ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ಸರಕಾರಿ ವಿದ್ಯುತ್ ಉಡುಗೊರೆ

By Staff
|
Google Oneindia Kannada News

Govt to buy power as exams approach
ಬೆಂಗಳೂರು, ಜ. 16 : ಪರೀಕ್ಷೆಗಾಗಿ ಕಷ್ಟಪಟ್ಟು ಓದುತ್ತಿರುವ ವಿದ್ಯಾರ್ಥಿಗಳು ಇನ್ನು ಮುಂದೆ ರಾತ್ರಿ ಹೊತ್ತಿನಲ್ಲಿ ಬುಡ್ಡಿ ದೀಪ ಅಥವಾ ಕಂದೀಲು ಉರಿಸಿ ಓದುವ ಅಗತ್ಯವಿಲ್ಲ. ಪರೀಕ್ಷೆ ದಿನಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರಕಾರ ವಿದ್ಯುತ್ ಸಮಸ್ಯೆ ನೀಗಿಸಲು ವಿಶೇಷ ಆಸಕ್ತಿ ವಹಿಸಿದ್ದು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗದಂತೆ ವಿದ್ಯುತ್ ಪೂರೈಸಲು ನಿತ್ಯ 10 ಮಿಲಿಯನ್ ಯೂನಿಟ್ ಕರೆಂಟ್ ಖರೀದಿಸಲು ನಿರ್ಧರಿಸಿದೆ.

ಜನವರಿ 3ನೇ ವಾರಾಂತ್ಯದಿಂದ ಏಪ್ರಿಲ್ ಅಂತ್ಯದವರೆಗೆ ಈ ಉದ್ದೇಶದಿಂದಲೇ ಪವರ್ ಏಕ್ಸ್ ಚೇಂಜ್ ವತಿಯಿಂದ ವಿದ್ಯುತ್ ಖರೀದಿಸಲು ಸರಕಾರ ಮುಂದಾಗಿದೆ. ಶಾಲಾ ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರತಿನಿತ್ಯ ಬೆಳಗ್ಗೆ 4ರಿಂದ 6 ಗಂಟೆವರೆಗೆ ಹಾಗೂ ರಾತ್ರಿ 7ರಿಂದ 11ರವರೆಗೆ ವಿದ್ಯುತ್ ಒದಗಿಸುವುದಾಗಿ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಈ ಹಿಂದೆಯೇ ಘೋಷಿಸಿದ್ದರು. ಅದರ ಪ್ರಕಾರ ಈ ಅವಧಿಯಲ್ಲಿ ನಿರಂತರವಾಗಿ ವಿದ್ಯುತ್ ಪೂರೈಸಲು ನಿತ್ಯ 10 ಮಿಲಿಯನ್ ಯೂನಿಟ್ ಗಳಷ್ಟು ವಿದ್ಯುತ್ ನ ಅಗತ್ಯವಿದೆ ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಯೂನಿಟ್ ಗೆ ತಲಾ 6 ರುಪಾಯಿ ದರದಲ್ಲಿ ಪವರ್ ಏಕ್ಸ್ ಚೇಂಜ್ ಮೂಲಕ ಹತ್ತು ಮಿಲಿಯನ್ ಯೂನಿಟ್ ಖರೀದಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಮೂಲಕ ಸರಿ ಸುಮಾರು ನೂರು ದಿನಗಳ ಕಾಲ ಸರಕಾರ ವಿದ್ಯುತ್ ಖರೀದಿಸಲಿದೆ. ಇದಕ್ಕಾಗಿ 600 ಕೋಟಿ ರುಪಾಯಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ನಿರಂತರ ಜ್ಯೋತಿಗೆ ಸಮಸ್ಯೆಯಿಲ್ಲ

ಈ ಮಧ್ಯೆ ಗ್ರಾಮೀಣ ಪ್ರದೇಶಗಳಿಗೆ 24 ಗಂಟೆ ಕಾಲ ವಿದ್ಯುತ್ ಪೂರೈಸುವ ನಿರಂತರ ಜ್ಯೋತಿ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆತಿದ್ದು, ಈ ಯೋಜನೆಗೆ ಅಗತ್ಯವಾದ ವಿದ್ಯುತ್ ಪೂರೈಕೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ಈಗ ಪೂರೈಕೆಯಾಗುತ್ತಿರುವ ವಿದ್ಯುತ್ ಪ್ರಮಾಣ 130 ಮಿಲಿಯನ್ ಯೂನಿಟ್ ಗಳಷ್ಟು, ನಿರಂತರ ಜ್ಯೋತಿ ಕಾರ್ಯಕ್ರಮ ಅನುಷ್ಠಾನಗೊಂಡ ನಂತರ 145 ಮಿಲಿಯನ್ ಯೂನಿಟ್ ಗಳಷ್ಟು ವಿದ್ಯುತ್ ಅವಶ್ಯಕತೆ ಬೀಳಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X