Pakistan: ಭ್ರಷ್ಟರ ಕೂಪದಲ್ಲಿ ಕೆಟ್ಟವರಿಗೆ ಕಾಲ: ನೀನಾ ಪಾಕಿಸ್ತಾನ?
ಜಗತ್ತಿಗೆ ಒಂದು ರೂಲ್ಸ್ ಇದ್ರೆ, ಪಾಕಿಸ್ತಾನಕ್ಕೆ ಮತ್ತೊಂದು ರೂಲ್ಸ್. ಯಾಕಂದ್ರೆ ಕಾನೂನು ಹೆಸರಿಗೆ ಮಾತ್ರ ಎಂಬಂತಹ ಪರಿಸ್ಥಿತಿ ಪಾಕಿಸ್ತಾನದಲ್ಲಿ ಮನೆಮಾಡಿದೆ. ಅದರಲ್ಲೂ ಭ್ರಷ್ಟರ ಪಾಲಿನ ಸ್ವರ್ಗ ಪಾಕಿಸ್ತಾನದಲ್ಲಿ ಕೆಟ್ಟವರಿಗೆ ಮಾತ್ರ ಕಾಲ ಎಂಬಂತಾಗಿದೆ. ಈಗಲು ಅಷ್ಟೇ ಭ್ರಷ್ಟಾಚಾರ ಆರೋಪದಲ್ಲಿ ದೇಶ ಬಿಟ್ಟು ಹೋಗಿದ್ದ ರಾಜಕಾರಣಿ ಮತ್ತೆ ಪಾಕ್‌ಗೆ ವಾಪಸ್ ಬರ್ತಿದ್ದಾರೆ. ಹೀಗಾಗಿ ಮತ್ತೆ ಪಾಕಿಸ್ತಾನದಲ್ಲಿ ಬೆಂಕಿ ಬೀಳುವ ಸ್ಥಿತಿ ಸೃಷ್ಟಿಯಾಗಿದೆ.
ಪನಾಮಾ ಪೇಪರ್ಸ್ ಹಗರಣ ಹಿನ್ನೆಲೆ ದೇಶ ಬಿಟ್ಟು ಹೋಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಕಂಬ್ಯಾಕ್ ಮಾಡಲು ವೇದಿಕೆ ಸಿದ್ಧವಾಗಿದೆ. ಹೀಗೆ ನಾಲ್ಕು ವರ್ಷಗಳಿಂದ ಲಂಡನ್‌ನಲ್ಲಿ ಇರುವ ಪಾಕ್‌ನ ಮಾಜಿ ಪಿಎಂ ನವಾಜ್ ಅಕ್ಟೋಬರ್ ತಿಂಗಳಲ್ಲೇ ಪಾಕಿಸ್ತಾನಕ್ಕೆ ವಾಪಸ್ ಬರುವ ಸಾಧ್ಯತೆ ಇದೆ ಅಂತಾ ಹೇಳಲಾಗಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಅಂದ್ರೆ ಪಿಎಂಎಲ್-ಎನ್ ನಾಯಕ ನವಾಜ್ ಷರೀಫ್ ಲಂಡನ್‌ನಲ್ಲಿ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರ ಜೊತೆ ನಡೆಸಿದ ಸಭೆಯಲ್ಲಿ ಪಾಕಿಸ್ತಾನಕ್ಕೆ ಮರಳುವ ಕುರಿತು ನವಾಜ್ ಷರೀಫ್ ಮಾತನಾಡಿದ್ದಾರೆ ಅಂತಾ ಹೇಳಲಾಗಿದೆ.

ಯಾವಾಗ ಬರಬಹುದು ನವಾಜ್ ಷರೀಫ್?
ಅಂದಹಾಗೆ ಶತ್ರುಗಳಂತೆ ಕಚ್ಚಾಡಿದ್ದ ಇಮ್ರಾನ್ & ನವಾಜ್ ಪಾಕಿಸ್ತಾನ ರಾಜಕೀಯದಲ್ಲಿ ಬದ್ಧ ವೈರಿಗಳು. 4 ವರ್ಷದ ಹಿಂದೆ ದೇಶಬಿಟ್ಟು ಹೊರಗಿರುವ ನವಾಜ್ ಶರೀಫ್ ಮತ್ತೆ ಪಾಕಿಸ್ತಾನಕ್ಕೆ ಎಂಟ್ರಿ ಕೊಡೋದು ಗ್ಯಾರಂಟಿ ಆಗಿದೆ. ಆದರೆ ಪ್ರಯಾಣದ ದಿನಾಂಕದ ಬಗ್ಗೆ ಇನ್ನೂ ಮಾಹಿತಿ ಪಕ್ಕಾ ಆಗಿಲ್ಲ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಒಂದು ಕಡೆ ಹೀಗೆ ನವಾಜ್ ಷರೀಫ್ ವಾಪಸ್ ಪಾಕಿಸ್ತಾನಕ್ಕೆ ಬರುತ್ತಿದ್ರೆ, ಮತ್ತೊಂದ್ಕಡೆ ಪಾಕಿಸ್ತಾನ ಇನ್ನೊಬ್ಬ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕಂಬಿ ಎಣಿಸುತ್ತಿದ್ದಾರೆ. ಈ ಮೂಲಕ ಪಾಕಿಸ್ತಾನದಲ್ಲಿ ದ್ವೇಷದ ರಾಜಕಾರಣ ಮುಂದುವರಿದಿದೆ.
ನವಾಜ್ ಪಾಕಿಸ್ತಾನಕ್ಕೆ ವಾಪಸ್ ಬಂದರೂ..
ಸದಾ ಭಾರತದ ವಿರುದ್ಧ ದ್ವೇಷ ಕಾರುವ ಪಾಕಿಸ್ತಾನದಲ್ಲಿ ಎಲ್ಲವೂ ಸರಿ ಇಲ್ಲ. ಅದ್ರಲ್ಲೂ ಪಾಕ್ ರಾಜಕಾರಣಿಗಳು ಅದೆಷ್ಟು ಭ್ರಷ್ಟರು ಅಂದರೆ, ಅಲ್ಲಿನ ಬಹುತೇಕ ಮಾಜಿ ಪ್ರಧಾನಿಗಳಿಗೆ ಜೈಲಿನ ದರ್ಶನ ಆಗಿದೆ. ನವಾಜ್ ಶರೀಫ್ ಕೂಡ ಪಾಕಿಸ್ತಾನದಲ್ಲಿ ಜೈಲೂಟ ತಿಂದು, ನಂತರ ಬೇರೆ ದೇಶಕ್ಕೆ ಓಡಿ ಹೋಗಿದ್ದರು. 2019ರಿಂದ ಲಂಡನ್‌ನಲ್ಲಿರುವ ಮಾಜಿ ಪ್ರಧಾನಿ ನವಾಜ್, ಪನಾಮಾ ಪೇಪರ್ಸ್ ಹಗರಣ ಹಿನ್ನೆಲೆಯಲ್ಲಿ ಪಾಕ್‌ಗೆ ಮರಳಿದ್ರು ರಾಜಕೀಯ ಪಕ್ಷಗಳ ನೇತೃತ್ವ ವಹಿಸಲು ಆಗುವುದಿಲ್ಲ.

ಇಮ್ರಾನ್ ಖಾನ್ ಅಧಿಕಾರಕ್ಕೆ ಬರುತ್ತಿದ್ದಂತೆ ನವಾಜ್ ಷರೀಫ್‌ಗೆ ಜೈಲೂಟ ಪಕ್ಕಾ ಆಗಿತ್ತು. ಅಷ್ಟಕ್ಕೂ 71 ವರ್ಷ ವಯಸ್ಸಿನ ನವಾಜ್ ಷರೀಫ್ 2018ರಲ್ಲಿ ಪಾಕಿಸ್ತಾನದಲ್ಲಿ 2 ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಹೀಗೆ ಜೈಲು ಸೇರುತ್ತಿದ್ದಂತೆ ಆರೋಗ್ಯದಲ್ಲಿ ಕೂಡ ಏರುಪೇರಾಗಿ, ಲಾಹೋರ್ ಹೈಕೋರ್ಟ್ ಅನುಮತಿಯನ್ನು ಪಡೆದು 2019ರಿಂದ ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ ನವಾಜ್ ಷರೀಫ್. ಇದೀಗ ಮತ್ತೆ ಪಾಕಿಸ್ತಾನದ ರಾಜಕಾರಣದಲ್ಲಿ ಮತ್ತೆ ಸಕ್ರಿಯವಾಗಲು ಸಿದ್ಧರಾಗುತ್ತಿದ್ದಾರೆ. ಆದರೆ ಇಮ್ರಾನ್ ಖಾನ್ ಈ ಸಂದರ್ಭದಲ್ಲಿ ಜೈಲು ಕೋಣೆಗಳ ನಡುವೆ ಸಮಯ ಕಳೆಯುವಂತಾಗಿದೆ.












Click it and Unblock the Notifications