ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3000 ಭೂ ಮಾಪಕರ ನೇಮಕಾತಿ; ಜನವರಿ 21ರ ತನಕ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 29; ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖೆಗಳ ಇಲಾಖೆ 3000 ಭೂ ಮಾಪಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು 21/1/2022 ಕೊನೆಯ ದಿನವಾಗಿದೆ.

3000 ಭೂ ಮಾಪಕರ ಹುದ್ದೆಗಳಿಗೆ ಹಿಂದೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ಅಧಿಸೂಚನೆ ವಾಪಸ್ ಪಡೆಯಲಾಗಿತ್ತು. ಈಗ ಪುನಃ ಅಧಿಸೂಚನೆ ಪ್ರಕಟಿಸಲಾಗಿದೆ.

2,52,902 ಲಕ್ಷ ಹುದ್ದೆಗಳು ಖಾಲಿ; ನೇಮಕಾತಿ ಬಗ್ಗೆ ಸರ್ಕಾರದ ಮಾಹಿತಿ2,52,902 ಲಕ್ಷ ಹುದ್ದೆಗಳು ಖಾಲಿ; ನೇಮಕಾತಿ ಬಗ್ಗೆ ಸರ್ಕಾರದ ಮಾಹಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಫೆಬ್ರವರಿ ಅಥವ ಮಾರ್ಚ್ 2022ರಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಪರೀಕ್ಷೆಯ ಖಚಿತ ದಿನಾಂಕವನ್ನು ದಿನಪತ್ರಿಕೆ ಮತ್ತು ಇಲಾಖೆ ವೆಬ್‌ಸೈಟ್‌ಗಳ ಮೂಲಕ ತಿಳಿಸಲಾಗುತ್ತದೆ.

ಶಿವಮೊಗ್ಗ ಕೋರ್ಟ್‌ನಲ್ಲಿ ಕೆಲಸ ಖಾಲಿ ಇದೆ, ಅರ್ಜಿ ಹಾಕಿಶಿವಮೊಗ್ಗ ಕೋರ್ಟ್‌ನಲ್ಲಿ ಕೆಲಸ ಖಾಲಿ ಇದೆ, ಅರ್ಜಿ ಹಾಕಿ

ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿಯು ಆನ್‌ಲೈನ್‌ನಲ್ಲಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿದೆ. ಖುದ್ದಾಗಿ ಅಥವ ಅಂಚೆ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿಲ್ಲ ಎಂದು ನೇಮಕಾತಿ ಆದೇಶ ಸ್ಪಷ್ಟಪಡಿಸಿದೆ.

ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದ ಕೆಎಸ್ಆರ್‌ಟಿಸಿ ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದ ಕೆಎಸ್ಆರ್‌ಟಿಸಿ

ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ?

ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ?

ಉಡುಪಿ 131, ಉತ್ತರ ಕನ್ನಡ 101, ಕೊಡಗು 100, ಕೊಪ್ಪಳ 66, ಕೋಲಾರ 137, ಗದಗ 46, ಗುಲ್ಬರ್ಗ 12, ಚಿಕ್ಕಬಳ್ಳಾಪುರ 39, ಚಿಕ್ಕಮಗಳೂರು 112, ಚಿತ್ರದುರ್ಗ 93, ಚಾಮರಾಜನರ 50, ತುಮಕೂರು 334, ದಕ್ಷಿಣ ಕನ್ನಡ 66, ದಾವಣಗೆರೆ 183, ಧಾರವಾಡ 59 ಹುದ್ದೆಗಳಿವೆ.

ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 65, ಬಿಜಾಪುರ 76, ಬೆಳಗಾವಿ 112, ಬಳ್ಳಾರಿ 27, ವಿಜಯನಗರ 29, ಬಾಗಲಕೋಟೆ 60, ಬೀದರ್ 13, ಮಂಡ್ಯ 195, ಮೈಸೂರು 136, ಯಾದಗಿರಿ 45, ರಾಮನಗರ 155, ರಾಯಚೂರು 54, ಶಿವಮೊಗ್ಗ 127, ಹಾವೇತಿ 229, ಹಾಸನ 136 ಒಟ್ಟು 3000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಶೈಕ್ಷಣಿಕ ವಿದ್ಯಾರ್ಹತೆಗಳು

ಶೈಕ್ಷಣಿಕ ವಿದ್ಯಾರ್ಹತೆಗಳು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಪದವಿ ಪೂರ್ವ ಶಿಕ್ಷಣ (ಪಿಯುಸಿ) ಅಥವ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನಡೆಸುವ 12ನೇ ತರಗತಿ ಸಿ.ಬಿ.ಎಸ್.ಇ ಅಥವ ಐ.ಸಿ.ಎಸ್.ಇ ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ ಶೇ 60ಕ್ಕಿಂತ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.

ಭಾರತದಲ್ಲಿ ಕಾನೂನು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ (ಸಿವಿಲ್)/ ಬಿ. ಟೆಕ್ (ಸಿವಿಲ್)/ ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಉತ್ತೀರ್ಣಗೊಂಡವರು ಅರ್ಜಿ ಸಲ್ಲಿಸಬಹುದು.

ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್ ಅಂಡ್ ಸಿಟಿ ಸರ್ವೆಯಲ್ಲಿ ಪದವಿ ಪೂರ್ವ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು ಅಥವ ಕರ್ನಾಟಕ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ ನಡೆಸುವ ಐ.ಟಿ.ಐ ಇನ್ ಸರ್ವೆ ಟ್ರೇಡ್‌ನಲ್ಲಿಉತ್ತೀರ್ಣಗೊಂಡಿರಬೇಕು.

ರಾಜ್ಯ ಸರ್ಕಾರದ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಅಥವ ಸರ್ವೆ ಆಫ್ ಇಂಡಿಯಾ ಅಥವ ಸರ್ಕಾರಿ ವಲಯಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಅಥವ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷ ಭೂ ಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಅರ್ಜಿ ಸಲ್ಲಿಸಲು ಅರ್ಹರು.

ಅಭ್ಯರ್ಥಿಗಳ ವಯೋಮಿತಿ

ಅಭ್ಯರ್ಥಿಗಳ ವಯೋಮಿತಿ

ಅರ್ಜಿಗಳನ್ನು ಸ್ವೀಕಾರ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರ ತಕ್ಕದ್ದು. ಗರಿಷ್ಠ ವಯೋಮಿತಿ 65 ವರ್ಷಗಳು ಮೀರಿರಬಾರದು.

ಅಭ್ಯರ್ಥಿಗಳ ಜನ್ಮ ದಿನಾಂಕವನ್ನು ಎಸ್. ಎಸ್. ಎಲ್. ಸಿ. ಅಥವ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣ ಪತ್ರ/ ವರ್ಗಾವಣೆ ಪತ್ರ/ ಕ್ಯುುಮುಲೇಟಿವ್ ರೆಕಾರ್ಡ್‌ನಲ್ಲಿ ನಮೂದಿಸಿರುವಂತೆ ಪರಿಗಣಿಸಲಾಗುತ್ತದೆ. ಇವುಗಳನ್ನು ಹೊರತುಪಡಿಸಿ ಉಳಿದ ಯಾವುದೇ ದಾಖಲೆಗಳನ್ನು ಪರಿಗಣಿಸುವುದಿಲ್ಲ.

ಅರ್ಜಿ ಸಲ್ಲಿಸಲು ವಿಳಾಸ

ಅರ್ಜಿ ಸಲ್ಲಿಸಲು ವಿಳಾಸ

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು 1000 ರೂ. ಶುಲ್ಕವನ್ನು ಪಾವತಿ ಮಾಡಬೇಕಿದೆ. ಅರ್ಜಿ ಸಲ್ಲಿಕೆ ಮಾಡುವ ಮೊದಲು ಅಭ್ಯರ್ಥಿ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಬಿಳಿ ಹಾಳೆ ಮೇಲೆ ಅಂಟಿಸಿ ಭಾವಚಿತ್ರದ ಕೆಳಗೆ (ಹಾಳೆಯ ಮೇಲೆ) ಪೂರ್ಣ ಸಹಿ ಮಾಡಿ ನಂತರ ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಲು ಸಿದ್ಧತೆ ಮಾಡಿಟ್ಟುಕೊಳ್ಳಬೇಕು.

ಅರ್ಜಿಗಳನ್ನು rdservices.karnataka.gov.in ವೆಬ್ ಸೈಟ್ ಮೂಲಕ ಸಲ್ಲಿಸಬೇಕು. ನೇಮಕಾತಿ ಅಧಿಸೂಚನೆ ಡೌನ್‌ಲೋಡ್‌ಗೆ ಲಭ್ಯವಿದೆ. ಅಧಿಸೂಚನೆಯನ್ನು ಸರಿಯಾಗಿ ಓದಿ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.

Recommended Video

South Africa vs India: ಛೇ!!ಸಖತ್ ಬೌಲಿಂಗ್ ಮಾಡ್ತಿದ್ದ ಯಾರ್ಕರ್ ಕಿಂಗ್ ಬುಮ್ರಾ ಕಾಲಿಗೆ ಗಾಯ | Oneindia Kannada

English summary
Applications invited for 3000 land surveyor post. Candidates can apply online till 21/01/2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X