Google For India 2023: 'ಯೂಟ್ಯೂಬ್'ನಲ್ಲಿ ಹೊಸ ವೈಶಿಷ್ಟ್ಯತೆ: 'ಪಿಕ್ಸೆಲ್' ಫೋನ್ ದೇಶಿಯ ಉತ್ಪಾದನೆ ಸಜ್ಜು
ನವದೆಹಲಿ, ಅಕ್ಟೊಬರ್ 20: ನವದೆಹಲಿಯಲ್ಲಿ ಗುರುವಾರ ನಡೆದ ಗೂಗಲ್ ಫಾರ್ ಇಂಡಿಯಾ 2023 ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಸರ್ಚ್ ಎಂಜಿನ್ ಆಗಿರುವ ಗೂಗಲ್ (Google) ಹಲವು ವೈಶಿಷ್ಟ್ಯತೆಗಳನ್ನು ಘೋಷಿಸಿದೆ. ಈ ಪೈಕಿ ಗೂಗಲ್ ಮಾಲೀಕತ್ವದ 'ಯೂಟ್ಯೂಬ್' (Youtube)ನಲ್ಲಿ ನಲ್ಲಿ ಸುದ್ದಿ ಹುಡುಕಾಟಕ್ಕಾಗಿ ಹೊಸ ಆಯ್ಕೆಯನ್ನು ಪರಿಚಯಿಸಲಿದೆ.
ಮುಂದಿನ ದಿನಗಳಲ್ಲಿ 'ಯೂಟ್ಯೂಬ್‌ನ ಪರದೆಯಲ್ಲಿ 'ವೀಕ್ಷಣೆ ಪುಟ' (Watch Page News) ಅನ್ನು ಭಾರತದಲ್ಲಿ ತನ್ನ ಗ್ರಾಹಕರಿಗೆ ವಿಶ್ವಾಸಾರ್ಹ ಸುದ್ದಿ ಮೂಲಗಳ ಹುಡುಕಾಟಕ್ಕಾಗಿ ಪರಿಚಯಿಸಲು ಗೂಗಲ್ ನಿರ್ಧರಿಸಿದೆ. ಅಲ್ಲದೇ ಈ ಪುಟ ತೆರೆದರೆ ಅಲ್ಲಿ ನಂಬಿಕಾರ್ಹ ಸುದ್ದಿವಾಹಿನಿಗಳಿಂದ ವೀಡಿಯೊಗಳನ್ನು ಶಿಫಾರಸು ಮಾಡಲಿದೆ. ಇದು ಆದಷ್ಟು ಶೀಘ್ರವೇ ಯೂಟ್ಯೂಬ್‌ನಲ್ಲಿ ಹೊಸ ಆಯ್ಕೆಯಾಗಿ ಬಳಕೆದಾರರು ದೊರೆಯಲಿದೆ.

ಭಾರತದಲ್ಲಿ ಸರ್ಚ್ ಇಂಜಿನ್ ಮಾರುಕಟ್ಟೆ ಸರಿಸುಮಾರು 99 ರಷ್ಟು ಗೂಗಲ್ ಪ್ರಾಬಲ್ಯ ಹೊಂದಿದೆ. ಇದರಲ್ಲಿ ಬಳಕೆದಾರರು ಸುದ್ದಿಗಳು ವಿಡಿಯೋ ಫೋಟೊಗಳ ಸೇರಿದಂತೆ ಅನೇಕ ವಿಷಯಗಳ ಕುರಿತು ಹುಡುಕಾಟ ನಡೆಸುತ್ತಾರೆ. ಅವರಿಗಾಗಿ ಮುಂದಿನ ದಿನಗಳಲ್ಲಿ ಗೂಗಲ್ ಈ ಯೂಟ್ಯೂಬ್ ನಲ್ಲಿ ವಾಚ್ ಪೇಜ್ ಫಾರ್ ನ್ಯೂಸ್ ಅನ್ನು ಪರಿಚಯ ಮಾಡಲಿದೆ.
ಯೂಟ್ಯೂಬ್ ಸುದ್ದಿ, ವಿಡಿಯೋ, ಫೋಟೊ ಶಿಫಾರಸು
ಯೂಟ್ಯೂಬ್ ನಲ್ಲಿ ವಾಚ್ ಪೇಜ್ ಜೊತೆಗೆ ಬೇರೆ ಬೇರೆ ವೈಶಿಷ್ಟ್ಯಗಳು ಈ ಕಾರ್ಯಕ್ರಮದಲ್ಲಿ ಪ್ರಕಟವಾಗಿವೆ. ವಿಷಯಾಧಾರಿತ ಸುದ್ದಿ, ಫೋಟೊ, ಇಲ್ಲವೇ ವಿಡಿಯೋಗಳನ್ನು ಹಡುಕುವವರಿಗೆ ಹೊಸ ವಿಧಾನಗಳನ್ನು ನೀಡಿದೆ. ಈ ಮೂಲಕ ಉತ್ತಮ ಅನುಭವ ನೀಡಲು ಮುಂದಾಗಿದೆ.
ಉದಾಹರಣೆಗೆ ಅಡುಗೆ ಕಲಿಯಲು ಇಚ್ಚಿಸಿ ಯೂಟ್ಯೂಬ್‌ನಲ್ಲಿ ಹುಡುಕಾಟ ನಡೆಸಿದರೆ, ಅಂತದ್ದೆ ವಿಷಯಗಳ ಕುರಿತು ಮಾರ್ಗದರ್ಶನ ಮಾಡಲಿದೆ. ಚಿತ್ರಗಳು, ವಿಡಿಯೋಗಳನ್ನು, ಎಐ ಚಾಲಿತ ಅವಲೋಕನಗಳನ್ನು ಪ್ರದರ್ಶಿಸಲಾಗುತ್ತದೆ. ಒಟ್ಟು ದೇಶದ 11 ಭಾಷೆಗಳಲ್ಲಿ ಯೂಟ್ಯೂಬ್ ಮಾಹಿತಿ ನೀಡಲಿದೆ.
ಭಾರತದಲ್ಲಿ ಗೂಗಲ್ ಪಿಕ್ಸೆಲ್ 8 ತಯಾರಿಕೆ
ಭಾರತದಲ್ಲಿ ಗೂಗಲ್ ಪಿಕ್ಸೆಲ್ 8 ಆವೃತ್ತಿಯ ಸ್ಮಾರ್ಟ್‌ಫೊನ್ ಅನ್ನು ಉತ್ಪಾದನೆ ಮಾಡುವುದಾಗಿ ಗೂಗಲ್ ಘೋಷಣೆ ಮಾಡಿದೆ. ಇದೇ ಅಕ್ಟೋಬರ್ ತಿಂಗಳಲ್ಲಿ ಗೂಗಲ್ ತನ್ನ ಪಿಕ್ಸೆಲ್ 8 ಸರಣಿ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಈ ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ತಯಾರಿಕೆ ಯೋಜಿಸಿದ್ದರ ಬಗ್ಗೆ ಸ್ವತಃ ಗೂಗಲ್ ಪ್ರಕಟಿಸಿದೆ. ಮುಂದಿನ 2024ರಲ್ಲಿ ಗ್ರಾಹಕರಿಗೆ ಗೂಗಲ್ ಫಿಕ್ಸೆಲ್ ಸ್ಮಾರ್ಟ್ ಫೋನ್ ಸದೇಶಿಯ ಉತ್ಪನ್ನವಾಗಿ ಸಿಗಲಿದೆ.

ಇದಷ್ಟೇ ಅಲ್ಲದೇ ವ್ಯಾಪಾರಿಗಳಿಗೆ ಕ್ರೇಡಿಟ್ ಲೈನ್ ಒದಗಿಸಲು Google Pay ePayLater ಜೊತೆಗೆ ಪಾಲುದಾರಿಕೆ ಹೊಂದಿದೆ. ಅನುಕೂಲಕರ ಮರುಪಾವತಿ ಆಯ್ಕೆಗಳನ್ನು ನೀಡಿದ್ದು, ₹15,000 ಆರಂಭಿಕ ಸಾಲ, ಮರುಪಾವತಿಗಾಗಿ ಡಿಎಂಐ ಫೈನಾನ್ಸ್ ಕಂಪನಿ ಜೊತೆಗೆ ಸಹಯೋಗ ಹೊಂದಿದೆ.
ಗ್ರಾಹಕ ಒಂದಷ್ಟು ಕೊಡುಗೆ ಘೋಷಿಸಿರುವ ಗೂಗಲ್ ಆಕ್ಸಿಸ್ ಬ್ಯಾಂಕ್‌ನ ವೈಯಕ್ತಿಕ ಸಾಲಗಳ ವೇದಿಕೆಗೆ ಸೇರಿಸುವ ಮೂಲಕ ಗೂಗಲ್ ಪೇ ತನ್ನ ವೈಯಕ್ತಿಕ ಸಾಲಗಳ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದೆ ಎಂದು ಗೂಗಲ್ ತಿಳಿಸಿದೆ.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications