Dr. Rajkumar: ಗೂಗಲ್‌ಗೂ ಗೊತ್ತು ಅಣ್ಣಾವ್ರ ಗತ್ತು
ಫೆಬ್ರವರಿ 21, ಬುಧವಾರ ವಿಶ್ವ ಮಾತೃಭಾಷೆ ದಿನ ಆಚರಿಸಲಾಗುತ್ತಿದೆ. ಗೂಗಲ್ ಇಂಡಿಯಾ ಕೂಡ ಭಾರತದ ಭಾಷೆಗಳನ್ನು ನೆನಪು ಮಾಡಿಕೊಂಡಿದೆ. ಈ ಸಂದರ್ಭದಲ್ಲೇ ಗೂಗಲ್ ಕನ್ನಡದ ಮೇರುನಟ ಡಾ. ರಾಜ್‌ಕುಮಾರ್ ಅವರನ್ನು ನೆನಪು ಮಾಡಿಕೊಂಡಿದೆ.
#StarwithAsearch ಹ್ಯಾಶ್‌ಟ್ಯಾಗ್‌ನೊಂದಿಗೆ ಡಾ. ರಾಜ್‌ಕುಮಾರ್ ಅವರ ಫೋಟೊವನ್ನು ಹಂಚಿಕೊಂಡಿದೆ. ಗೂಗಲ್‌ನಲ್ಲಿ ನೀವು ಅಣ್ಣಾ ಎಂದು ಟೈಪ್ ಮಾಡಿದರೆ, ಅಣ್ಣಾವ್ರು ಕಾಣಿಸಿಕೊಳ್ಳಲಿದೆ ಎಂದು ಹೇಳಿದೆ. ಕಸ್ತೂರಿ ನಿವಾಸ ಸಿನಿಮಾದ ರಾಜ್‌ಕುಮಾರ್ ಅವರ ಫೋಟೊವನ್ನು ಹಂಚಿಕೊಂಡಿದೆ.

ಅಣ್ಣಾ.. ಅಣ್ಣಾವ್ರು, ಕನ್ನಡದಲ್ಲಿ ಅಂತಹ ಪದಗಳು ಹೆಚ್ಚು ಇವೆ ಎಂದು ಜನರು ತಿಳಿದುಕೊಳ್ಳಲು ನೀವು ಕಾಯಲು ಸಾಧ್ಯವಿಲ್ಲವೇ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ ಎಂದು ಗೂಗಲ್ ಇಂಡಿಯಾ ಎಕ್ಸ್‌ನಲ್ಲಿ ಕನ್ನಡಿಗರನ್ನು ಕೇಳಿದೆ.
ವಿವಿಧ ರಾಜ್ಯಗಳ ವಿಶೇಷ ಖಾದ್ಯಗಳು, ಸಂಪ್ರದಾಯಗಳನ್ನು ಭಾಷೆಯ ಗುರುತಿಸಲು ಬಳಸಿರುವ ಗೂಗಲ್ ಇಂಡಿಯಾ, ಕನ್ನಡ ಭಾಷೆಯ ಗುರುತಾಗಿ ಡಾ. ರಾಜ್‌ಕುಮಾರ್ ಅವರನ್ನು ಬಳಸಿದೆ. ಕನ್ನಡಿಗರ ಪಾಲಿಗೆ ಡಾ. ರಾಜ್‌ಕುಮಾರ್ ಎಷ್ಟು ಮುಖ್ಯ ಎನ್ನುವುದನ್ನು ಗೂಗಲ್ ಇಂಡಿಯಾ ಕೂಡ ಅರ್ಥ ಮಾಡಿಕೊಂಡಿದೆ.
ಧನ್ಯವಾದ ಎಂದ ಅಭಿಮಾನಿಗಳು
ಅಣ್ಣಾವ್ರನ್ನು ನೆನಪಿಸಿಕೊಂಡು ಗೌರವಿಸಿ ಟ್ವೀಟ್ ಮಾಡಿದ ಗೂಗಲ್ ಇಂಡಿಯಾಗೆ ಅಭಿಮಾನಿಗಳು ಧನ್ಯವಾದ ಹೇಳಿದ್ದಾರೆ. ಡಾ. ರಾಜ್‌ಕುಮಾರ್ ಭಾರತದ ಜೇಮ್ಸ್ ಬಾಂಡ್ ಎಂದು ಅಭಿಮಾನಿಯೊಬ್ಬರು ಗೂಗಲ್ ಇಂಡಿಯಾ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ನಾಡು ಕಂಡ ಶ್ರೇಷ್ಠ ನಟ ಡಾ. ರಾಜ್‌ಕುಮಾರ್ ಎಂದು ಮತ್ತೊಬ್ಬ ಅಭಿಮಾನಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ನಾಡು, ನುಡಿಗಾಗಿ ಸದಾ ಮುಂದಿದ್ದ ಡಾ. ರಾಜ್‌ಕುಮಾರ್ ಕನ್ನಡದ ಶ್ರೇಷ್ಠ ನಟ, ಗಾಯಕ.
ಜಗತ್ತಿನಲ್ಲಿ ನಟರೊಬ್ಬರಿಗೆ ಅತಿ ಹೆಚ್ಚು ಅಭಿಮಾನಿಗಳ ಸಂಘ ಇರುವುದು ಡಾ. ರಾಜ್‌ಕುಮಾರ್ ಅವರಿಗೆ. ನಟರೊಬ್ಬರ ಅತಿ ಹೆಚ್ಚು ಪ್ರತಿಮೆಗಳು ಇರುವುದು ಡಾ. ರಾಜ್‌ಕುಮಾರ್ ಅವರದ್ದು. ಕನ್ನಡ ಭಾಷೆ ಇರುವವರೆಗೂ ಡಾ. ರಾಜ್‌ಕುಮಾರ್ ಕನ್ನಡಿಗರ ಮನಸ್ಸಿನಲ್ಲಿ ಸದಾ ಇರುತ್ತಾರೆ.
ನಟ, ನಿರ್ದೇಶಕ ರಾಜ್. ಬಿ ಶೆಟ್ಟಿ ಅವರು ಹೇಳಿದಂತೆ ಕನ್ನಡ ಅಂದ್ರೆ ರಾಜ್‌ಕುಮಾರ್, ರಾಜ್‌ಕುಮಾರ್ ಅಂದ್ರೆ ಕನ್ನಡ ಎರಡೂ ಬೇರೆ ಬೇರೆ ಅಲ್ಲ ಎನ್ನುವದನ್ನು ಗೂಗಲ್ ಇಂಡಿಯಾ ಮತ್ತೊಮ್ಮೆ ನೆನಪಿಸಿದೆ.












Click it and Unblock the Notifications