ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮಹಿಳೆಯರ ಪಾಲಿನ ಯಮಕಂಟಕ ರಾಷ್ಟ್ರ

By Prasad
|
Google Oneindia Kannada News

India 4th dangerous place for women
ನವದೆಹಲಿ, ಜೂ. 15 : ಸ್ತ್ರೀಯನ್ನು ಅತ್ಯಂತ ಪವಿತ್ರಳೆಂದು ಗೌರವಿಸುವ ಭಾರತ ಮಹಿಳೆಯರ ಪಾಲಿನ ನಾಲ್ಕನೇ ಅತ್ಯಂತ ಅಪಾಯಕಾರಿ ದೇಶ ಎಂಬ ತೆಗಳಿಕೆಗೆ ಪಾತ್ರವಾಗಿದೆ. ಮೊದಲ ಸ್ಥಾನದಲ್ಲಿ ಅಫಘಾನಿಸ್ತಾನ, ಎರಡನೇ ಸ್ಥಾನದಲ್ಲಿ ಕಾಂಗೋ ರಾಷ್ಟ್ರವಿದೆ. ಮೂರನೇ ಸ್ಥಾನವನ್ನು ಭಾರತಕ್ಕೆ ಪಾಕಿಸ್ತಾನ ಬಿಟ್ಟುಕೊಟ್ಟಿಲ್ಲ.

ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಈ ರಾಷ್ಟ್ರಗಳಿಗೆ ಲೆಕ್ಕವೇ ಇಲ್ಲ. ಮಹಿಳೆಯರಿಗೆ ಇಲ್ಲಿ ಯಾವುದೇ ರಕ್ಷಣೆಯಿಲ್ಲ. ಸ್ತ್ರೀವಾಸಕ್ಕೆ ಅಯೋಗ್ಯವಾದ ರಾಷ್ಟ್ರಗಳಿವು ಎಂದು ಥಾಮ್ಸನ್ ರಾಯ್ಟರ್ಸ್ ಫೌಂಡೇಷನ್ ನ ಕಾನೂನು ವಿಭಾಗ ಟ್ರಸ್ಟ್ ಲಾ (www.trust.org/trustlaw) ನಡೆಸಿದ ಸಮೀಕ್ಷೆ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.

ಕ್ಷಣಕ್ಷಣಕ್ಕೂ ನಡೆಯುತ್ತಿರುವ ಅತ್ಯಾಚಾರ, ದೈಹಿಕ ಮತ್ತು ಮಾನಸಿಕ ದೌರ್ಜನ್ಯ, ಕೊಲೆ, ವಂಚನೆ, ಗರ್ಭಪಾತ, ಲೈಂಗಿಕ ಪಕ್ಷಪಾತ, ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿ, ವರದಕ್ಷಿಣೆ ಹಿಂಸಾಚಾರ, ಆರೋಗ್ಯ ರಕ್ಷಣೆ, ಪೌಷ್ಟಿಕ ಆಹಾರ ಇಲ್ಲದಿರುವುದು ಮತ್ತು ಬಡತನ ಮಹಿಳೆಯರ ಜೀವನವನ್ನು ಅಸಹನೀಯವಾಗಿಸುತ್ತಿವೆ ಎಂದು ಫೌಂಡೇಷನ್ ಹೇಳಿದೆ.

ಮಹಿಳೆಯರಿಗೆ ಇಲ್ಲಿ ವಾಕ್ ಸ್ವಾತಂತ್ರ್ಯವಿಲ್ಲ. ಸಾರ್ವಜನಿಕವಾಗಿ ದೌರ್ಜನ್ಯದ ವಿರುದ್ಧ ದನಿ ಎತ್ತಿದರೂ ಅವರನ್ನು ತಾತ್ಸಾರ ಮಾಡಲಾಗುತ್ತಿದೆಯೇ ಹೊರತು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪ್ರತಿರೋಧ ವ್ಯಕ್ತಪಡಿಸಿದವರನ್ನು ಅಮಾನುಷವಾಗಿ ಕೊಲ್ಲಲಾಗುತ್ತಿದೆ ಎಂದು ಐದು ರಾಷ್ಟ್ರಗಳ, ಮಹಿಳೆಯರ ಹಕ್ಕಿಗಾಗಿ ಹೋರಾಡುತ್ತಿರುವ 213 ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ, ಮಾಂಸ ದಂಧೆ, ವೇಶ್ಯಾವಾಟಿಕೆಗಾಗಿ ಮಹಿಳೆಯರ ಸಾಗಾಟ ಅತ್ಯಧಿಕ ಪ್ರಮಾಣದಲ್ಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. 2009ರಲ್ಲಿ 100 ಮಿಲಿಯನ್ ಜನ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ. ಅವರಲ್ಲಿ ಶೇ.40ರಷ್ಟು ಅಪ್ರಾಪ್ತ ವಯಸ್ಕರು ಭಾಗಿಯಾಗಿದ್ದಾರೆ ಎಂಬ ಸಂಗತಿಯನ್ನು ಭಾರತದ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರು ತಿಳಿಸಿದ್ದಾರೆ ಎಂದು ಸಮೀಕ್ಷೆ ವರದಿ ಮಾಡಿದೆ. [ಬಿಜಾಪುರದಲ್ಲಿ ಹಾಡುಹಗಲೆ ಐವರ ಅತ್ಯಾಚಾರ]

English summary
India is the 4th most dangerous place for women and Afghanistan stands first in the list, says a survey conducted by Thomson Reuters Foundation. Rape, sexual harassment, human trafficking, female foeticides have converted these countries a hell for women. Congo, Pakistan take 2nd and 3rd position.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X