ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರವಕೊಡು ತಾಯೆ, ಕುಡುಕನಲ್ಲದ ಗಂಡನನ್ನ

|
Google Oneindia Kannada News

Gowri vratha
ಶ್ರಾವಣ ಮಾಸದ ಪ್ರತಿ ಮಂಗಳವಾರ ಮುತ್ತೈದೆಯರು ಸೇರಿ ಮಂಗಳದಾಯಿನಿಗೆ ಪೂಜೆ, ವೃತ ಸಲ್ಲಿಸುವುದು ವಾಡಿಕೆ. ತಮ್ಮ ಸಂಸಾರವನ್ನು ಸರಿದಾರಿಯೆಡೆಗೆ ಸುಖದಾಯಕವಾಗಿ ನಡೆಸಿಕೊಂಡು ಹೋಗು ತಾಯಿ ಎಂದು ಗೌರಿಗೆ ಮೊರೆ ಹೋಗುವ ಈ ವೃತ ಎಲ್ಲೆಡೆಯೂ ವಿಶೇಷ.

ಹಾಗೆಯೇ ಶ್ರಾವಣ ಶುಕ್ರವಾರದಂದು ನಡೆಯುವ ವರಮಹಾಲಕ್ಷ್ಮಿ ವೃತ ಕರ್ನಾಟಕದೆಲ್ಲೆಡೆ ಚಿರಪರಿಚಿತ. ಈ ಇಬ್ಬರೂ ದೇವಿಯರಿಗೂ ನಡೆಯುವ ವೃತಗಳು ಶ್ರಾವಣಕ್ಕೆ ವೈಭವದ ಕಿರೀಟ.

ತಮ್ಮ ಸಂಸಾರದ ಸುಖಕ್ಕೆ ಮಹಿಳೆಯರು ದೇವಿಯಲ್ಲಿ ಬೇಡಿಕೊಳ್ಳುವ ಪರಿ ಮೊದಲಿನಂದಲೂ ಬಂದಿದೆ. ಅದರಲ್ಲೂ ಹೊಸದಾಗಿ ಮದುವೆಯಾದ ಹೆಣ್ಣು ಗೌರಿ ವೃತವನ್ನು ಐದು ವರ್ಷಗಳ ಕಾಲ ಆಚರಿಸಿದರೆ ಗಂಡನ ಆಯಸ್ಸು ವೃದ್ಧಿಸುತ್ತದೆ ಎಂಬ ವಾಡಿಕೆ. ಇದರೊಂದಿಗೆ ಧನಧಾನ್ಯ ವೃದ್ಧಿಗೆ ತಾಯಿ ಲಕ್ಷ್ಮಿಯನ್ನು ಶುಕ್ರವಾರದಂದು ಸ್ಮರಿಸಿ ಕಲಶಕ್ಕೆ ಪೂಜೆ ಸಲ್ಲಿಸಿ ವಿಶೇಷವಾದ ನೈವೇದ್ಯ ಅರ್ಪಿಸಿ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡುತ್ತಾರೆ.

ಅರಿಶಿನ ದಾರವನ್ನು ಕೈಗೆ ಕಟ್ಟಿಸಿಕೊಂಡು ಆಶೀರ್ವಾದ ತೆಗೆದುಕೊಂಡರೆ ಶುಭವಾಗುತ್ತದೆ ಎಂಬ ನಂಬಿಕೆಯ ತಿರುಳಿನಿಂದ ಆಚರಿಸಲ್ಪಡುವ ಈ ಹಬ್ಬ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಉತ್ತರ ಭಾರತದಲ್ಲೂ ಶ್ರೇಷ್ಟ.

English summary
Mangala gowri puja is dedicated to goddess parvati and it is observed on tuesdays in shravana month by married women for wellbeing of the husband and prosperous married life. and also varamahalakshmi vratam is observed on a friday of shravana and worshipped for healthy progeny and for long life of the husband.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X