ಲಡಾಖ್: ಕಾರ್ಗಿಲ್‌ನ ಅಂಗಡಿಯೊಂದರಲ್ಲಿ ಸ್ಫೋಟ 3 ಸಾವು, 11 ಜನರಿಗೆ ಗಾಯ!

ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಸ್ಕ್ರ್ಯಾಪ್ ಡೀಲರ್ ಅಂಗಡಿಯಲ್ಲಿ ಶುಕ್ರವಾರ ಭಾರೀ ಸ್ಪೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದು 11 ಮಂದಿ ಗಾಯಗೊಂಡಿದ್ದಾರೆ.

ಕಬಾಡಿ ನಲ್ಲಾ ಪ್ರದೇಶದ ದ್ರಾಸ್‌ನ ಅಂಗಡಿಯೊಂದರಲ್ಲಿ ಏನೋ ವಿಚಿತ್ರ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮೂವರಲ್ಲಿ ಒಬ್ಬರು ಪ್ರದೇಶದವರಲ್ಲ ಎಂದು ಅವರು ತಿಳಿಸಿದ್ದಾರೆ. ಗಾಯಗೊಂಡ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ladakh: 3 killed, 11 injured in blast near scrap site in Kargil

"ಸ್ಫೋಟದಲ್ಲಿ ಒಟ್ಟು ಮೂವರು ಸಾವನ್ನಪ್ಪಿದ್ದಾರೆ, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಡಿಸಿ (ಕಾರ್ಗಿಲ್) ಶ್ರೀಕಾಂತ್ ಬಾಳಾಸಾಹೇಬ್ ಸೂಸೆ ಹೇಳಿಕೆ ನೀಡಿದ್ದಾರೆ.

ಇದೇ ರೀತಿಯ ಘಟನೆಯಲ್ಲಿ, ಈ ತಿಂಗಳ ಆರಂಭದಲ್ಲಿ ಅಫ್ಘಾನಿಸ್ತಾನದ ಆಗ್ನೇಯ ಖೋಸ್ಟ್ ಪ್ರಾಂತ್ಯದ ಹೋಟೆಲ್‌ನಲ್ಲಿ ನಡೆದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು. ಮತ್ತು ಏಳು ಮಂದಿ ಗಾಯಗೊಂಡಿದ್ದರು. ಸತ್ತವರಲ್ಲಿ ಪಾಕಿಸ್ತಾನದ ವಜಿರಿಸ್ತಾನ್ ಪ್ರದೇಶದ ಜನರು ಸೇರಿದ್ದರು. ಇದು ಗಡಿಯ ಮೇಲಿದೆ ಮತ್ತು ಹಲವಾರು ವರ್ಷಗಳಿಂದ ವಿವಿಧ ಉಗ್ರಗಾಮಿ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ.

ಈ ತಿಂಗಳ ಆರಂಭದಲ್ಲಿ, ಮುಂಬೈ ಪೊಲೀಸರಿಗೆ ವ್ಯಕ್ತಿಯಿಂದ ಸ್ಥಳೀಯ ರೈಲುಗಳಲ್ಲಿ ಸರಣಿ ಬಾಂಬ್ ಸ್ಫೋಟದ ಬೆದರಿಕೆ ಕರೆ ಬಂದಿತ್ತು. ಕರೆ ಬಂದ ಕೂಡಲೇ, ಬೆದರಿಕೆ ಕರೆ ಮಾಡಿದ ಆರೋಪದ ಮೇಲೆ ಜುಹು ಪ್ರದೇಶದ 25 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದರು. ಪೊಲೀಸ್ ಅಧಿಕಾರಿಯೊಬ್ಬರು, ವ್ಯಕ್ತಿ ಮದ್ಯದ ಸ್ಥಿತಿಯಲ್ಲಿದ್ದಾಗ ಕರೆ ಮಾಡಿರಬಹುದು ಎಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+