Ram Mandir Google Trends: ಗೂಗಲ್‌ನಲ್ಲೂ ಟ್ರೆಂಡ್ ಆಯ್ತು ರಾಮ ಮಂದಿರ: ದಾಖಲೆ ಬರೆದ ಆಯೋಧ್ಯೆ!
ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರವು ಕೋಟಿಗಟ್ಟಲೆ ರಾಮಭಕ್ತರ ಹೃದಯದಲ್ಲಿ ನೆಲೆಸಿದ್ದು ಮಾತ್ರವಲ್ಲದೆ ಗೂಗಲ್‌ನಲ್ಲಿಯೂ ಭಾರೀ ಸದ್ದು ಮಾಡುತ್ತಿದೆ. ಇಂದು ಮುಂಜಾನೆ 4 ಗಂಟೆಯಿಂದ ಗೂಗಲ್‌ನಲ್ಲಿ ರಾಮ ಮಂದಿರದ ಹುಡುಕಾಟಗಳು ನಿರಂತರವಾಗಿ ಹೆಚ್ಚುತ್ತಿವೆ.
ವಾಸ್ತವವಾಗಿ ಇಂದು (ಜನವರಿ 22, 2024) ಅಯೋಧ್ಯೆಯ ರಾಮಮಂದಿರದಲ್ಲಿ ಮಧ್ಯಾಹ್ನ 12:05 ರಿಂದ 1 ಗಂಟೆಯವರೆಗೆ ರಾಮ್ ಲಾಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ದೇಶ ವಿದೇಶದಲ್ಲಿನ ಗಣ್ಯರಿಗೆ, ಕ್ರೀಡಾಪಟುಗಳಿಗೆ, ಸಿನಿ ತಾರೆಯರಿಗೆ, ಹಿರಿಯ ಸಾಧು ಸಂತರಿಗೆ, ರಾಜಕಾರಣಿಗಳು ಸೇರಿದಂತೆ ಇತರರಿಗೂ ಈ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ಗೂಗಲ್ ಟ್ರೆಂಡ್‌ಗಳಲ್ಲಿ ರಾಮಮಂದಿರ:
ಈ ಸಮಯದಲ್ಲಿ ಇಡೀ ದೇಶ ರಾಮನ ಹೆಸರಿನಲ್ಲಿದೆ. 'ರಾಮ ಬಂದರೆ ದೀಪಾವಳಿ' ಎನ್ನುತ್ತಾ ಇಂದು ದೀಪ ಬೆಳಗಿಸಿ ಸಂಭ್ರಮಿಸಲು ಜನ ಸಿದ್ಧತೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಜನ ಕಾತುರರಾಗಿ ಕಾಯುತ್ತಿದ್ದಾರೆ.
ಈ ನಡುವೆ ಗೂಗಲ್ ನಲ್ಲೂ ರಾಮಮಂದಿರ ಟ್ರೆಂಡ್‌ನಲ್ಲಿದೆ. ಇಂದು ಬೆಳಿಗ್ಗೆಯಿಂದಲೇ ಲಕ್ಷಾಂತರ ಜನ ರಾಮಮಂದಿರದ ಬಗ್ಗೆ ಗೂಗಲ್ ಸರ್ಚ್ ಮಾಡುತ್ತಿರುವುದು ಹೆಚ್ಚಾಗಿದೆ. ಜನವರಿ 22 ರಂದು ಅಂದರೆ ಇಂದು ಬೆಳಿಗ್ಗೆಯಿಂದಲೂ ಜನರು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದ ತಕ್ಷಣ ರಾಮ ಮಂದಿರದ ಬಗ್ಗೆ ಹುಡುಕಲು ಪ್ರಾರಂಭಿಸಿರುವುದು ಕಂಡುಬಂದಿದೆ.
ದಿನ ಕಳೆದಂತೆ ಕಳೆದ ಹಲವು ವರ್ಷಗಳ ಹುಡುಕಾಟದ ದಾಖಲೆಗಳನ್ನು ಮುರಿಯುವಷ್ಟು ಗೂಗಲ್‌ನಲ್ಲಿ ರಾಮಮಂದಿರದ ಬಗೆಗಿನ ವಿಷಯಗಳ ಹುಡುಕಾಟ ನಡೆಯಲಿದೆ. ಆ ಮಟ್ಟಿಗೆ ರಾಮ ಮಂದಿರದ ಬಗ್ಗೆ ಜನ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ. ಇದು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ.
ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ರಾಮ್ ಲಲ್ಲಾನ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭಕ್ಕೆ ಸದ್ಯ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಮೋದಿ ಅವರು 5 ಆಗಸ್ಟ್ 2020 ರಂದು ರಾಮಮಂದಿರದ ಶಂಕುಸ್ಥಾಪನೆ ಮಾಡಿದರು. ಆಗಲೂ ರಾಮ ಮಂದಿರವು ಗೂಗಲ್ ಟ್ರೆಂಡ್‌ಗಳಲ್ಲಿ ಸೇರಿಕೊಂಡಿತ್ತು.

ರಾಮಮಂದಿರದ ಬಗ್ಗೆ ಟಾಪ್ 10 ಟ್ರೆಂಡ್ ಗೂಗಲ್ ಹುಡುಕಾಟದ ವಿಷಯಗಳು ಹೀಗಿವೆ:-
1. ರಾಮಮಂದಿರದ ಪ್ರಾರ್ಥನೆ ಸಮಯ (ram mandir pran-pratishtha time )
2. ರಾಮಮಂದಿರ ಅಯೋಧ್ಯೆಯ ನೇರ ಪ್ರಸಾರದ ಸಮಯ (ram mandir ayodhya live telecast time)
3. ರಾಮಮಂದಿರ ನೇರ ಪ್ರಸಾರದ ಸಮಯ (ram mandir live telecast time)
4. ರಾಮಮಂದಿರದ ನೇರ ಪ್ರಸಾರ (live telecast of ram mandir )
5. ರಾಮಮಂದಿರ ನೇರ ಪ್ರಸಾರ (ram mandir live telecast)
6. ರಾಮಮಂದಿರ ಅಯೋಧ್ಯೆ ನೇರ ಪ್ರಸಾರ (ram mandir ayodhya live telecast)
7. ರಾಮಮಂದಿರ ಪ್ರಾಣ ಪ್ರತಿಷ್ಠಾ ಶುಭಾಶಯಗಳು (ram mandir pran pratishtha wishes)
8. ರಾಮಮಂದಿರದ ಶುಭಾಶಯಗಳು (ram mandir wishes)
9.ರಾಮ ಮಂದಿರ ಉದ್ಘಾಟನೆ ಸಮಯ (ram mandir inauguration time)
10. 22 ಜನವರಿ 2024 ರಾಮಮಂದಿರ ಸ್ಥಿತಿ ವೀಡಿಯೊ ಡೌನ್‌ಲೋಡ್ (22 january 2024 ram mandir status video download)
ಈ ದೇಶಗಳಲ್ಲೂ ರಾಮ ಮಂದಿರದ ಬಗ್ಗೆ ಸರ್ಚ್: -
ಇಡೀ ಭಾರತ ರಾಮನಿಗೆ ಸಮರ್ಪಿತವಾಗಿರುವುದು ಮಾತ್ರವಲ್ಲ, ಹೊರ ದೇಶಗಳಲ್ಲೂ ಈ ರಾಮಮಂದಿರದ ಬಗ್ಗೆ ಸಾಕಷ್ಟು ಹುಡುಕಾಟಗಳು ನಡೆಯುತ್ತಿವೆ. ಭಾರತದ ಹೊರತಾಗಿ ಮಾರಿಷಸ್, ನೇಪಾಳ, ಯುಎಇ, ಸಿಂಗಾಪುರ, ಕೆನಡಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಮಲೇಷ್ಯಾ ಮುಂತಾದ ದೇಶಗಳಲ್ಲಿ ರಾಮಮಂದಿರ ಮೊದಲ ಹತ್ತು ಹುಡುಕಾಟಗಳಲ್ಲಿ ಸೇರಿದೆ.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
War Updates: ಇರಾನ್ಗೆ ಟ್ರಂಪ್ ವಾರ್ನಿಂಗ್: ತೈಲ ಮಾರ್ಗ ಬಂದ್ ಮಾಡಿದರೆ ದೇಶವೇ ಸರ್ವನಾಶ, ಇಂದಿನ ಪ್ರಮುಖಾಂಶಗಳು -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್












Click it and Unblock the Notifications