• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಸುನಾಮಿ ಮುಂದೆ ಮಕಾಡೆ ಮಲಗಿದ ಕುಟುಂಬ ರಾಜಕಾರಣಿಗಳು

|

ಲೋಕಸಭೆ ಚುನಾವಣೆ 2019ರಲ್ಲಿ ಮೋದಿ ನೇತೃತ್ವ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿದ್ದಲ್ಲದೆ, ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ 300 ಗಡಿ ದಾಟಿದ ಭಾರತೀಯ ಜನತಾ ಪಕ್ಷವು 2 ಸ್ಥಾನದಿಂದ ಆರಂಭಿಸಿ 303 ಸ್ಥಾನಕ್ಕೇರಿದೆ. ಇದಲ್ಲದೆ ಮತ ಪ್ರಮಾಣ ಶೇ 50 ದಾಟಿದೆ.

ಕೇರಳ, ತಮಿಳುನಾಡು, ಕೇರಳ ಹೊರತುಪಡಿಸಿದರೆ ಎಲ್ಲೆಡೆ ಕೇಸರಿ ಬಾವುಟ ಹಾರಾಡುತ್ತಿದೆ. ಇದೆಲ್ಲದರ ಜೊತೆಗೆ ಮೋದಿ ಅಲೆ ಅಬ್ಬರದಿಂದ ಕುಟುಂಬ ರಾಜಕೀಯ ನಡೆಸಿಕೊಂಡು ಬಂದಿದ್ದ ಘಟನಾಘಟಿಗಳು ಈ ಬಾರಿ ಮೂಲೆಗುಂಪಾಗಿದ್ದಾರೆ. ಇದು ಮತದಾರರು ನೀಡಿದ ವಿಶೇಷ ಸೂಚನೆ, ಸಂದೇಶ, ಎಚ್ಚರಿಕೆ ಎಂದು ತಿಳಿಯಬಹುದು.

ಲೋಕಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಆದರೆ, ವಿಶೇಷವೆಂದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಪ್ಪ-ಮಕ್ಕಳಿಗೆ ಈ ಬಾರಿ ಫಲಿತಾಂಶ ಶುಭವಾಗಿದ್ದರೆ, ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ಗುಜರಾತ್, ಉತ್ತರಪ್ರದೇಶ, ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶದಲ್ಲಿ ಪ್ರಭಾವಿ ಕುಟುಂಬಸ್ಥರ ಮಕ್ಕಳು ಸೋಲು ಅನುಭವಿಸಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ 2019: ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಹಾರ್ವಡ್ ವಿವಿಯ ವರದಿ ಪ್ರಕಾರ 1999ರಿಂದ ಇಲ್ಲಿ ತನಕ ಕಾಂಗ್ರೆಸ್ಸಿನಲ್ಲಿ 36 ಕುಟುಂಬ ರಾಜಕೀಯದ ಲಾಭ ಪಡೆದ ಸಂಸದರಿದ್ದರೆ, ಬಿಜೆಪಿಯಲ್ಲಿ 31 ಮಂದಿ ಇದ್ದರು.

ಕರ್ನಾಟಕದಲ್ಲಿ ಬಿಜೆಪಿ, ಕೈ -ತೆನೆ ಕುಟುಂಬ

ಕರ್ನಾಟಕದಲ್ಲಿ ಬಿಜೆಪಿ, ಕೈ -ತೆನೆ ಕುಟುಂಬ

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಮರು ಆಯ್ಕೆಯಾಗಿದ್ದಾರೆ. ಗುಲ್ಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಡಾ. ಉಮೇಶ್ ಜಾಧವ್ ಗೆದ್ದರೆ, ಅವರ ಮಗ ಡಾ. ಅವಿನಾಶ್ ಜಾಧವ್ ಅವರು ಚಿಂಚೋಳಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಶಾಸಕರಾಗಿದ್ದಾರೆ.

ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಸೋಲುಂಡಿದ್ದಾರೆ, ಅವರ ಮೊಮ್ಮಗ ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿದ್ದಾರೆ. ದೇವೇಗೌಡರ ಮತ್ತೊಬ್ಬ ಮೊಮ್ಮಗ, ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಸೋಲು ಕಂಡಿದ್ದಾರೆ.

ಸಚಿವ ಡಿಕೆ ಶಿವಕುಮಾರ್ ಅವರ ಸೋದರ ಡಿಕೆ ಸುರೇಶ್ ಅವರು ಬೆಂಗಳೂರು ಗ್ರಾಮಾಂತರದಲ್ಲಿ ಗೆದ್ದು ,ಕಾಂಗ್ರೆಸ್ಸಿಗೆ ಏಕೈಕ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಎಸ್ ಬಂಗಾರಪ್ಪ ಅವರ ಪುತ್ರ ಮಧು ಅವರು ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಮಗ ಬಿವೈ ರಾಘವೇಂದ್ರ ಅವರ ವಿರುದ್ಧ ಸೋಲು ಕಂಡಿದ್ದಾರೆ.

ಯಾದವರ ಕುಟುಂಬ- ಉತ್ತರಪ್ರದೇಶ

ಯಾದವರ ಕುಟುಂಬ- ಉತ್ತರಪ್ರದೇಶ

ಯಾದವರ ಕುಟುಂಬ- ಉತ್ತರಪ್ರದೇಶದ ಸಮಾಜವಾದಿ ಪಕ್ಷದವರು:

ಮೈನ್ ಪುರಿ: ಮುಲಾಯಂ ಸಿಂಗ್ ಯಾದವ್ ಗೆ ಗೆಲುವು.

ಆಜಂಗಢ: ಅಖಿಲೇಶ್ ಯಾದವ್(ಮುಲಾಯಂ ಪುತ್ರ) ಗೆ ಗೆಲುವು.

ಫಿರೋಜಾಬಾದ್: ಶಿವಪಾಲ್ ಯಾದವ್(ಮುಲಾಯಂ ಸಿಂಗ್ ಸೋದರ) ಗೆ ಸೋಲು.

ಕನೌಜ್: ಡಿಂಪಲ್ ಯಾದವ್ (ಅಖಿಲೇಶ್ ಯಾದವ್ ಪತ್ನಿ) ಗೆ ಸೋಲು.

ಗಾಂಧಿ ಪರಿವಾರ- ಉತ್ತರಪ್ರದೇಶ

ಗಾಂಧಿ ಪರಿವಾರ- ಉತ್ತರಪ್ರದೇಶ

ಮಾಜಿ ಪ್ರಧಾನಿ, ದಿವಂಗತ ಇಂದಿರಾಗಾಂಧಿ ಅವರ ಸೊಸೆಯಂದಿರು, ಮೊಮ್ಮಕ್ಕಳು:

ರಾಯ್ ಬರೇಲಿ: ಸೋನಿಯಾ ಗಾಂಧಿಗೆ ಗೆಲುವು

ಅಮೇಥಿ: ರಾಹುಲ್ ಗಾಂಧಿ(ಸೋನಿಯಾ ಗಾಂಧಿ ಪುತ್ರ) ಗೆ ಸೋಲು, ಕೇರಳದ ವಯನಾಡು ಕ್ಷೇತ್ರದಿಂದ ಜಯ.

ಸುಲ್ತಾನ್ ಪುರ್: ಮನೇಕಾ ಗಾಂಧಿ(ಇಂದಿರಾಗಾಂಧಿ ಸೊಸೆ), ಗೆಲುವು

ಫಿಲಿಬಿಟ್: ವರುಣ್ ಗಾಂಧಿ (ಮನೇಕಾ ಗಾಂಧಿ ಪುತ್ರ) ಗೆ ಗೆಲುವು

ಬಿಹಾರದ ಪಾಸ್ವಾನ್

ಬಿಹಾರದ ಪಾಸ್ವಾನ್

* ಚಿರಾಗ್ ಪಾಸ್ವಾನ್ (ರಾಮ್ ವಿಲಾಸ್ ಪಾಸ್ವಾನ್ ಪುತ್ರ), ಜಮುಯಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಭಾರಿ ಅಂತರದಲ್ಲಿ ಗೆಲುವು

* ಪಶುಪತಿ ಕುಮಾರ್ ಪಾಸ್ವಾನ್(ರಾಮ್ ವಿಲಾಸ್ ಕಿರಿಯ ಸೋದರ) ಹಾಜಿಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು.

* ರಾಮ ಚಂದ್ರ ಪಾಸ್ವಾನ್ (ರಾಮ್ ವಿಲಾಸ್ ಕಿರಿಯ ಸೋದರ) ಸಮಸ್ಟಿಪುರ್ ನಿಂದ ಸ್ಪರ್ಧೆ ಮಾಡಿ ಉತ್ತಮ ಅಂತರದಲ್ಲಿ ಗೆಲುವು.

**

ಶತ್ರುಘ್ನ ಸಿನ್ಹಾ ಕುಟುಂಬ

ಬಿಹಾರದ ಪಟ್ನಾ ಸಾಹಿಬ್ ನಲ್ಲಿ ಶತ್ರುಘ್ನ ಸಿನ್ಹಾಗೆ ಸೋಲು

ಉತ್ತರಪ್ರದೇಶದ ಲಕ್ನೋದಲ್ಲಿ ಅವರ ಪತ್ನಿ ಪೂನಂ ಸಿನ್ಹಾಗೆ ಸೋಲು

ಗೋಪಿನಾಥ್ ಮುಂಡೆ ಕುಟುಂಬ

ಗೋಪಿನಾಥ್ ಮುಂಡೆ ಕುಟುಂಬ

ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಗೋಪಿನಾಥ್ ಮುಂಡೆ ಅವರ ಅಕಾಲಿಕ ನಿಧನದಿಂದ ಅವರ ಪ್ರೀತಂ ಮುಂಡೆ ಅವರು ರಾಜಕೀಯ ರಂಗ ಪ್ರವೇಶಿಸಿದರು. ಬೀಡ್ ಕ್ಷೇತ್ರದಿಂದ 2014ರ ಉಪಚುನಾವಣೆಯಲ್ಲಿ 6.9 ಲಕ್ಷ ಮತಗಳ ಅಂತರದಿಂದ ಗೆದ್ದು ದಾಖಲೆ ಬರೆದಿದ್ದರು. 2019ರಲ್ಲಿ ಇದೇ ಕ್ಷೇತ್ರದಿಂದ ಎನ್ ಸಿಪಿ ಅಭ್ಯರ್ಥಿ ಭಜರಂಗ್ ಮನೋಹರ್ ಸೋನೆವಾನೆ ಅವರನ್ನು ಸೋಲಿಸಿ, ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

* ಪ್ರೀತಂ ಅವರ ಸೋದರಿ ಪಂಕಜಾ ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆಯಾಗಿದ್ದಾರೆ.

* ಮುಂಬೈ ನಾರ್ಥ್ ಸೆಂಟ್ರಲ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಪೂನಮ್ ಮಹಾಜನ್ ಅವರು ಗೋಪಿನಾಥ್ ಮುಂಡೆ ಕುಟುಂಬಕ್ಕೆ ಸಂಬಂಧಿಕರು. ದಿವಂಗತ ಪ್ರಮೋದ್ ಮಹಾಜನ್ ಪುತ್ರಿ ಪೂನಮ್ ಅವರು ದಿವಂಗತ ಸುನೀಲ್ ದತ್ ಅವರ ಪುತ್ರಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾದತ್ ಅವರನ್ನು ಸೋಲಿಸಿದರು.

ಆಂಧ್ರ, ತೆಲಂಗಾಣದಲ್ಲಿ ಕುಟುಂಬ ರಾಜಕೀಯ

ಆಂಧ್ರ, ತೆಲಂಗಾಣದಲ್ಲಿ ಕುಟುಂಬ ರಾಜಕೀಯ

ಆಂಧ್ರ, ತೆಲಂಗಾಣದಲ್ಲಿ

* ತೆಲಂಗಾಣ ಸಿಎಂ ಕೆ ಚಂದ್ರಶೇಖರರಾವ್ ಪುತ್ರಿ ಕೆ ಕವಿತಾ ಅವರಿಗೆ ನಿಜಾಮಾಬಾದ್ ಕ್ಷೇತ್ರದಲ್ಲಿ ಸೋಲು.

* ಅರಕು ಕ್ಷೇತ್ರದಲ್ಲಿ ಟಿಡಿಪಿಯ ವಿ ಕಿಶೋರ್ ಚಂದ್ರ ದೇವ್ ಸ್ಪರ್ಧೆ ಇದೇ ಕ್ಷೇತ್ರದಲ್ಲಿ ಅವರ ಪುತ್ರಿ ವಿ ಶ್ರುತಿ ದೇವಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ, ಇಬ್ಬರಿಗೂ ವೈಎಸ್ಸಾರ್ ಕಾಂಗ್ರೆಸ್ಸಿನ ಗೊಡ್ಡೆಟಿ ಮಾಧವಿಗೆ ಗೆಲುವು.

**

ವಿಶಾಖಪಟ್ಟಣಂ

* ಟಿಡಿಪಿ ಸ್ಥಾಪಕ ಎನ್ ಟಿ ರಾಮರಾವ್ ಪುತ್ರಿ ದಗ್ಗುಬಾಟಿ ಪುರಂದೇಶ್ವರಿ(ಬಿಜೆಪಿ) ಅವರು ತಮ್ಮ ಸೋದರನ ಅಳಿಯ ಎಂವಿ ಭರತ್(ಟಿಡಿಪಿ) ವಿರುದ್ಧ ವಿಶಾಖಪಟ್ಟಣಂ ಕ್ಷೇತ್ರದಲ್ಲಿ ಸ್ಪರ್ಧೆ. ಇಬ್ಬರಿಗೂ ಸೋಲು ಕಡಿಮೆ ಅಂತರದಿಂದ ವೈಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಎಂವಿವಿ ಸತ್ಯನಾರಾಯಣಗೆ ಗೆಲುವು

* ಎನ್ಟಿ ರಾಮರಾವ್ ಪುತ್ರ ಬಾಲಕೃಷ್ಣಗೆ ಹಿಂದೂಪುರದಲ್ಲಿ ಗೆಲುವು,

* ಮಾಜಿ ಕೇಂದ್ರ ಸಚಿವ ಚಿರಂಜೀವಿ ಸೋದರ ಪವನ್ ಕಲ್ಯಾಣ್ ಗೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲು, ಮತ್ತೊಬ್ಬ ಸೋದರ, ನಟ ನಾಗಬಾಬು ಅವರಿಗೆ ನರ್ಸಾಪುರ ಲೋಕಸಭಾ ಕ್ಷೇತ್ರದಲ್ಲಿ ಸೋಲು

ಪಂಜಾಬಿನಲ್ಲಿ ಕುಟುಂಬ ರಾಜಕೀಯ

ಪಂಜಾಬಿನಲ್ಲಿ ಕುಟುಂಬ ರಾಜಕೀಯ

ಪಂಜಾಬಿನ ಬಾದಲ್ ಕುಟುಂಬ

* ಫಿರೋಜ್ ಪುರ್ ನಲ್ಲಿ ಸುಖ್ ಬೀರ್ ಸಿಂಗ್ ಬಾದಲ್ (ಶಿರೋಮಣಿ ಅಕಾಲಿದಳ) ಸ್ಪರ್ಧಿಸಿ ಗೆಲುವು

* ಭಟಿಂಡಾ ಕ್ಷೇತ್ರದಲ್ಲಿ ಸುಖ್ ಬೀರ್ ಪತ್ನಿ ಹರ್ ಸಿಮ್ರತ್ ಕೌರ್ ಸ್ಪರ್ಧಿಸಿ ಗೆಲುವು

***

ಪಂಜಾಬಿನ ಗುರ್ ದಾಸನ್ಪುರ್ ಕ್ಷೇತ್ರದಲ್ಲಿ ಧರ್ಮೇಂದ್ರ ಪುತ್ರ ಸನ್ನಿ ಡಿಯೋಲ್ ಗೆ ಜಯ. ಸನ್ನಿ ಡಿಯೋಲ್ ಮಲ ತಾಯಿ ಹೇಮಮಾಲಿನಿಗೆ ಮಥುರಾ ಕ್ಷೇತ್ರದಲ್ಲಿ ಜಯ.

ತಮಿಳುನಾಡಿನ ಸಂಕೀರ್ಣ ಕುಟುಂಬ

ತಮಿಳುನಾಡಿನ ಸಂಕೀರ್ಣ ಕುಟುಂಬ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂ ಕರುಣಾನಿಧಿಯ ಮಗಳು, ಡಿಎಂಕೆ ನಾಯಕಿ ಕನ್ನಿಮೋಳಿ ಅವರು ತೂತ್ತುಕುಡಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು

ಎಂ ಕರುಣಾನಿಧಿಯ ಸಂಬಂಧಿ ದಯಾನಿಧಿ ಮಾರನ್ ಅವರು ಚೆನ್ನೈ ಸೆಂಟ್ರಲ್ ನಿಂದ ಸ್ಪರ್ಧಿಸಿ ಗೆಲುವು

ಜಾರ್ಖಂಡ್ ಮುಕ್ತಿ ಮೋರ್ಚಾದ ತಂದೆ ಮಕ್ಕಳು

ಜಾರ್ಖಂಡ್ ಮುಕ್ತಿ ಮೋರ್ಚಾದ ತಂದೆ ಮಕ್ಕಳು

ಜಾರ್ಖಂಡ್ ಮುಕ್ತಿ ಮೋರ್ಚಾದ ತಂದೆ ಮಕ್ಕಳು

ಶಿಬು ಸೊರೆನ್, ಡುಮ್ಕಾ, ಜಾರ್ಖಂಡ್ ನಲ್ಲಿ ಗೆಲುವು

ಅಂಜಲಿ ಸೊರೆನ್(ಶಿಬು ಸೊರೆನ್ ಪುತ್ರಿ), ಒಡಿಶಾದ ಮಯೂರ್ ಭಂಜ್ ನಲ್ಲಿ ಸೋಲು.

***

ಮಹಾರಾಷ್ಟ್ರದ ಪವಾರ್ ಕುಟುಂಬ

ಸುಪ್ರಿಯಾ ಸುಳೆ( ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಪುತ್ರಿ) ಬಾರಮತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು

ಪಾರ್ಥ್ ಪವಾರ್ (ಶರದ್ ಪವಾರ್ ಮೊಮ್ಮಗ) ಮಾವಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು.

ಸಿಂಧಿಯಾ ಸೇರಿದಂತೆ ಸೋತ ಪ್ರಮುಖರು

ಸಿಂಧಿಯಾ ಸೇರಿದಂತೆ ಸೋತ ಪ್ರಮುಖರು

* ಜ್ಯೋತಿರಾದಿತ್ಯ ಸಿಂಧಿಯಾ-ಮಾಧವರಾವ್ ಸಿಂಧಿಯಾ ಪುತ್ರ

* ವೈಭವ್ ಗೆಹ್ಲೋಟ್-ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಪುತ್ರ

* ಮೆಹಬೂಬಾ ಮುಫ್ತಿ-ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಪುತ್ರಿ

* ಮಿಲಿಂದ್ ದಿಯೋರಾ - ಕೇಂದ್ರದ ಮಾಜಿ ಸಚಿವ ಮುರಳಿ ದಿಯೋರಾ ಪುತ್ರ

* ಅಜಿತ್ ಸಿಂಗ್-ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಪುತ್ರ.

* ಜಯಂತ್ ಚೌಧರಿ - ಆರ್ ಎಲ್ಡಿ ಮುಖ್ಯಸ್ಥ ಅಜಿತ್ ಸಿಂಗ್ ಪುತ್ರ

* ದೀಪೇಂದ್ರ ಸಿಂಗ್ ಹೂಡಾ- ಹರ್ಯಾಣ ಮಾಜಿ ಸಿಎಂ ಭೂಪೇಂದ್ರ ಸಿಂಗ್ ಹೂಡಾ ಪುತ್ರ.

* ದುಷ್ಯಂತ್ ಚೌಟಾಲಾ- ಹರ್ಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ಪುತ್ರ.

* ಎನ್ ಲೋಕೇಶ್- ತೆಲುಗುದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಪುತ್ರ.

English summary
Post Lok Sabha Elections 2019 analysis : Did Modi wave 2.0 has nearly ended dynastic politics in India? this general election witnessed Political families perishing in the battle field without fight Likes of Rahul Gandhi, HD Deve Gowda, Yadav family suffered lose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more