿದ್ದಾರೆ. ವಿವಿಧ ದೇಶಗಳ ಗಣ್ಯರು ಭಾರತದ ಮಹತ್ಕಾರ್ಯವನ್ನು ಹಾಡಿ ಹೊಗಳುತ್ತಿದ್ದಾರೆ. ಇದಕ್ಕೆ ಗೂಗಲ್ ಡೂಡಲ್ ಸಹ ಹೊರತಾಗಿಲ್ಲ.

ಭಾರತ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಾಧನೆಯನ್ನು ಗೂಗಲ್‌ ಡೂಡಲ್‌ ಗೌರವಿಸಿ ಬಹುಪರಾಕ್‌ ಹೇಳಿದೆ. ಈ ಐತಿಹಾಸಿಕ ಸಾಧನೆಗೆ ಧನ್ಯವಾದಗಳನ್ನು ತಿಳಿಸಿದೆ.

Google Doodle celebrates India’s historic Chandrayaan 3 landing on moon’s surface

ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸುವಲ್ಲಿ ಯಶಸ್ವಿಯಾದ ಮೊದಲ ದೇಶ ಭಾರತವಾಗಿದೆ. ಅಲ್ಲದೆ, ಚಂದ್ರನ ಮೇಲೆ ಮೃದುವಾಗಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ನಾಲ್ಕನೇ ದೇಶವಾಗಿದೆ. ಈ ಮೊದಲ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಈ ಸಾಧನೆಯನ್ನು ಮಾಡಿವೆ.


ಮನುಕುಲದ ಇತಿಹಾಸದಲ್ಲಿ ಮಹತ್ವದ ಘಟನೆ

ಚಂದ್ರಯಾನ 3 ರ ಲ್ಯಾಂಡಿಂಗ್ ಆಗಸ್ಟ್ 23, 2023 ರ ಸಂಜೆ ಸಂಭವಿಸಿತು. ಇಡೀ ರಾಷ್ಟ್ರವು ಸಂತೋಷದಿಂದ ಹೊರಹೊಮ್ಮಿತು. ಇದನ್ನು ಇತರ ದೇಶಗಳು ನಾಯಕರು ಕೊಂಡಾಡಿದ್ದಾರೆ.

ಭಾರತದ ಐತಿಹಾಸಿಕ ಸಾಧನೆಯನ್ನು ಕೊಂಡಾಡುವ ಸಂದೇಶಗಳು, ಶುಭಾಶಯಗಳು ವಿವಿಧ ದೇಶಗಳಿಂದ ಹರಿದುಬರುತ್ತಿವೆ.

ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾದ ನಿರ್ವಾಹಕ ಬಿಲ್ ನೆಲ್ಸನ್ ಈ ಕುರಿತು ಟ್ವೀಟ್ ಮಾಡಿದ್ದಾರೆ. 'ಯಶಸ್ವಿ ಚಂದ್ರಯಾನ-3, ಚಂದ್ರನ ದಕ್ಷಿಣ ಧ್ರುವ ಲ್ಯಾಂಡಿಂಗ್‌ಗಾಗಿ ಇಸ್ರೋಗೆ ಅಭಿನಂದನೆಗಳು. ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ 4 ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತಕ್ಕೆ ಅಭಿನಂದನೆಗಳು. ಈ ಕಾರ್ಯಾಚರಣೆಯಲ್ಲಿ ನಿಮ್ಮ ಪಾಲುದಾರರಾಗಲು ನಮಗೆ ಸಂತೋಷವಾಗಿದೆ' ಎಂದು ತಿಳಿಸಿದ್ದಾರೆ.

ಈ ಸಂತೋಷದ ಸಂದರ್ಭದಲ್ಲಿ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, 'ಚಂದ್ರಯಾನ-3 ರ ವಿಜಯೋತ್ಸವವು 140 ಕೋಟಿ ಭಾರತೀಯರ ಆಕಾಂಕ್ಷೆಗಳು ಮತ್ತು ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳಿದ್ದಾರೆ.

ಚಂದ್ರಯಾನ-3 ಚಂದ್ರಯಾನ-2 ಗೆ ಫಾಲೋ-ಆನ್ ಮಿಷನ್ ಆಗಿದೆ. ಇದು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡಿದೆ. ಲ್ಯಾಂಡಿನ ಪ್ರಾರಂಭದಿಂದ ಕೊನೆಯವರೆಗೆ ಸಾಮರ್ಥ್ಯವನ್ನು ತೋರಿಸುವ ಗುರಿಯನ್ನು ಹೊಂದಿದೆ. ಇದು ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು ಒಳಗೊಂಡಿದೆ.

ಚಂದ್ರಯಾನ 3 ರೋವರ್ ಲ್ಯಾಂಡರ್‌ನಿಂದ ನಿರ್ಗಮಿಸಿದೆ. ಚಂದ್ರನ ಮೇಲ್ಮೈಯನ್ನು ಅನ್ವೇಷಿಸಲು ಪ್ರಾರಂಭಿಸಿದೆ ಎಂದು ಇಸ್ರೋ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+