ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

26/11 ದಾಳಿ ಎಫೆಕ್ಟ್ : ಸಣ್ಣ ಶಬ್ದಕ್ಕೂ ಬೆದರುವ ಶೆರು

|
Google Oneindia Kannada News

Sheru Dog
ಮುಂಬೈನಲ್ಲಿ ಉಗ್ರರ ದಾಳಿ ನಡೆದು ಇಂದಿಗೆ ಮೂರು ವರ್ಷ ಆಗಿದೆ. ಆದರೆ ದಾಳಿ ಪರಿಣಾಮ ಮಾತ್ರ ಇನ್ನೂ ಮಾಸಿಲ್ಲ. ಇಡೀ ಜಗತ್ತೇ ಬೆಚ್ಚಿ ಬೀಳುವಂತೆ ಮಾಡಿದ ಈ ಘಟನೆಯಿಂದ ತತ್ತರಿಸಿದವರು ಕೇವಲ ಮನುಷ್ಯರು ಮಾತ್ರವಲ್ಲ, ಮೂಕ ಪ್ರಾಣಿ ಕೂಡ.

ಮೂರು ವರ್ಷಗಳ ಹಿಂದಿನ ನೆನಪಿನಿಂದ ಶೆರು ಎಂಬ ನಾಯಿ ಈಗಲೂ ಥರಗುಟ್ಟುತ್ತಿದೆ. ದೊಡ್ಡ ಶಬ್ದ ಕೇಳಿದರೆ ಬೆಚ್ಚಿ ಬೀಳುತ್ತದೆ. ಅದು ಪಟಾಕಿ ಶಬ್ದವಾದರಂತೂ ಬಾಲಮಡಚಿ ಕುಂಯಿಗುಡುತ್ತ ಮೂಲೆ ಸೇರುತ್ತದೆ. ಯಾವ ಕಡೆಯಿಂದ ಗುಂಡು ಬಂದು ದೇಹ ಸೇರುತ್ತೋ ಎಂಬ ಭಯ ಅದಕ್ಕೆ.

ನಾಯಿಗೂ ಉಗ್ರರ ದಾಳಿಗೂ ಎಲ್ಲಿಯ ಸಂಬಂಧ ಅಂತಿರಾ? ಅಂದು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ ಬಳಿ ಉಗ್ರರಿಗೂ ಪೊಲೀಸರಿಗೂ ಚಕಮಕಿ ನಡೆದಾಗ ಈ ಶುನಕ ಕೂಡ ಪರಿತಪಿಸಿತ್ತು. ಉಗ್ರರ ಗುಂಡು ಈ ನಾಯಿಯ ಭುಜವನ್ನೂ ಹೊಕ್ಕಿತ್ತು.

ಉಗ್ರರ ದಾಳಿಯ ಸಂದರ್ಭದಲ್ಲಿ ನರಳುತಿದ್ದ ಈ ನಾಯಿಯನ್ನು ಭಾಯ್ ಸಕ್ರಾಬಾಯ್ ಪೆಟಿಟ್ ಪಶು ಆಸ್ಪತ್ರೆಗೆ ಸೇರಿಸಿದ್ದರು. ಉಗ್ರರ ಅಟ್ಟಹಾಸಕ್ಕೆ ಸಾಕ್ಷಿಯಾಗಿದ್ದ ಈ ಬೀದಿ ನಾಯನ್ನು ವೈದ್ಯರು ತಮ್ಮ ಆಸ್ಪತ್ರೆಯಲ್ಲೇ ಸಾಕುತ್ತಿದ್ದಾರೆ.

ಶೆರು ಈಗಲೂ ಅದರ ನೆನಪಿನಿಂದ ದಾಳಿಯ ಭೀಕರತೆ ಕರಗಿಲ್ಲ. ಗುಂಡು ತಗುಲಿ ಅಷ್ಟು ಗಂಭೀರವಾಗಿ ಗಾಯಗೊಂಡಿದ್ದರೂ ಶೆರು ಬದುಕುಳಿದಿದ್ದು ಅತ್ಯಾಶ್ಚರ್ಯ ಎನ್ನುತ್ತಾರೆ ಡಾಕ್ಟರ್ ಜೆಸಿ ಖನ್ನಾ. ( ಬಾಂಬೆ ಸೊಸೈಟಿ ಫಾರ್ ಪ್ರಿವೆಂಶನ್ ಆಫ್ ಕ್ರ್ಯುಯಾಲಿಟಿ ಟು ಅನಿಮಲ್ಸ್ (BSPCA ಕಾರ್ಯದರ್ಶಿಯಾಗಿದ್ದಾರೆ).

ಎಲ್ಲಾ ನಾಯಿಗಳಂತೆ ಶೆರು ಕೂಡ ಆಡುತ್ತಿರುತ್ತದೆ. ಆದರೆ ಆಚೀಚೆ ಶಬ್ದವಾದರೆ ಇದ್ದಕ್ಕಿದ್ದಂತೆ ಭಯದಿಂದ ತತ್ತರಿಸುತ್ತದೆ ಎಂದು ಖಿನ್ನರಾಗಿ ಹೇಳುತ್ತಾರೆ.

ಪ್ರತಿ ತಿಂಗಳೂ ಶೆರುವಿನ ಪೋಷಣೆಗೆಂದು 5,000 ಹಣವಾಗುತ್ತಿದ್ದರೂ ಮಾನವೀಯತೆಯಿಂದ ಶೆರುವನ್ನು ಆಸ್ಪತ್ರೆಯಲ್ಲಿ ಪ್ರೀತಿಯಿಂದ ಸಾಕಿಕೊಳ್ಳಲಾಗಿದೆ. ಇದೀಗ ಪಾರ್ಸಿಯ ಮಹಿಳೆ ಮತ್ತು ಗುಜರಾತ್ ನ ಕುಟುಂಬವೊಂದು ಶೆರುವನ್ನು ದತ್ತು ತೆಗೆದುಕೊಂಡು ವೆಚ್ಚ ಭರಿಸುತ್ತಿದೆ.

English summary
Today India is commemorating the third anniversary of the deadly Mumbai terror attacks. Not only the people are victims by this terror act, but also a dog. 3 years after Sheru was hit by a bullet during the 26/11 terrorist attack, the dog is still scared of loud noises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X