ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚಾಯತ್ ರಾಜ್ ಇಲಾಖೆ ನೇಮಕಾತಿ; ಬೆಂಗಳೂರಲ್ಲಿ ಕೆಲಸ

|
Google Oneindia Kannada News

ಬೆಂಗಳೂರು, ಡಿಸೆಂಬರ್ 18; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಂ. ಜಿ. ನರೇಗಾ ಸಾಮಾಜಿಕ ಪರಿಶೋಧನಾ ಸಂಘದಲ್ಲಿ (ಮಹಾತ್ಮ ಗಾಂಧಿ ನರೇಗಾ ಯೋಜನೆ) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಕೆ ಮಾಡಲು ಜನವರಿ 5, 2022 ಕೊನೆಯ ದಿನವಾಗಿದೆ.

ಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಪನ್ಮೂಲ ವ್ಯಕ್ತಿ, ತಾಲೂಕು ಸಾಮಾಜಿಕ ಪರಿಶೋಧನಾ ಸಂಪನ್ಮೂಲ ವ್ಯಕ್ತಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಒಂದು ವರ್ಷದ ಅವಧಿಗೆ ನೇಮಕ ಮಾಡಲಾಗುತ್ತಿದ್ದು, ಸೇವೆ ತೃಪ್ತಿಕರವಾಗಿದ್ದಲ್ಲಿ ಗುತ್ತಿಗೆ ಅವಧಿಯನ್ನು ನವೀಕರಿಸಲಾಗುತ್ತದೆ.

ಯುಐಡಿಎಐ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ ಯುಐಡಿಎಐ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ

ಇದು ಸರ್ಕಾರಿ ಸೇವೆ/ ಹುದ್ದೆ ಆಗಿರುವುದಿಲ್ಲ ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವುದಾದರೆ ಪ್ರತಿ ಹುದ್ದೆಗೆ ಪ್ರತ್ಯೇಕ ಲಕೋಟೆಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಸಿಎಸ್‌ಜಿ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ, ಅರ್ಜಿ ಹಾಕಿ ಸಿಎಸ್‌ಜಿ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ, ಅರ್ಜಿ ಹಾಕಿ

Apply For District And Taluk Social Exploration Resource Person Posts

ಹುದ್ದೆಗಳ ವಿವರ; ಜಿಲ್ಲಾ ಸಂಪನ್ಮೂಲ ಪರಿಶೋಧನಾ ಸಂಪನ್ಮೂಲ ವ್ಯಕ್ತಿ (1). ಮಾಸಿಕ ವೇತನ 24,000 ರೂ.ಗಳು. ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ.

ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದ ಕೆಎಸ್ಆರ್‌ಟಿಸಿ ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದ ಕೆಎಸ್ಆರ್‌ಟಿಸಿ

ಅಭ್ಯರ್ಥಿಗಳು ಸಾಮಾಜಿಕ ಪರಿಶೋಧನೆ ನಿರ್ವಹಣೆ ಮಾಡಿದ ಅನುಭವ (3 ವರ್ಷ), ಸ್ವಯಂ ಸೇವಾ ಸಂಸ್ಥೆ/ ಸಂಘಗಳಲ್ಲಿ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಲ್ಲಿ ಕಾರ್ಯ ನಿರರ್ವಹಣೆ ಮಾಡಿದ ಅನುಭವ (5 ವರ್ಷ), ನರೇಗಾ ಕಾರ್ಯಕ್ರಮದ ಅನುಭವ (2) ವರ್ಷ ಆಪೇಕ್ಷಣಿಯ.

ತಾಲೂಕು ಸಾಮಾಜಿಕ ಪರಿಶೋಧನಾ ಸಂಪನ್ಮೂಲ ವ್ಯಕ್ತಿ (34). ಮಾಸಿಕ ವೇತನ 18,000 ರೂ.ಗಳು. ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ.

ಸಾಮಾಜಿಕ ಪರಿಶೋಧನೆ ನಿರ್ವಹಣೆ ಮಾಡಿದ ಅನುಭವ (2 ವರ್ಷ), ಸ್ವಯಂ ಸೇವಾ ಸಂಸ್ಥೆ/ ಸಂಘಗಳಲ್ಲಿ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಲ್ಲಿ ಕಾರ್ಯ ನಿರರ್ವಹಣೆ ಮಾಡಿದ ಅನುಭವ (3 ವರ್ಷ), ನರೇಗಾ ಕಾರ್ಯಕ್ರಮದ ಅನುಭವ (2) ವರ್ಷದ ಅನುಭವ ಆಪೇಕ್ಷಣಿಯವಾಗಿದೆ.

ಆದ್ಯತೆ; ಸಾಮಾಜಿಕ ಪರಿಶೋಧನಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ ತಾಲೂಕು ಸಾಮಾಜಿಕ ಪರಿಶೋಧನೆ ಸಂಪನ್ಮೂಲ ವ್ಯಕ್ತಿಗಳಿಗೆ ಅನುಭವ/ ಸೇವಾ ಅವಧಿ ಆಧಾರದ ಮೇಲೆ ಆದ್ಯತೆ ನೀಡಲಾಗುತ್ತದೆ.

ಹಾಲಿ ತಾಲೂಕು ಸಾಮಾಜಿಕ ಪರಿಶೋಧನಾ ಸಂಪನ್ಮೂಲ ವ್ಯಕ್ತಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 2 ವರ್ಷದ ಸಡಿಲಿಕೆ ಇರುತ್ತದೆ.

ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ; ನಿರ್ದೇಶಕರು, ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ, ಮೊದಲನೇ ಮಹಡಿ, ಅಭಯ ಕಾಂಪ್ಲೆಕ್ಸ್, ಕೊಳಗೇರಿ ಅಭಿವೃದ್ಧಿ ಮಂಡಳಿ ಕಟ್ಟಡ, ನಂ 55, ರಿಸಲ್ದಾರ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು 560020.

ಸ್ವೀಕೃತವಾಗುವ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಸಮಿತಿಯು ಸಂಕ್ಷೇಪಿತ ಪಟ್ಟಿಯನ್ನು ಆಧರಿಸಿ ನಿಗದಿತ ದಿನಾಂಕದಂದು ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 1:5 ಪ್ರಮಾಣದಲ್ಲಿ ಅಭ್ಯರ್ಥಿಗಳ ಸಂಕ್ಷೇಪಿತ ಪಟ್ಟಿಯನ್ನು ತಯಾರಿಸಿ ಸಂದರ್ಶನಕ್ಕೆ ಕರೆಯಲಾಗುತ್ತದೆ.

ಸಾಮಾಜಿಕ ಪರಿಶೋಧನೆ ಸಂಸ್ಥೆಯಲ್ಲಿ ಮೇಲ್ಕಂಡ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಲು ಇಚ್ಛಿಸಿರುವ ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯಕ ದಾಖೆಗಳ ಜೊತೆ ಮೊಹರಾದ ಲಕೋಟೆಯಲ್ಲಿ, ಲಕೋಟೆ ಮೇಲೆ ಹುದ್ದೆಯ ಹೆಸರನ್ನು ನಮೂದಿಸಿ ಸಲ್ಲಿಕೆ ಮಾಡುವುದು.

ಅರ್ಜಿಗಳನ್ನು ನಿಗದಿತ ದಿನಾಂಕ ಮತ್ತು ಸಮಯದೊಳಗೆ ಮೇಲ್ಕಂಡ ವಿಳಾಸಕ್ಕೆ ಸಲ್ಲಿಸಲು ಸೂಚನೆ ನೀಡಿದೆ. ನಂತರ ಬಂದ ಅರ್ಜಿಗಳನ್ನು ಹಾಗೂ ಅಂಚೆ ವಿಳಂಬದಿಂದ ಸ್ವೀಕೃತವಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಅರ್ಜಿಗಳ ಜೊತೆ ಕೆಳಕಂಡ ದೃಢೀಕೃತ ದಾಖಲಾತಿಗಳನ್ನು ಒದಗಿಸುವುದು
* ಜನ್ಮ ದಿನಾಂಕ ಕುರಿತು ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ
* ವಿದ್ಯಾರ್ಹತೆ ಕುರಿತು ದೃಢೀಕೃತ ದಾಖಲಾತಿ ಪತ್ರಗಳು
* ಅನುಭವ ಕುರಿತು ಪ್ರಮಾಣ ಪತ್ರ
* ಕಂಪ್ಯೂಟರ್ ಜ್ಞಾನ ಅಂಗೀಕೃತ/ದೃಢೀಕೃತ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ

ದೂರವಾಣಿ ಸಂಖ್ಯೆ 080-23460650/651
ವೆಬ್ ಸೈಟ್ www.rdpr.kar.nic.in/socialaudit.asp

Recommended Video

Team India ಸೌತ್ ಆಫ್ರಿಕಾ ವಿರುದ್ಧ ಸರಣಿ ಗೆಲ್ಲೋದು ಡೌಟ್!! | Oneindia Kannada

English summary
Rural development and panchayat raj department Karnataka invited applications for district & taluk social exploration resource person posts. Candidates can apply till January 5, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X