• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ವಾಟರ್ ಫೈನಲ್ ಗೆ ಭಾರತ, ಏಕೋ ಅನುಮಾನ?

By Mahesh
|

ಚೆನ್ನೈ, ಮಾ. 15: ವಿಶ್ವಕಪ್‌ 2011ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮಹತ್ವದ ಲೀಗ್ ಪಂದ್ಯವನ್ನು ಆಡಲು ಇಲ್ಲಿಗೆ ಧೋನಿ ಪಡೆ ಆಗಮಿಸಿದೆ. ದಕ್ಷಿಣ ಆಫ್ರಿಕಾಪ ಪಂದ್ಯಕ್ಕೂ ಮುನ್ನ ಮೂರು ಜಯ ಹಾಗೂ ಒಂದು ಟೈ ಫಲಿತಾಂಶ ದಾಖಲಿಸಿದ್ದ ಭಾರತ ಕ್ವಾರ್ಟರ್ ಫೈನಲ್ ತಲುಪಿತು ಎಂದೇ ನಂಬಲಾಗಿತ್ತು. ಆದರೆ ಈಗ ಹೊಸ ಲೆಕ್ಕಾಚಾರದ ಪ್ರಕಾರ ಸ್ವಲ್ಪ ಎಡವಟ್ಟು ಸಂಭವಿಸಿದ್ದರೂ ಭಾರತದ ನಿರೀಕ್ಷೆಗಳು ಹುಸಿಯಾಗುವ ಸಾಧ್ಯತೆಯಿದೆ. ಗುರು ಗ್ಯಾರಿ, ನಾಯಕ ಧೋನಿ, ಹಿರಿಯ ಆಟಗಾರರು ರಣತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದಾರೆ.

'ಬಿ" ಗುಂಪಿನಲ್ಲಿ ದುರ್ಬಲ ತಂಡಗಳು ಅನಿರೀಕ್ಷಿತ ಫಲಿತಾಂಶ ನೀಡಿರುವುದು ಭಾರತದ ಕ್ವಾರ್ಟರ್ ಹಾದಿಯನ್ನು ಕಠಿಣಗೊಳಿಸಿದೆ. ಪ್ರಸಕ್ತ ಅಗ್ರಸ್ಥಾನದಲ್ಲಿರುವ ಭಾರತ ಐದು ಪಂದ್ಯಗಳಿಂದ +0.768 ರನ್ ಸರಾಸರಿಯೊಂದಿಗೆ ಏಳು ಪಾಯಿಂಟ್ ಹೊಂದಿದೆ. ಹಾಗೆಯೇ ವಿಂಡೀಸ್ ಉತ್ತಮ ರನ್ ಸರಾಸರಿಯೊಂದಿಗೆ (+2.206) (6 ಪಾಯಿಂಟ್), ದಕ್ಷಿಣ ಆಫ್ರಿಕಾ (6 ಪಾಯಿಂಟ್), ಮತ್ತು ಬಾಂಗ್ಲಾದೇಶ (4 ಪಾಯಿಂಟ್) ಹೊಂದಿದ್ದು, ಇನ್ನೂ ಎರಡು ಪಂದ್ಯಗಳನ್ನು ಆಡಬೇಕಾಗಿದೆ. ಭಾರತದಷ್ಟೇ ಪಂದ್ಯಗಳನ್ನು ಆಡಿರುವ ಇಂಗ್ಲೆಂಡ್‌ ತೆಕ್ಕೆಯಲ್ಲಿ ಐದು ಅಂಕವಿದೆ.

ಚೆನ್ನೈನಲ್ಲಿ ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಸೋತಲ್ಲಿ ಭಾರತ ಏಳು ಪಾಯಿಂಟ್‌ನಲ್ಲಿಯೇ ಉಳಿಯಲಿದೆ. ಹಾಗೆಯೇ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧದ ಉಳಿದೆರಡು ಲೀಗ್ ಪಂದ್ಯವನ್ನು ಗೆದ್ದಲ್ಲಿ ಬಾಂಗ್ಲಾದೇಶ ಪಾಯಿಂಟ್ ಬಲ 8 ಕ್ಕೆ ಏರಿಕೆಯಾಗಲಿದೆ. ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆದ್ದಲ್ಲಿ ದಕ್ಷಿಣ ಆಫ್ರಿಕಾ ಪಾಯಿಂಟ್ ಕೂಡಾ 8 ಆಗುತ್ತದೆ. ಆದರೆ ವಿಂಡೀಸ್ ವಿರುದ್ಧದ ಕೊನೆಯ ಲೀಗ್ ಪಂದ್ಯವನ್ನು ಭಾರಿ ರನ್‌ರೇಟ್‌ನಲ್ಲಿ ಗೆದ್ದಲ್ಲಿ ಇಂಗ್ಲೆಂಡ್ ಪಾಯಿಂಟ್ ಬಲ ಕೂಡಾ ಭಾರತದಷ್ಟೇ ಆಗುತ್ತದೆ.

ಮತ್ತೆ ಮುಳುವಾದ ಬಾಂಗ್ಲಾ: ಆಗ ನೇಟ್ ರನ್‌ರೇಟ್‌ನಲ್ಲಿ ಭಾರತವನ್ನು ಹಿಂದಿಕ್ಕಲಿರುವ ಇಂಗ್ಲೆಂಡ್ ಕ್ವಾರ್ಟರ್ ಪ್ರವೇಶಿಸಲಿದೆ. ಉಳಿದಂತೆ ತಲಾ ಎಂಟು ಅಂಕ ಹೊಂದಿರುವ ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಕ್ವಾರ್ಟರ್ ಪ್ರವೇಶ ಮಾಡಲಿದೆ. ಇದರಿಂದಾಗಿ ಭಾರತ ನಿರ್ಗಮನದ ಹಾದಿ ಹಿಡಿಯಬೇಕಾಗುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತಕ್ಕಿಂತ ಉತ್ತಮ ರನ್‌ರೇಟ್ ಕಾಯ್ದುಕೊಳ್ಳುವುದು ಆಂಗ್ಲರಿಗೆ ಮುಖ್ಯವೆನಿಸಲಿದೆ. ಭಾನುವಾರ ವಿಂಡೀಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಭಾರತ ಗೆದ್ದರೆ ಈ ಲೆಕ್ಕಾಚಾರಗಳು ಪರಿಗಣನೆಗೆ ಬರುವುದಿಲ್ಲ. ವಿಶ್ವಕಪ್ ನ ಕನಸು ನನಸಾಗಬೇಕಾದರೆ ಗೆಲುವಿನ ಮಂತ್ರವನ್ನು ಟೀಂ ಇಂಡಿಯಾ ಜಪಿಸುವುದು ಒಳಿತು.

English summary
World Cup 2011 : Team India captain MS Dhonis strategy of using seam bowlers is criticized by cricket experts. Indian players yet to put up bold show in fielding department. The stats so far, depict a poor picture of team India in WC. Will India reach Quarter Finals?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more