ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಗದ ಶಾಪ, ಯಡಿಯೂರಪ್ಪಗೆ ಭೀಕರ ರೋಗ

By Mahesh
|
Google Oneindia Kannada News

Yeddyurappa
ಬೆಂಗಳೂರು, ಡಿ.21: ಜೇಷ್ಠ ನಕ್ಷತ್ರದಿಂದ ಆರಂಭವಾಗಿ ಜೇಷ್ಠ ನಕ್ಷತ್ರದಂದು ಪೂರ್ಣಾಹುತಿಗೊಳ್ಳುವ ಈ ವಿಶಿಷ್ಟಯಾಗ 28 ದಿನಗಳ ಕಾಲ ನಡೆಯುತ್ತದೆ. ಒಟ್ಟು 18 ಹೋಮ ಕುಂಡಗಳಲ್ಲಿ ಶಾಸ್ತ್ರೋಕ್ತ ರೀತಿಯಲ್ಲಿ ವಾಜಶ್ರವ ಪ್ರಣೀಯ ಯಾಗ ಸೂತ್ರ ಆಧಾರಿಸಿ ವೇದ ಮಂತ್ರಗಳ ಪಠಣ ನಡೆಸಲಾಗುತ್ತದೆ.

ವಾಜಶ್ರಯರು ಈ ಯಾಗಕ್ಕೆ ನಾಂದಿ ಹಾಡಿದ್ದು ತಮ್ಮಲ್ಲಿ ಹುಟ್ಟಿಕೊಂಡಿದ್ದ ಆಹಂಕಾರವನ್ನು ಸುಡಲಿಕ್ಕೆ, ಆದರೆ, ಅಧಿಕಾರ ದಾಹ ಅಥವಾ ಮೋಹದಿಂದ ಯಡಿಯೂರಪ್ಪ ಅವರು ಈ ಯಾಗಕ್ಕೆ ಕುಳಿತಿದ್ದು ತಿರುಗುಬಾಣವಾಗಿ ನಾಟಲಿದೆ.

ಸಪ್ತ ಯಾಗಗಳಲ್ಲಿ 'ವಾಜಪೇಯ ಸೋಮಯಾಗ'ವನ್ನು ಶ್ರೇಷ್ಠ ಯಾಗ ಎಂದು ಪರಿಗಣಿಸಲಾಗಿದೆ. ಸುಮಾರು 9137 ಋಕ್ಕುಗಳು, ಮಂತ್ರಗಳು ಬಳಸಲ್ಪಡುತ್ತಿದೆ.

ಷಟ್ಕೋನ ರೀತಿಯಲ್ಲಿ ರಚಿತವಾದ 18 ಯಾಗ ಕುಂಡಗಳಿಗೆ ದಕ್ಷಿಣಾ, ಗಾರ್ಹಪತ್ಯ, ಆವಹನೀಯ, ಅನುರೂಪ, ಪ್ರವಹ, ಆವಹ, ಸತ್ಯಾ, ಆಶೇಷಾ, ವಪ, ಸಗುಣಿ, ಪ್ರಾಚೀ, ಧಿಗ್ವಸ, ವೈಶೇಶಿಕ, ಮೇಧಾ,ಉದ್ವಹ, ನಿವಹ, ಶ್ರುತ, ಅವ್ಯಯ ಎಂದು ಹೆಸರಿಸಲಾಗುತ್ತದೆ.

ವಾಜಪೇಯ vs ರಾಜಸೂಯ ಯಾಗ: ಸಾಮಾನ್ಯವಾಗಿ ಅರಸನಾದವನು ವಾಜಪೇಯ ಯಾಗ ಪೂರೈಸಿ ನಂತರ ರಾಜಸೂಯ ಯಾಗ ಕೈಗೊಳ್ಳಬಹುದು ಎನ್ನಲಾಗಿದೆ. ಹೀಗಾಗಿ ವಾಜಪೇಯಕ್ಕಿಂತ ರಾಜಸೂಯವೇ ಶ್ರೇಷ್ಠ ಎಂದು ಕೆಲ ಪಂಡಿತರ ಅಭಿಪ್ರಾಯ.

ಆದರೆ, ಇದರಲ್ಲಿ ಒಂದು ಅಪವಾದವಿದೆ. ರಾಜಸೂಯ ಯಾಗವನ್ನು ರಾಜನಾದವನು ಮಾತ್ರ ಮಾಡಬಹುದಾಗಿದೆ. ಆದರೆ, ವಾಜಪೇಯ ಯಾಗವನ್ನು ಲೋಕ ಹಿತಕ್ಕಾಗಿ ಯಾವುದೇ ಹೋತ್ರಿಗಳು ಕೈಗೊಳ್ಳಬಹುದಾಗಿದೆ.

ಯಡಿಯೂರಪ್ಪ ಅವರು ಪಟ್ಟದಿಂದ ಕೆಳಗಿಳಿದಿರುವುದರಿಂದ ಹಾಗೂ ರಾಜಸೂಯ ಯಾಗಕ್ಕೆ ಹೆಚ್ಚಿನ ಕಾಲಾವಧಿ ಬೇಕಿರುವುದರಿಂದ ವಾಜಪೇಯವನ್ನು ಆಯ್ಕೆಮಾಡಲಾಗಿದೆ.

ಈ ಎರಡು ಯಾಗಗಳ ಬಗ್ಗೆ ತೈತರೀಯ ಸಂಹಿತೆ, ಅಶ್ವಲಾಯನ ಸೂತ್ರಗಳಲ್ಲಿ ಅನೇಕ ಚರ್ಚೆ, ವಿವರಣೆಗಳು ಸಿಗುತ್ತದೆ. ವಾಯಪೇಯ ಸೋಮಯಾಗ ಸಮಯದಲ್ಲಿ ಸೋಮರಸ ಸೇವನೆ ಬಗ್ಗೆ ಕೂಡಾ ಅನೇಕ ಗೊಂದಲಗಳಿವೆ. ಇಂದ್ರನ ಸ್ಥಾನದಲ್ಲಿ ಬ್ರಹ್ಮನನ್ನು ತಂದು ಕೂರಿಸಿರುವುದು,

English summary
Did Yeddyurappa made mistake by opted for Vajapeya Somayaga., what is its significance and effects on his political career. Why did he didn't chose Rajasuyayaga. Vajapeya Somayaga performes at Naharahari Parvata Kalladka is really boosts Social Welfare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X