Get Updates
Get notified of breaking news, exclusive insights, and must-see stories!

Pakistan Bomb Blast: ಭಾರೀ ಬಾಂಬ್ ಸ್ಪೋಟಕ್ಕೆ ತತ್ತರಿಸಿದ ಪಾಕಿಸ್ತಾನ: ಭಯಾನಕ ದೃಶ್ಯ ವೈರಲ್!

ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನವೇ ಇಂದು ಬಲಿಪಶುವಾಗಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಇಸ್ಲಾಮಿಕ್ ಪಾರ್ಟಿಯ ರ್‍ಯಾಲಿಯಲ್ಲಿ ಕಳೆದ ದಿನ ಬಾಂಬ್ ಸ್ಫೋಟ ಸಂಭವಿಸಿದೆ. ಇದರಲ್ಲಿ ಇದುವರೆಗೆ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸ್ಫೋಟದಲ್ಲಿ 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸ್ಫೋಟಗಳ ಭಯಾನಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಮುನ್ನೆಲೆಗೆ ಬಂದಿವೆ.

ಖೈಬರ್ ಪಖ್ತುಂಖ್ವಾದ ಬಜೌರ್ ಜಿಲ್ಲೆಯಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ (ಜೆಯುಐ-ಎಫ್) ರ ರ್‍ಯಾಲಿ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟದ ಸದ್ದಿಗೆ ಇಡೀ ಪ್ರದೇಶದ ಜನರು ಬೆಚ್ಚಿಬಿದ್ದಿದ್ದಾರೆ. ಈ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

pakistan-rocked-by-a-heavy-bomb-blast

ಸ್ಫೋಟದ ನಂತರ ವೀಡಿಯೊಗಳು ಮತ್ತು ಚಿತ್ರಗಳು ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮುತ್ತಿವೆ. ವಿಡಯೋದಲ್ಲಿ ಸ್ಫೋಟದ ನಂತರ ಭೀಕರ ಬೆಂಕಿ ಗೋಚರಿಸುತ್ತದೆ. ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಸುತ್ತಲೂ ಅವಶೇಷಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಾಣಬಹುದು. ಕೆಲವೆಡೆ ಜನರು ಗಾಯಾಳುಗಳೊಂದಿಗೆ ಓಡುತ್ತಿದ್ದಾರೆ. ಎಲ್ಲೆಡೆ ಗೊಂದಲದ ವಾತಾವರಣವಿದೆ.

ಎಲ್ಲೆಡೆ ಭಯಾನಕ ದೃಶ್ಯ

ಬಜೌರ್‌ನ ಖಾರ್‌ನಲ್ಲಿ ನಡೆದ ರಾಜಕೀಯ ಪಕ್ಷವಾದ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ (ಜೆಯುಐ-ಎಫ್) ಕಾರ್ಯಕರ್ತರ ಸಮಾವೇಶವನ್ನು ಭಯೋತ್ಪಾದಕರು ಗುರಿಯಾಗಿಸಿಕೊಂಡರು, ಇದರಲ್ಲಿ ಸ್ಥಳೀಯ ಜೆಯುಐ-ಎಫ್ ನಾಯಕರೊಬ್ಬರು ಕೊಲ್ಲಲ್ಪಟ್ಟಿದ್ದಾರೆ. ಹತ್ಯೆಯಾದ ನಾಯಕನನ್ನು ಜಿಯಾವುಲ್ಲಾ ಜಾನ್ ಎಂದು ಗುರುತಿಸಲಾಗಿದೆ.

ಸ್ಫೋಟದ ನಂತರ ನೂಕುನುಗ್ಗಲಿನಲ್ಲಿ ಜನಸಂದಣಿಯ ಅಡಿ ಸಿಲುಕಿದ ಅನೇಕ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳದ ವಿಡಿಯೋದಲ್ಲಿ ಸುತ್ತಲೂ ಬಾಂಬ್ ಸ್ಫೋಟದ ಗುರುತುಗಳಿವೆ. ಜಿಯೋ ನ್ಯೂಸ್ ಪ್ರಕಾರ, ತನಿಖಾಧಿಕಾರಿಗಳಿಗೆ ಮೊದಲ ತನಿಖೆಯಿಂದ ಆತ್ಮಾಹುತಿ ಬಾಂಬ್ ದಾಳಿಯ ಸೂಚನೆ ಸಿಕ್ಕಿದೆ.

ಸ್ಫೋಟ ಹೇಗಾಯಿತು ಗೊತ್ತಾ?

ಬಾಂಬ್ ಸ್ಫೋಟದ ಬಗ್ಗೆ ಖೈಬರ್ ಪಖ್ತುಂಖ್ವಾ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಅಖ್ತರ್ ಹಯಾತ್ ಖಾನ್ ಅವರು ತನಿಖೆಯಿಂದ ಇದೀಗ ಇದು ಆತ್ಮಹತ್ಯಾ ಬಾಂಬ್ ದಾಳಿ ಎಂದು ತಿಳಿದುಬಂದಿದೆ. ಅದೇ ವೇಳೆ ಸ್ಥಳದಿಂದ ಸಂಗ್ರಹಿಸಿದ ಸಾಕ್ಷ್ಯದಿಂದ ಸ್ಪಷ್ಟವಾಗಿ ಗೊತ್ತಾಗಲಿದೆ. ಅಖ್ತರ್ ಹಯಾತ್ ಪ್ರಕಾರ, ಸಮಾವೇಶವನ್ನು ಆಯೋಜಿಸುತ್ತಿದ್ದ ಜಮಿಯತ್ ಉಲೇಮಾ-ಎ-ಇಸ್ಲಾಂ (ಎಫ್) ಪಕ್ಷದ ಮುಖಂಡರನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+