ಕರ್ನಾಟಕ ಹೈಕೋರ್ಟ್ ನೇಮಕಾತಿ 2021: 150 ಹುದ್ದೆಗಳಿಗೆ ಅರ್ಜಿ
ಬೆಂಗಳೂರು, ಅಕ್ಟೋಬರ್ 28: ಕರ್ನಾಟಕ ಹೈಕೋರ್ಟಿನಲ್ಲಿ 2021ನೇ ಸಾಲಿನ ನೇಮಕಾತಿ ಮುಂದುವರೆಸಲಾಗಿದೆ. ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 27, 2021 ಕೊನೆ ದಿನಾಂಕವಾಗಿದೆ.
ಸಂಸ್ಥೆ ಹೆಸರು: ಕರ್ನಾಟಕ ಹೈಕೋರ್ಟ್
ಹುದ್ದೆ : Typists
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ನವೆಂಬರ್ 27, 2021
ಹುದ್ದೆಗಳ ಸಂಖ್ಯೆ: 150 (ರಿಸ್ಯೂಡಲ್ ಪೇರೆಂಟ್ ಕೇಡರ್: 137, ಲೋಕಲ್ ಕೇಡರ್ 13 (2 ಬ್ಯಾಕ್ ಲಾಗ್ ಸೇರಿ)
ಸಂಬಳ ನಿರೀಕ್ಷೆ: ಕರ್ನಾಟಕ ಉಚ್ಚ ನ್ಯಾಯಾಲಯದ (ಅಧಿಕಾರಿ ಮತ್ತು ನೌಕರರ) ಪರಿಷ್ಕೃತ ವೇತನ ಶ್ರೇಣಿ ನಿಯಮ 2018 ಅನುಸಾರ ಅಂಗೀಕೃತ ಭತ್ಯೆಗಳೊಂದಿಗೆ 25,500-81,100/ ಪ್ರತಿ ತಿಂಗಳಿಗೆ (ದರ್ಜೆ 4)
ಪ್ರಮುಖ ದಿನಾಂಕ:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2021
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 21/10/2021 ಮಧ್ಯಾಹ್ನ 11.59ರ ತನಕ.
- ಆನ್‌ಲೈನ್‌ನಲ್ಲಿ ಅರ್ಜಿಶುಲ್ಕ ಸಲ್ಲಿಕೆ ಕೊನೆ ದಿನಾಂಕ: 30/10/2021
ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ವಿಧಾನ ಇನ್ನಷ್ಟು ವಿವರಗಳನ್ನು ಮುಂದೆ ತಿಳಿಯಿರಿ...

ವಿದ್ಯಾರ್ಹತೆ
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ 55 ರಷ್ಟು ಅಂಕಗಳೊಂದಿಗೆ ಪದವಿ ಪಡೆದು ಪಾಸಾಗಿರಬೇಕು. ಕಂಪ್ಯೂಟರ್ ಜ್ಞಾನ ಇರಬೇಕು.
ಪದವಿ: ವಿಜ್ಞಾನ/ಕಲೆ/ ವಾಣಿಜ್ಯ/ ವ್ಯವಹಾರ ನಿರ್ವಹಣೆ/ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಷಯ. ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಕನಿಷ್ಠ ಶೇಕಡ 55ರಷ್ಟು ಅಂಕಗಳನ್ನು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಕನಿಷ್ಠ ಶೇಕಡಾ 50 ರಷ್ಟು ಅಂಕಗಳೊಂದಿಗಿನ ವಿದ್ಯಾರ್ಹತೆ ಹೊಂದಿರತಕ್ಕದ್ದು ಮತ್ತು ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರತಕ್ಕದ್ದು.
ಕಂಪ್ಯೂಟರ್ ನಿರ್ವಹಣಾ ಜ್ಞಾನ: ಕಂಪ್ಯೂಟರ್ ಶಿಕ್ಷಣ ನೀಡುವ ಸಂಸ್ಥೆಯು ಪ್ರಧಾನ ಮಾಡುವ ಕಂಪ್ಯೂಟರ್ ಬೇಸಿಕ್ಸ್ ಕೋರ್ಸಿನ ಪ್ರಮಾಣ ಪತ್ರವನ್ನು ಹೊಂದಿರ ತಕ್ಕದ್ದು. ಟೈಪಿಂಗ್ ಪರೀಕ್ಷೆ ಪ್ರಮಾಣ ಪತ್ರ ಇದ್ದರೂ ಒಳ್ಳೆಯದು.

ವಯೋಮಿತಿ
ವಯೋಮಿತಿ : ಹೈಕೋರ್ಟ್ ನೇಮಕಾತಿ ನೋಟಿಫಿಕೇಷನ್‌ನಂತೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ 35 ವರ್ಷ(ನವೆಂಬರ್ 27, 2021). ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ/ಕೆಟಗೆರಿ 1 ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ, ಕೆಟಗೆರಿ -2, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ 3 ವರ್ಷ ವಿನಾಯಿತಿ ಸಿಗಲಿದೆ.
ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ/ಕೆಟಗೆರಿ 1/ದಿವ್ಯಾಂಗ: 200ರು
ಸಾಮಾನ್ಯ ಹಾಗೂ ಹಿಂದುಳಿದ ಅಭ್ಯರ್ಥಿ: 350 ರು
ಶುಲ್ಕ ಪಾವತಿ ವಿಧಾನ: ಆನ್ ಲೈನ್ ಮೂಲಕ

ನೇಮಕಾತಿ ಪ್ರಕ್ರಿಯೆ
ನೇಮಕಾತಿ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆಯನ್ನು ಶೈಕ್ಷಣಿಕ ಅರ್ಹತೆ, ಬೋಧಕೇತರ ವಿಷಯಗಳಲ್ಲಿನ ಜ್ಞಾನ ಪರಿಶೀಲಿಸಿ ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗುತ್ತದೆ. ವೈವಾ ವೋಸ್ ನಂತರ ವೈಯಕ್ತಿಕ ಸಂದರ್ಶನ.
ಅಭ್ಯರ್ಥಿಗಳ ಆಯ್ಕೆಯನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಕರ್ನಾಟಕ ಉಚ್ಚ ನ್ಯಾಯಾಲಯ ಸೇವಾ (ಸೇವಾ ಮತ್ತು ನೇಮಕಾತಿ ಷರತ್ತುಗಳು) ನಿಯಮಗಳು, 1973 ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಕರ್ನಾಟಕ ಉಚ್ಚ ನ್ಯಾಯಾಲಯ ಸೇವಾ (ಆಯ್ಕೆಯ ಮೂಲಕ ನೇರ ನೇಮಕಾತಿ) ನಿಯಮಗಳು, 1944 ಇವುಗಳ ಅನುಸಾರವಾಗಿ ಮಾಡಲಾಗುವುದು.
ಟೈಪಿಂಗ್ ಪರೀಕ್ಷೆ 100 ಅಂಕಗಳ ಪರೀಕ್ಷೆಯಲ್ಲಿ ಕನಿಷ್ಠ 60 ಅಂಕ ಗಳಿಸಬೇಕು. ವೈವಾ ವೋಸಿಯಲ್ಲಿ 20 ಅಂಕಗಳಿಗೆ 10 ಅಂಕ ಪಡೆದುಕೊಳ್ಳಬೇಕು. ಒಟ್ಟಾರೆ 120 ಅಂಕಗಳಿಗೆ 70 ಅಂಕ ಗಳಿಸಿದರೆ ಅರ್ಹರಾಗುತ್ತಾರೆ.

ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸುವ ವಿಧಾನ:
* ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಓದಿಕೊಂಡು, ಅರ್ಹತೆಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
* ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನೀಡಿ.
* ವಯೋಮಿತಿ, ವಿದ್ಯಾರ್ಹತೆ, ಅನುಭವ, ವಯೋಮಿತಿ ವಿನಾಯಿತಿ ಮುಂತಾದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸತಕ್ಕದ್ದು.
* ಟೈಪಿಸ್ಟ್ ಹುದ್ದೆ ಅರ್ಜಿ ನಮೂನೆಯನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ.
* ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು.
ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬಹುದು. ಡೆಬಿಟ್ ಕಾರ್ಡ್/ ರುಪೇ ಕಾರ್ಡ್/ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ ಮಾಸ್ಟ್ರೋ ಅಲ್ಲದೆ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಹಣ ಪಾವತಿಸಬಹುದು.
* ಅರ್ಜಿ ಸಲ್ಲಿಸಿದ್ದಕ್ಕೆ ಹಾಗೂ ಶುಲ್ಕ ಪಾವತಿಗೆ ಇ ರಸೀತಿ ಪಡೆದುಕೊಳ್ಳಿ.
ಅರ್ಜಿ ಸಲ್ಲಿಸುವ ದಿನಾಂಕ, ಮುಂತಾದ ಮಾಹಿತಿ ಪಡೆಯಲು ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ