ಐಸಿಸ್ ಜೊತೆ ಸಂಪರ್ಕ: ಮೂವರು ಶಂಕಿತ ಉಗ್ರರ ಬಂಧನ
ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಐಸಿಸ್ ಜಾಲವನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ಮೂವರು ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಮೂವರು ಶಂಕಿತರು ಇಂಜಿನಿಯರ್‌ಗಳಾಗಿದ್ದು, ಬಾಂಬ್‌ಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸ್ ವಿಶೇಷ ಕೋಶದ ಹಿರಿಯ ಅಧಿಕಾರಿ ಎಚ್‌ಜಿಎಸ್ ಧಲಿವಾಲ್ ಈ ಬಗ್ಗೆ ಮಾಹಿತಿ ನೀಡಿ, ಇಂದು ಬಂಧಿಸಲಾದ ಮೂವರು ಭಯೋತ್ಪಾದಕ ಶಂಕಿತರಲ್ಲಿ ಒಬ್ಬರಾದ ಮೊಹಮ್ಮದ್ ಶಹನವಾಜ್ ಅವರು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದರು. ದೇಶದ ವಿವಿಧ ಭಾಗಗಳಲ್ಲಿ ನಡೆದ ಸ್ಫೋಟಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಹನವಾಜ್ ಮತ್ತು ಇತರ ಇಬ್ಬರ ಬಗ್ಗೆ ಮಾಹಿತಿ ನೀಡಿದವರಿಗೆ ಎನ್‌ಐಎ ಕಳೆದ ತಿಂಗಳು ತಲಾ ₹ 3 ಲಕ್ಷ ನಗದು ಬಹುಮಾನ ಘೋಷಿಸಿತ್ತು.

ಇತರ ಇಬ್ಬರು ಬಂಧಿತರು ಶಾನವಾಜ್ ಅವರ ಸಹಚರರಾದ ಮೊಹಮ್ಮದ್ ರಿಜ್ವಾನ್ ಅಶ್ರಫ್ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿ ಎಂದು ಧಲಿವಾಲ್ ಮಾಹಿತಿ ನೀಡಿದ್ದಾರೆ. ಶಹನವಾಜ್‌ನನ್ನು ದೆಹಲಿಯ ಜೈತ್‌ಪುರದಲ್ಲಿ ಬಂಧಿಸಿದರೆ, ರಿಜ್ವಾನ್ ಮತ್ತು ಅಶ್ರಫ್ ಅವರನ್ನು ಕ್ರಮವಾಗಿ ಉತ್ತರ ಪ್ರದೇಶದ ಲಕ್ನೋ ಮತ್ತು ಮೊರಾದಾಬಾದ್‌ನಿಂದ ಬಂಧಿಸಲಾಗಿದೆ.
ಬಾಂಬ್ ತಯಾರಿಕೆಯಲ್ಲಿ ಪರಿಣಿತಿ
ಶಾನವಾಜ್‌ನ ದೆಹಲಿ ಅಡಗುತಾಣದಲ್ಲಿ ಪಾಕಿಸ್ತಾನದಿಂದ ಪಿಸ್ತೂಲ್, ಬಾಂಬ್ ತಯಾರಿಕೆಗೆ ಬಳಸುವ ವಸ್ತುಗಳು, ರಾಸಾಯನಿಕಗಳು ಮತ್ತು ಜಿಹಾದಿ ಬರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಶಂಕಿತರು ಐಸಿಸ್ ಹ್ಯಾಂಡ್ಲರ್‌ನೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ನಿಯಮಿತವಾಗಿ ವರದಿಗಳನ್ನು ಹಂಚಿಕೊಳ್ಳುತ್ತಾರೆ. ಅವರ ಕೆಲಸದಲ್ಲಿ ಬಾಹ್ಯ ಪಾತ್ರವು ಬಹಿರಂಗವಾಗದಂತೆ ಸ್ಥಳೀಯವಾಗಿ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಖರೀದಿಸಲು ಅವರಿಗೆ ಸೂಚಿಸಲಾಗಿದೆ ಎಂದು ಪೋಲಿಸ್ ಹೇಳಿದರು.
ಶಾನವಾಜ್ ಜಾರ್ಖಂಡ್‌ನ ಹಜಾರಿಬಾಗ್‌ನವರು ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾಭ್ಯಾಸದಿಂದ ಗಣಿಗಾರಿಕೆ ಇಂಜಿನಿಯರ್ ಆಗಿದ್ದ ಅವನಿಗೆ ಇಂಜಿನಿಯರಿಂಗ್ ಸ್ಫೋಟಗಳ ಬಗ್ಗೆ ಜ್ಞಾನವಿತ್ತು. ಆತನ ಪತ್ನಿ ಹುಟ್ಟಿನಿಂದ ಹಿಂದೂ ಆಗಿದ್ದರು ಮದುವೆಯಾಗುವ ಮೊದಲು ಇಸ್ಲಾಂಗೆ ಮತಾಂತರಗೊಂಡಿದ್ದರು ಆಕೆ ಈಗ ಪರಾರಿಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಮೊಹಮ್ಮದ್ ಅರ್ಷದ್ ವಾರ್ಸಿ ಕೂಡ ಜಾರ್ಖಂಡ್ ಮೂಲದವ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಅಲಿಗಢ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪೂರ್ಣಗೊಳಿಸಿದ್ದ ಮತ್ತು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಡಾಕ್ಟರೇಟ್ ಪಡೆಯಲು ಅಭ್ಯಾಸ ಮಾಡುತ್ತಿದ್ದ.
ಮೊಹಮ್ಮದ್ ರಿಜ್ವಾನ್ ಅಶ್ರಫ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಮೂಲತಃ ಉತ್ತರ ಪ್ರದೇಶದ ಅಜಂಗಢದವರಾದ ಆತ ಧರ್ಮಗುರುಗಳಾಗಿಯೂ ತರಬೇತಿ ಪಡೆದಿದ್ದ ಎನ್ನಲಾಗಿದೆ.
ಬಂಧಿಸಿರುವ ಶಂಕಿತ ಉಗ್ರರ ದೇಶದ ವಿವಿಧ ಸ್ಥಳಗಳಲ್ಲಿ ಸ್ಫೋಟ ನಡೆಸುವ ಸಂಚು ಹೊಂದಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇದಕ್ಕಾಗಿ ಯಾರು ಹಣ ಸಹಾಯ ಮಾಡುತ್ತಿದ್ದರು ಎನ್ನುವುದನ್ನು ಕೂಡ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎಂದು ಧಲಿವಾಲ್ ಹೇಳಿದ್ದಾರೆ.












Click it and Unblock the Notifications