ಗುರುವಾರ ನಾಗರಪಂಚಮಿ, ಬನ್ನಿರಿ, ಹಾಲೆರೆಯೋಣ

ಇದರೊಂದಿಗೆ ಅಣ್ಣ ತಂಗಿಯರ ಭಾವನಾತ್ಮಕ ಸಂಬಂಧ ವೃದ್ಧಿಸುವ ಒಂದು ವಿಶೇಷ ಆಚರಣೆಯೂ ಇದರಲ್ಲಿ ಅಡಗಿದೆ. ಈ ಹಬ್ಬ ಒಂದು ರೀತಿ ರಕ್ಷಾಬಂಧನದ ಮುನ್ನುಡಿಯಂತೆ.
ಅಕ್ಕ ತಂಗಿಯರು ತಮ್ಮ ಸಹೋದರರಿಗೆ ಬೆನ್ನಿನ ಮೇಲೆ ತಾಳೆ ಹೂವಿನಿಂದ ಹಾಲು ಚಿಮುಕಿಸಿ ಅವರ ಜೀವನ ತಂಪಾಗಿರಲಿ ಎಂದು ಹಾರೈಸುವರು. ಇದಕ್ಕೆ ಪ್ರತಿಯಾಗಿ ಸೋದರಿಯರಿಗೆ ಉಡುಗೊರೆಯನ್ನು ಕೊಡುವರು.
ಪಂಚಮಿಯಂದು ತಂಬಿಟ್ಟು, ಎಳ್ಳುಂಡೆ, ಇನ್ನೂ ಹಲವು ತಿಂಡಿ ತಿನಿಸುಗಳನ್ನು ಮಾಡಿ ಅದನ್ನು ಮನೆ ಮನೆಗೂ ಹಂಚಿ ತಿನ್ನುವ ಪರಿಯನ್ನು ಹಳ್ಳಿಗಳು ಇನ್ನೂ ನಡೆಸಿಕೊಂಡು ಹೋಗುತ್ತಿರುವುದು ವಿಶೇಷ.
ನಾಗರಪಂಚಮಿಯಂದು ವಿಷ್ಣುವಿನ ವಾಹನ ಶೇಷನಾಗನಿಗೆ ಸಲ್ಲಿಸುವ ಪೂಜೆ ಶ್ರೇಷ್ಠ. ಈ ದಿನ ನಾಗಪೂಜೆ ಮಾಡಿದರೆ ನಾಗದೋಷಕ್ಕೆ ಪರಿಹಾರ ಸಿಗುವುದು ಎಂಬ ನಂಬಿಕೆಯ ಮೂಲ ಈ ಹಬ್ಬ. ಈ ಸಲುವಾಗಿ ವಾಸುಕಿ, ತಕ್ಷಕ, ಕಾಲಿಯಾ, ಮಣಿಭದ್ರ, ಐರಾವತ, ದೃತರಾಷ್ಟ್ರ, ಕಾರ್ಕೋಟಕ, ಧನಂಜಯ ಮುಂತಾದ ಹಾವುಗಳನ್ನು ಸ್ಮರಿಸಿಕೊಂಡು ಹಾವುಗಳ ವಿಗ್ರಹಕ್ಕೆ ಅಭಿಶೇಕ ಮಾಡಿ ಪೂಜೆ ಸಲ್ಲಿಸುವುದು ರೂಢಿ.












Click it and Unblock the Notifications