ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಹಲವೆಡೆ ಜೋರಾದ ಬಿಸಿಲು, ನಿಮ್ಮೂರಲ್ಲಿ ತಾಪಮಾನ?

|
Google Oneindia Kannada News

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಝಳ ಈಗಾಗಲೇ ಹೆಚ್ಚಾಗುತ್ತಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಾರ್ಚ್ 28ರವರೆಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

ಆದರೆ, ರಾಜ್ಯದ ಉಳಿದ ಭಾಗದಲ್ಲಿ ಮೇ ಅಂತ್ಯದವರೆಗೂ ಒಣ ಹವೆ, ಬಿಸಿಲಿನ ಝಳ ಮುಂದುವರೆಯುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಬೀದರ್, ಕಲಬುರಗಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮಾರ್ಚ್ 28ರವರೆಗೆ ಮಳೆಯಾಗಲಿದೆ.

ಉತ್ತರ ಒಳನಾಡಿನಲ್ಲಿ ಒಣಹವೆ

ಉತ್ತರ ಒಳನಾಡಿನಲ್ಲಿ ಒಣಹವೆ

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಮುಂದುವರೆಯಲಿದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿಎಂದಿನಂತೆ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರಿನ ಹವಾಮಾನ ಈ ವಾರ:

ಬೆಂಗಳೂರಿನ ಹವಾಮಾನ ಈ ವಾರ:

ಬೆಂಗಳೂರಿನಲ್ಲಿ ಶುಭ್ರ ಆಕಾಶವಿದ್ದು, ಬಿಸಿಲು ಜೋರಾಗಿರಲಿದೆ. ಮಾರ್ಚ್ 20 ರಿಂದ 22ರ ಅವಧಿಯಲ್ಲಿ ಬೆಂಗಳೂರು ನಗರದಲ್ಲಿಒಂದೆರಡು ಬಾರಿ ಮಳೆಯಾಗಲಿದೆ. ಮಾರ್ಚ್ 24ರಂದು ಸ್ವಲ್ಪ ಜೋರಾಗಿ ಮಳೆ ಸುರಿಯಲಿದೆ. ಗರಿಷ್ಠ 34ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಸರಾಸರಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಗರಿಷ್ಠ ಕನಿಷ್ಠ ಉಷ್ಣಾಂಶ:

ರಾಜ್ಯದ ಗರಿಷ್ಠ ಕನಿಷ್ಠ ಉಷ್ಣಾಂಶ:

ಮಧ್ಯ ಕರ್ನಾಟಕ ಭಾಗದಲ್ಲೂ ಒಣ ಹವೆ ಇರಲಿದೆ. ಆದರೆ, ಮಾರ್ಚ್ 24ರಂದು ದಾವಣಗೆರೆಯಲ್ಲಿ ಕನಿಷ್ಠ 14.3 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಕಲಬುರಗಿಯಲ್ಲಿ 37.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕರ್ನಾಟಕದ ವಿವಿಧ ಪಟ್ಟಣಗಳಲ್ಲಿ ತಾಪಮಾನ ವಿವರ ಇಲ್ಲಿದೆ:(ವಿನ್ಯಾಸ: ಭರತ್ ಎಚ್.ಸಿ)

Recommended Video

ಕೃಷಿ ಮಸೂದೆ ವಿರೋಧಿಸಿ ನಾಳೆ ಭಾರತ್ ಬಂದ್...! | Oneindia Kannada
ಕಲಬುರಗಿಯಲ್ಲಿ ಮಳೆ

ಕಲಬುರಗಿಯಲ್ಲಿ ಮಳೆ

ಕರ್ನಾಟಕದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಿಸುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಕಳೆದ ಎರಡು ದಿನಗಳಲ್ಲಿ ಚಿಂಚೋಳಿ ತಾಲೂಕಿನಲ್ಲಿ 12ಮಿ. ಮೀನಷ್ಟು ಮಳೆ ದಾಖಲಾಗಿದೆ. ಉಳಿದೆಡೆ ಜೋರು ಬಿಸಿಲು ಮುಂದುವರೆದಿದೆ. ಇದೇ ರೀತಿ ಬೆಳಗಾವಿ ಜಿಲ್ಲೆಯಲ್ಲೂ ಮಳೆಯಾಗಿದೆ.

English summary
Karnataka Weather Forecast March 24: Rain expected in Bengaluru this week, Mercury on rise North Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X