Most Googled Recipes 2023: ಗೂಗಲ್‌ನಲ್ಲಿ ಅತೀ ಹೆಚ್ಚು ಕೆದಕಿದ ರೆಸಿಪಿಗಳಿವು, ಸಂಪೂರ್ಣ ಪಟ್ಟಿ ಇಲ್ಲಿದೆ ತಿಳಿಯಿರಿ
ಸಾಮಾನ್ಯವಾಗಿ ವರ್ಷ ಕಳೆದು ಹೊಸವರ್ಷ ಬರುತ್ತಲೇ ಇರುತ್ತವೆ. ಹಾಗೆಯೇ ಇದೀಗ ಇನ್ನು ಕೇವಲ 15ಗಳು ಕಳೆದರೆ ಸಾಕು 2023 ಮುಗಿದು 2024ನೇ ವರ್ಷಕ್ಕೆ ನಾವೆಲ್ಲರೂ ದಾಪುಗಾಲಿಡುತ್ತೇವೆ. ಆದರೆ ಹಿಂದಿನ ವರ್ಷದಲ್ಲಿ ಏನೆಲ್ಲ ಆಗಿವೆ ಎನ್ನುವ ಮಾಹಿತಿಯನ್ನು ನಾವು ಮೆಲುಕು ಹಾಕಬೇಕಾಗುತ್ತದೆ. ಹಾಗೆಯೇ 2023ರಲ್ಲಿ ಗೂಗಲ್‌ನಲ್ಲಿ ಜನರು ಅತೀ ಹೆಚ್ಚಾಗಿ ಸರ್ಚ್ ಮಾಡಿರುವ ಟಾಪ್ ರೆಸಿಪಿಗಳ ಪಟ್ಟಿಯನ್ನು ಇಲ್ಲಿ ವಿವರ ಸಹಿತ ನೀಡಲಾಗಿದೆ ಗಮನಿಸಿ.
* ಮಾವಿನ ಕಾಯಿ ಅಥವಾ ಹಣ್ಣಿನಲ್ಲಿ ತಯಾರಾಗುವ ರೆಸಿಪಿಗಳು
ದೇಶದಲ್ಲಿ ಮಾವಿನ ಹಣ್ಣನ್ನು ಇಷ್ಟಪಟ್ಟು ತಿನ್ನುವ ಹಾಗೆ ಬೇರೆಲ್ಲಿಯೂ ಇಷ್ಟಪಡಲಾರರು. ಭಾರತೀಯರಿಗೆ ಮಾವಿನಕಾಯಿ ಅಂದರೆ ಒಂದು ರೀತಿಯ ವಿಶೇಷ ತಿಂಡಿಯಂತೆ ಚಪ್ಪರಿಸಿ ತಿನ್ನುತ್ತಾರೆ. ಇದು ನೋಡುಗರ ಬಾಯಲ್ಲಿ ನೀರೋರಿಸುವಂತಿತ್ತದೆ. ಸಲಾಡ್ಗಳು, ಸ್ಮೂಥಿಗಳು, ಪಲ್ಯಗಳಿಂದ ಹಿಡಿದು, ಉಪ್ಪಿನಕಾಯಿವರೆಗೆ, ಈ ಹಣ್ಣು ಅಥವಾ ಕಾಯಿ ಅಸಂಖ್ಯಾತ ರೆಸಿಪಿಗಳ ತಯಾರಿಕೆಗಳಲ್ಲಿ ಕಂಡು ಬರುತ್ತದೆ.

ಮಾವಿನ ಹಣ್ಣುಗಳು ಎಲ್ಲಿಯೂ ಕಾಣಿಸದ ಋತುವಿನಲ್ಲಿಯೂ, ಮಾವಿನ ಉಪ್ಪಿನಕಾಯಿ ನಮ್ಮ ಊಟದ ಪರಿಪೂರ್ಣ ಸಂಗಾತಿ ಆಗುತ್ತದೆ. ಮಾವಿನ ಉಪ್ಪಿನಕಾಯಿ ಪಾಕವಿಧಾನವು 2023ರಲ್ಲಿ ಭಾರತದಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಿದ ರೆಸಿಪಿಗಳಲ್ಲಿ ಮೊದಲ ಸ್ಥಾನದಲ್ಲಿದೆ.
* ಸೆಕ್ಸ್ ಆನ್ ದಿ ಬೀಚ್ ಪಾನೀಯ
ಜನಪ್ರಿಯ ಪಾನೀಯವು ಅದರ ದೃಶ್ಯ ಆಕರ್ಷಣೆ ಮತ್ತು ಸಿಹಿ ಹಾಗೂ ಗಾಢ ರುಚಿಯಿಂದಾಗಿ ಕಾಕ್ಟೈಲ್ ಉತ್ಸಾಹಿಗಳಿಗೆ ಹೆಚ್ಚು ಮೆಚ್ಚುಗೆ ಆಗುತ್ತದೆ. ಫ್ಲೋರಿಡಾದ ಕಾನ್ಫೆಟ್ಟಿಸ್ ಬಾರ್ನ ಬಾರ್ಟೆಂಡರ್ ಎನ್ನುವವರು ವೋಡ್ಕಾ, ಪೀಚ್ ಸ್ಕ್ನಾಪ್ಸ್, ಕಿತ್ತಳೆ ರಸ ಮತ್ತು ಕ್ರ್ಯಾನ್ಬೆರ್ರಿ ರಸದ ಮಿಶ್ರಣವಾದ ಈ ಪಾನೀಯವನ್ನು 1987ರಲ್ಲಿ ಆವಿಷ್ಕಾರಗೊಳಿಸಿದರು.
ಬಳಿಕ ಅವರು ಕೆಲವು ಹಣ್ಣಿನ ಕಾಕ್ಟೈಲ್ ಅನ್ನು ತಯಾರಿಸಿದರು. ಮತ್ತು ಅದನ್ನು ಸೆಕ್ಸ್ ಆನ್ ದಿ ಬೀಚ್ ಎಂದು ಹೆಸರಿಸಿದ್ದಾರೆ. ಈ ಪಾನೀಯದ ಗುರಿ ಹೆಚ್ಚು ಮಾರುಕಟ್ಟೆಗಳಲ್ಲಿ ಮಾರಟ ಆಗುತ್ತಿತ್ತು ಎನ್ನಲಾಗಿದೆ. ಇನ್ನು ಗೂಗಲ್‌ನಲ್ಲಿ 2023ರಲ್ಲಿ ಅತೀ ಹೆಚ್ಚು ಸರ್ಚ್ ಮಾಡಿದ ಪಟ್ಟಿಯಲ್ಲಿ ಈ ಪಾಕ ವಿಧಾನವು 2ನೇ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.
* ಪಂಚಾಮೃತ ಪಾಕ ವಿಧಾನ
ಪಂಚಾಮೃತವು ಭಾರತದಲ್ಲಿ ಮಾಡುವ ಪವಿತ್ರ ಪಾನೀಯವಾಗಿದ್ದು, ಇದನ್ನು ಶುಭ ಕಾರ್ಯಗಳಲ್ಲಿ, ಹೆಚ್ಚಾಗಿ ಪೂಜಾ ಸಮಾರಂಭಗಳಲ್ಲಿ ತಯಾರಿ ಮಾಡಲಾಗುತ್ತದೆ. ಇದನ್ನು ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಸೇರಿದಂತೆ 5 ಅಥವಾ ಪಂಚ ಪದಾರ್ಥಗಳಿಂದ ತಯಾರಿ ಮಾಡಲಾಗುತ್ತದೆ.
ಇದನ್ನು ಮೊದಲು ದೇವಸ್ಥಾನಗಳಲ್ಲಿನ ದೇವರು ಅಥವಾ ದೇವತೆಗೆ ಅರ್ಪಿಸಲಾಗುತ್ತದೆ. ನಂತರ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಪಂಚಾಮೃತವು ಅದರ ಆರೋಗ್ಯಕರ ಪದಾರ್ಥಗಳ ಮಿಶ್ರಣದೊಂದಿಗೆ ಉಪವಾಸದ ಸಮಯದಲ್ಲಿ ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ. ಅಲ್ಲದೆ ರೋಗನಿರೋಧಕ ಶಕ್ತಿ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
* ಹಕುಸಾಯಿ ಪಾಕ
ಉಪ್ಪು ಮತ್ತು ಉಪ್ಪಿನಕಾಯಿ ಜೊತೆಗೆ ಹಕುಸಾಯಿಯನ್ನು ಅನ್ನದೊಂದಿಗೆ ಆನಂದಿಸಬಹುದು ಅಥವಾ ಸೈಡ್ ಡಿಶ್ ಆಗಿ ಆನಂದಿಸಬಹುದಾಗಿದೆ. ಇದನ್ನು ನಾಪಾ ಎಲೆಕೋಸು, ಕ್ಯಾರೆಟ್, ಕೊಂಬು, ಒಣಗಿದ ಜಪೋನ್ ಮತ್ತು ಕೋಷರ್ ಉಪ್ಪಿನಿಂದ ತಯಾರು ಮಾಡಲಾಗುತ್ತದೆ. ನಾಪಾ ಎಲೆಕೋಸು ಒಂದು ಚೀನೀ ಎಲೆಕೋಸು, ಇದು ಬೀಜಿಂಗ್ ಬಳಿ ಹುಟ್ಟಿಕೊಂಡಿತು. ಮತ್ತು ಪೂರ್ವ ಏಷ್ಯಾದ ಪಾಕಪದ್ಧತಿಯಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಸಾಂಪ್ರದಾಯಿಕ ಕೊರಿಯನ್ ಖಾದ್ಯವಾದ ಕಿಮ್ಚಿಯನ್ನು ತಯಾರಿಸಲು ನಾಪಾ ಎಲೆಕೋಸನ್ನು ಸಹ ಬಳಸಲಾಗುತ್ತದೆ.
* ಧನಿಯಾ ಪಂಜಿರಿ ಪಾಕ
ಹಬ್ಬ ಮತ್ತು ಉಪವಾಸದ ಸಮಯದಲ್ಲಿ ಜನಪ್ರಿಯ ಆಹಾರವಾದ ಮತ್ತು ದೇವರಿಗೆ ನೈವೇದ್ಯಕ್ಕೆ ಇಡುವ ಧನಿಯಾ ಪಂಜಿರಿ ಆಹಾರವು ನಿಮಗೆ ರುಚಿಯ ಜೊತೆಗೆ ಶಕ್ತಿಯನ್ನು ನೀಡುತ್ತದೆ. ಪಾಕವಿಧಾನದಲ್ಲಿನ ಎಲ್ಲಾ ಪದಾರ್ಥಗಳು ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಪೋಷಕಾಂಶಗಳಿಂದ ತುಂಬಿವೆ. ಇದು ಉಪವಾಸದ ಸಮಯದಲ್ಲಿ ಶಕ್ತಿ ನೀಡುತ್ತದೆ. ಇದನ್ನು ತಯಾರಿಸಲು ಹುರಿದ ಕೊತ್ತಂಬರಿ ಪುಡಿ, ಮಖಾನಾ, ತುರಿದ ತೆಂಗಿನಕಾಯಿ, ಸಕ್ಕರೆ ಅಥವಾ ಬೆಲ್ಲ ಮತ್ತು ಒಣ ಹಣ್ಣುಗಳನ್ನು ಬಳಸಿಕೊಳ್ಳಲಾಗುತ್ತದೆ.
* ಕರ್ಜಿಕಾಯಿ ಪಾಕ
ಕರ್ಜಿಕಾಯಿ ಎಂಬ ಪಾಕವಿಧಾನ ಗಣೇಶ ಚತುರ್ಥಿ, ದೀಪಾವಳಿ ಮತ್ತು ಹೋಳಿಯಂತಹ ಹಬ್ಬಗಳ ಸಮಯದಲ್ಲಿ ಮಾಡುವ ಸಿಹಿ ತಿಂಡಿಯಾಗಿದೆ. ಕರ್ಜಿಕಾಯಿಯಲ್ಲಿ ಗೋದಿ, ತೆಂಗಿನ ಕಾಯಿ ತುರಿ, ಶೇಂಗಾ, ಬೆಲ್ಲ ಸೇರಿ ಅನೇಕ ಪದಾರ್ಥಗಳನ್ನು ಬಳಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳಿದ್ದು, ದೇಹಕ್ಕೆ ಆರೋಗ್ಯಕರ ಆಹಾರ ಆಗಿದೆ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಜೊತೆಗೆ ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ ಹಾಗೂ ಹಲವಾರು ವಿಟಮಿನ್ ಮತ್ತು ಖನಿಜಗಳ ಮೂಲವಾಗಿದೆ.
* ಯುಗಾದಿ ಪಚಡಿ ಪಾಕ
ಹಬ್ಬದ ದಿನ ತಿನ್ನಬೇಕೆಂದೆನಿಸುವ ಅಚ್ಚುಮೆಚ್ಚಿನ ಈ ಖಾದ್ಯವು ದಕ್ಷಿಣದ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಜನಪ್ರಿಯವಾಗಿದೆ. ಯುಗಾದಿಯ ಶುಭ ಸಂದರ್ಭದಲ್ಲಿ ತಯಾರಿಸಲಾಗುವ ಇದು ಆರು ರುಚಿಗಳ ಸಂಯೋಜನೆಯನ್ನು ನೀಡುತ್ತದೆ. ಬೇವಿನ ಹೂವುಗಳು, ಹಸಿ ಮಾವು, ಬೆಲ್ಲ, ಮೆಣಸಿನ ಪುಡಿ, ತೆಂಗಿನಕಾಯಿ ಮತ್ತು ಉಪ್ಪನ್ನು ಸೇರಿಸುವ ಮೂಲಕ ಈ ಪಾಕವಿಧಾನವನ್ನು ತಯಾರಿಸಲಾಗುತ್ತದೆ.
* ರವಾ ಲಡ್ಡು ಪಾಕ
ಇನ್ನು ಹಬ್ಬ ಮತ್ತು ಶುಭ ಕಾರ್ಯಗಳ ಸಮಯದಲ್ಲಿ ರವಾ ಲಡ್ಡನ್ನಯ ತಯಾರಿಸಲಾಗುತ್ತದೆ. ಇದನ್ನು ಸುಜಿ ರವೆ, ತುಪ್ಪ, ಸಕ್ಕರೆಯಿಂದ ತಯಾರು ಮಾಡಲಾಗುತ್ತದೆ. ಇದರ ಜೊತೆ ಏಲಕ್ಕಿಯೊಂದಿಗೆ ಪರಿಮಳಯುಕ್ತವಾಗಿರುತ್ತದೆ. ಈ ಮಿಶ್ರಣವನ್ನು ದುಂಡಗಿನ ಲಡ್ಡುಗಳಾಗಿ ಮಾಡಿಕೊಂಡು ತಿಂದು ಆನಂದಿಸಬಹುದಾಗಿದೆ. ಇನ್ನು 2023ರ ಗೂಗಲ್ ಸರ್ಚ್‌ನ ಪಟ್ಟಿಯಲ್ಲಿ ಈ ಪಾಕ ವಿಧಾನವನ್ನು ಕೂಡ ಅತೀ ಹೆಚ್ಚಾಗಿ ಸರ್ಚ್ ಮಾಡಿದ್ದಾರೆ.
-
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ












Click it and Unblock the Notifications