ಗೂಗಲ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಬೆಂಗಳೂರು ಉಬರ್‌ ಚಾಲಕ!

ಬೆಂಗಳೂರು, ಅಕ್ಟೋಬರ್‌ 26: ಸಣ್ಣ ಕಂಪೆನಿಯಿಂದ ಮಲ್ಟಿ ನ್ಯಾಷನಲ್‌ ಕಂಪೆನಿಯಲ್ಲಿ ಕೆಲಸ ಗಿಟ್ಟಿಸುವುದು ಪ್ರತಿಯೊಬ್ಬ ಖಾಸಗಿ ಉದ್ಯೋಗಿಗಳ ಕನಸು. ಆದರೆ ಇಲ್ಲೊಂದು ವಿಚಿತ್ರ ಉದಾಹರಣೆ ಇದೆ. ಪ್ರತಿಷ್ಠಿತ ಗೂಗಲ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಬೆಂಗಳೂರಿನಲ್ಲಿ ಉಬರ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.

ಹೈದರಾಬಾದ್‌ನಲ್ಲಿ ಗೂಗಲ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಐಟಿ ವೃತ್ತಿಪರರೊಬ್ಬರು ಬೆಂಗಳೂರಿಗೆ ಸ್ಥಳಾಂತರವಾಗಿದ್ದಾರೆ. ಬೆಂಗಳೂರನ್ನು ಸಾಮಾನ್ಯವಾಗಿ ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ಇದು ಕೇವಲ ಟೆಕ್ ದೈತ್ಯರು ಮತ್ತು ಐಟಿ ವೃತ್ತಿಪರರ ಕೇಂದ್ರವಾಗಿರದೆ ವೈವಿಧ್ಯಮಯ ಮತ್ತು ಸ್ಪೂರ್ತಿದಾಯಕ ಕಥೆಗಳ ನಿಧಿಯಾಗಿದೆ.

uber-driver-in-bengaluru

ಬಾಡಿಗೆ ಬೈಕ್‌ ಸೇವೆಯ ಬಳಕೆದಾರರಾದ ರಾಘವ್ ದುವಾ ಎಂಬ ಎಕ್ಸ್‌ ಬಳಕೆದಾರರು ಈ ವಿಶಿಷ್ಟ ಕಥೆಯನ್ನು ಹಂಚಿಕೊಂಡಿದ್ದಾರೆ. ಉಬರ್ ಡ್ರೈವರ್‌ ಒಬ್ಬರೊಂದಿಗೆ ತಮ್ಮ ಸವಾರಿಯನ್ನು ಮಾಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಬಲು ಬಯಕೆಯಿಂದ ಚಾಲಕನು ಕೇವಲ 20 ದಿನಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾನೆ ಎಂಬ ಕಥೆಯನ್ನು ತಿಳಿಸಿದ್ದಾನೆ.

ದುವಾ ಅವರ ಪೋಸ್ಟ್ ಪ್ರಸಾರವಾಗುತ್ತಿದ್ದಂತೆ ಸಾಮಾಜಿಕ ಬಳಕೆದಾರರಲ್ಲಿ ಕುತೂಹಲವನ್ನು ಹುಟ್ಟುಹಾಕಿತು. ಅವರು ಬೆಂಗಳೂರಿನಲ್ಲಿ ತಮ್ಮ ಸ್ವಂತ ಅನುಭವಗಳನ್ನು ಕುತೂಹಲದಿಂದ ಹಂಚಿಕೊಂಡರು. ಒಬ್ಬ ಬಳಕೆದಾರರು ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, ಇದು ನಿಜವಾಗಿಯೂ ಆಕರ್ಷಕವಾಗಿದೆ. ನಿಮ್ಮ ಸವಾರಿಯ ಸಮಯದಲ್ಲಿ ನೀವು ಕೆಲವು ಆಕರ್ಷಕ ಸಂಭಾಷಣೆಗಳಲ್ಲಿ ತೊಡಗಿರುವಿರಿ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು ನನಗೂ ಇದೇ ರೀತಿಯ ಅನುಭವವಾಗಿದೆ ಎಂದು ಹೇಳಿದರು.

ಈ ಘಟನೆಯು ಮತ್ತೊಂದು 'ಪೀಕ್ ಬೆಂಗಳೂರು' ಕ್ಷಣವಾಗಿ ಮಾರ್ಪಟ್ಟಿತು. ಗೂಗಲ್‌ನಲ್ಲಿ ಪ್ರತಿಷ್ಠಿತ ಸ್ಥಾನದಿಂದ ಉಬರ್ ಮೋಟೋ ಡ್ರೈವರ್ ಆಗಿ ಬದಲಾದದ್ದು ಮಾತ್ರ ವಿಧಿ ಆಟವೇ ಸರಿ. ಚಾಲಕ ತಾನೇ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+