Shridevi 60th B.Day: ಹಿಂದಿ ನಟಿ ಶ್ರೀದೇವಿ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ
ಬೆಂಗಳೂರು, ಆಗಸ್ಟ್ 13: ಸೌಂದರ್ಯಕ್ಕೆ ಯುವ ನಟಿಯರಿಗೆ ಮಾದರಿಯಾಗಿದ್ದ ಬಾಲಿವುಡ್‌ನ ಹಿರಿಯ ನಟಿ ದಿ. ಶ್ರೀದೇವಿ ಅವರ 60ನೇ ಜನ್ಮದಿನ ಪ್ರಯುಕ್ತ 'ಗೂಗಲ್' ತನ್ನ ಲೋಗೊ (Google Dodal) ಬದಲಿಸುವ ಮಾಡುವ ಮೂಲಕ ನಟಿಗೆ ಗೌರವ ಸೂಚಿಸಿದೆ. ಶ್ರೀದೇವಿ ಅವರು ಲೇಡಿ ಸೂಪರ್ ಸ್ಟಾರ್ ಅಂತಲೂ ಫೇಮಸ್ ಆಗಿದ್ದರು.
ಗೂಗಲ್ ಡೂಡಲ್ ವರ್ಣರಂಚಿತವಾಗಿ ಬದಲಾವಣೆ ಮಾಡುವ ಜೊತೆಗೆ ಅದರಲ್ಲಿ ಶ್ರೀದೇವಿ ಅವರ ಪೋಟೊವನ್ನು ಸಹ ಇರಿಸಿದೆ. ಭಾನುವಾರ ಬೆಳಗ್ಗೆ ಹೀಗೆ ಗೂಗಲ್ ಲೊಗೋ (Google Logo) ಬದಲಾವಣೆ ಈ ಮೂಲಕ ದಿ. ನಟಿಗೆ ಗೌರವ ಸೂಚಿಸಿದರು.

ಮೂಲತಃ ದಕ್ಷಿಣ ಭಾರತದಲ್ಲಿ ಹುಟ್ಟಿ ಬೆಳೆದ ಶ್ರೀದೇವಿ ಅವರು ನೆಲೆ ಕಂಡು ಕೊಂಡಿದ್ದು ಮಾತ್ರ ಬಾಲಿವುಡ್ (ಹಿಂದಿ ಚಿತ್ರರಂಗ) ನಲ್ಲಿ. ಅವರಿಗೆ ಚಿತ್ರನಿರ್ಮಾಪಕ ಬೋನಿ ಕಪೂರ್ ಪತಿ ಹಾಗೂ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶ್ರೀದೇವಿಯವರ ಕಟುಂಬ ಬಾಲಿವುಡ್‌ನಲ್ಲಿ ಸಕ್ರಿಯವಾಗಿದೆ.
ಶ್ರೀದೇವಿ ಪೂರ್ಣ ಹೆಸರೇನು?
ದಶಕಗಳಿಂದ ಬಾಲಿವುಡ್‌ನಲ್ಲಿ ಮಿಂಚಿದ್ದ ನಟಿ ಶ್ರೀದೇವಿ ಅವರು ದಕ್ಷಿಣ ಭಾರತದ ತಮಿಳನಾಡು ರಾಜ್ಯದ ಮೀನಂಪಟ್ಟಿ ಎಂಬ ಗ್ರಾಮೀಣ ಪ್ರದೇಶದಲ್ಲಿ 1963ರಲ್ಲಿ ಜನಿಸಿದರು. ಶ್ರೀದೇವಿ ಅವರ ಪೂರ್ಣ ಹೆಸರು ಶ್ರೀ ಅಮ್ಮ ಯಂಗೇರ್ ಅಯ್ಯಪ್ಪನ್. ತಮ್ಮ 4ನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಪ್ರದರ್ಶಕಿಯಾಗಿಯು ಕೆಲಸ ಮಾಡಿದ್ದರು.
ದಕ್ಷಿಣ ಭಾರತದ ಭಾಗದಿಂದ ಸಿನಿಮಾ ಜೀವನ ಆರಂಭಿಸಿದ ಅವರಿಗೆ ಹಿಂದಿ ಚಿಂತ್ರರಂಗ ಕೈ ಬೀಸಿ ಕರೆಯಿತು. ಸಾಲು ಸಾಲು ಚಿತ್ರಗಳನ್ನು ನೀಡುವ ಮೂಲಕ ಅಭಿಮಾನಿಗಳ ಫೇವರೇಟ್ ನಟಿಯಾದರೂ. ಬಾಲಿವುಡ್‌ನಲ್ಲಿಯೇ ನೆಲೆ ಕಂಡು ಕೊಂಡರು.

ಬಾಲನಟಿಯಾಗಿ ಬಾಲಿವುಡ್ ಪ್ರವೇಶ
ರಾಣಿ ಮೇರಾ ನಾಮ್‌ನಲ್ಲಿ ಬಾಲನಟಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಶ್ರೀದೇವಿ ಅವರು 1967ರಲ್ಲಿ 'ಕಂದನ್ ಕರುನೈ' ಎಂಬ ತಮಿಳು ಚಿತ್ರಕ್ಕೆ ಬಣ್ಣ ಹಚಿದರು. ಇದು ಅವರ ಸಿನಿಮಾಲೋಕದ ಮೊದಲ ಸಿನಿಮಾ ಆಗಿದೆ. ನಂತರ ಅವರು ಒಂದರ ಹಿಂದೊಂದರಂತೆ ಮೊದಲು ತಮಿಳು ನಂತರ ತೆಲುಗು, ಮಲಯಾಲಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು. ಅನೇಕ ಸ್ಟಾರ್ ನಟರ ಜೊತೆಗೆ ಅವರು ನಟಿಸಿದರು. ಈ ಮೂಲಕ ಅನೇಕ ವರ್ಷಗಳ ಕಾಲ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದ ನಟಿಯರಲ್ಲಿ ಇವರು ಪ್ರಮುಖರು.
'ಸೋಲ್ವ ಸಾವನ್' ಸಿನಿಮಾ ಶ್ರೀದೇವಿಯವರ ಮೊದಲ ಹಿಂದಿ ಚಿತ್ರವಾಗಿದೆ. ಅವರಿಗೆ 19 ವಯಸ್ಸು ತುಂಬುವಷ್ಟರಲ್ಲಿ ಸಾಲು ಸಾಲು ಚಿತ್ರಗಳು ಅವರ ಕೈಯಲ್ಲಿದ್ದವು. ಹೀಗೆ ಅನೇಕ ಪ್ರಭಾವಿ ಪಾತ್ರಗಳನ್ನು ಮಾಡಿ ಅಭಿಮಾನಿಗಳ ಮನದಲ್ಲಿ ಉಳಿದಿದ್ದ ಶ್ರೀದೇವಿ ಅವರು, ಐದು ವರ್ಷಗಳ ಹಿಂದೆ 2018 ರ ಫೆಬ್ರುವರಿಯಲ್ಲಿ ದುಬೈನ ನಿಧನರಾದರು. ಬಾತ್‌ರೂಮಿನ ಟಬ್‌ನಲ್ಲಿ ಅವರು ಶವ ಪತ್ತೆಯಾಗಿತ್ತು. ಅವರ ಅಕಾಲಿಕ ಸಾವು ನಿಗೂಢತನದಿಂದ ಕೂಡಿತ್ತು. ಸಾವಿನ ಸುದ್ದಿ ತಿಳಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು.












Click it and Unblock the Notifications