ಜಾಹೀರಾತು vs ಜಾಹೀರಾತು: ಕಾಂಗ್ರೆಸ್ 'ಚೊಂಬು'ಗೆ 'ಡೇಂಜರ್' ಪ್ರತಿಕ್ರಿಯೆ ಕೊಟ್ಟ ಬಿಜೆಪಿ
ಬೆಂಗಳೂರು ಏಪ್ರಿಲ್ 22: ರಾಜ್ಯದಲ್ಲಿ ಪ್ರಬಲ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಜಾಹೀರಾತಿನ ಮೂಲಕ ಪರಸ್ಪರ ದಾಳಿಗಿಳಿದಿವೆ. ಕಾಂಗ್ರೆಸ್‌ನ 'ಚೊಂಬು' ಜಾಹೀರಾತಿಗೆ ಬಿಜೆಪಿ 'ಡೇಂಜರ್' ಜಾಹೀರಾತು ನೀಡಿದೆ.
ಕಳೆದ ಕೆಲ ದಿನಗಳಿಂದ ಪತ್ರಿಕೆಯಲ್ಲಿ ಜಾಹೀರಾತು ನೀಡುವ ಮೂಲಕ ಕಾಂಗ್ರೆಸ್ ಬಿಜೆಪಿ ವಿರುದ್ಧ ದಾಳಿಗಿಳಿದಿದೆ. ಕಾಂಗ್ರೆಸ್ ಜಾಹೀರಾತಿನಲ್ಲಿ ಮೋದಿ ಸರ್ಕಾರ ರಾಜ್ಯಕ್ಕೆ 'ಚೊಂಬು' ನೀಡುತ್ತಿದೆ ಎಂದು ಆರೋಪ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಇಂದು ಜಾಹೀರಾತು ನೀಡಿದೆ. ಈ ಪತ್ರಿಕಾ ಜಾಹೀರಾತಿನಲ್ಲಿ ಕಾಂಗ್ರೆಸ್ ಅನ್ನು 'ಡೇಂಜರ್' ಎಂದು ಬಿಜೆಪಿ ಕರೆದಿದೆ.

ಇತ್ತೀಚೆಗೆ ನಡೆದ ಬಾಂಬ್ ಸ್ಪೋಟ್‌ಗಳ ಬಗ್ಗೆ ಬಿಜೆಪಿ ಜಾಹೀರಾತಿನಲ್ಲಿ ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದೆ. ಹಾಗಾದರೆ ಇಂದು ಬಿಜೆಪಿ ನೀಡಿದ ಪತ್ರಿಕೆ ಜಾಹೀರಾತಿನಲ್ಲಿ ಏನಿದೆ-
''ದಲಿತರ ಕಲ್ಯಾಣಕ್ಕಾಗಿಯೇ ಮೀಸಲಾಗಿದ್ದ ಹಣ ಅನ್ಯರ ಪಾಲಾಗಬೇಕಾ?
ಹೋಟೆಲ್‌ಗೆ ಟೀ ಕುಡಿಯಲು ಹೋದ ಅಮಾಯಕರು ಬಾಂಬ್ ಸ್ಟೋಟಕ್ಕೆ ತುತ್ತಾಗಬೇಕಾ?
ಆಟೋದಲ್ಲಿ ಹೋದ ಪ್ರಯಾಣಿಕರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಬಲಿಯಾಗಬೇಕಾ?
ಕಾಲೇಜಿಗೆ ಹೋದ ಹೆಣ್ಣುಮಗಳು ಲವ್ ಜಿಹಾದ್‌ಗೆ ಬಲಿಯಾಗಬೇಕಾ?
ಕನ್ನಡಿಗರ ಪಾಲಿನ ಕಾವೇರಿ ನೀರು ಬೇರೆ ರಾಜ್ಯಕ್ಕೆ ಸೇರಬೇಕಾ?
ಮುಗ್ದ ಜನರು ನಕ್ಸಲರಿಗೆ ಬಲಿಯಾಗುವುದನ್ನು ನೋಡಬೇಕಾ?
ವಿಧಾನಸೌಧಕ್ಕೆ ಹೋದಾಗ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೇಳಬೇಕಾ?
ಮೇಯಲು ಹೋದ ಗೋ ಮಾತೆ ಕಸಾಯಿಖಾನೆ ಸೇರಬೇಕಾ?
DANGER ಎಚ್ಚರಿಕೆ
ಭದ್ತೆ ಮತ್ತು ಸುರತೆಗಾಗಿ ಬಿಜೆಪಿಗೆ ಮತ ನೀಡಿ
ಕಮಲದ ಬಟನ್ ಒತ್ತಿ ಬಿಜೆಪಿಯನ್ನು ಗೆಲ್ಲಿಸಿ'' ಎಂದು ಬಿಜೆಪಿ ಪತ್ರಿಕೆಗಳಲ್ಲಿ ಇಂದು ಜಾಹೀರಾತನ್ನು ನೀಡಿದೆ.
ಕಾಂಗ್ರೆಸ್ 'ಚೊಂಬು'ಗೆ 'ಡೇಂಜರ್' ಪ್ರತಿಕ್ರಿಯೆ ಕೊಟ್ಟ ಬಿಜೆಪಿ:
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಹಾಗೂ ರಾಮೇಶ್ವರ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ಜಾಹೀರಾತಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಮಾತ್ರವಲ್ಲದೆ ಲವ್ ಜಿಹಾದ್‌ಗೆ ಕಾಂಗ್ರೆಸ್ ಕುಮ್ಮಕ್ಕು ಇದೆ ಎಂದು ಬಿಜೆಪಿ ಜಾಹೀರಾತಿನಲ್ಲಿ ಬಿಂಬಿಸಿದೆ.
ಮಾತ್ರವಲ್ಲದೆ ದಲಿತರ ಕಲ್ಯಾಣಕ್ಕಾಗಿಯೇ ಮೀಸಲಾಗಿದ್ದ ಹಣ ಅನ್ಯರ ಪಾಲಾಗುತ್ತಿದೆ. ಕನ್ನಡಿಗರ ಪಾಲಿನ ಕಾವೇರಿ ನೀರು ಬೇರೆ ರಾಜ್ಯಕ್ಕೆ ಹೋಗುತ್ತಿದೆ. ಮುಗ್ದ ಜನರು ನಕ್ಸಲರಿಗೆ ಬಲಿಯಾಗುತ್ತಿದ್ದಾರೆ. ವಿಧಾನಸೌಧಕ್ಕೆ ಹೋದಾಗ 'ಪಾಕಿಸ್ತಾನ ಜಿಂದಾಬಾದ್' ಎಂಬ ಘೋಷಣೆ ಕೇಳಿ ಬರುತ್ತಿದೆ. ಮೇಯಲು ಹೋದ ಗೋ ಮಾತೆ ಕಸಾಯಿಖಾನೆ ಸೇರುತ್ತಿದೆ. ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ಎಂದು ಬಿಜೆಪಿ ಆರೋಪಿಸಿದೆ.

ಹೀಗಾಗಿ ಕಾಂಗ್ರೆಸ್‌ಗೆ 'ಡೇಂಜರ್' ಎಂದು ಹೆಸರಿನೊಂದಿಗೆ ಬಿಜೆಪಿ ಕರೆದಿದೆ. ಪತ್ರಿಕೆಯಲ್ಲಿ ಕಾಂಗ್ರೆಸ್ ಅನ್ನು ಡೇಂಜರ್ ಎಂದು ಕರೆದು ಡೇಂಜರ್ ಚಿಹ್ನೆಯನ್ನು ಅದರೊಂದಿಗೆ ಪ್ರಕಟಿಸಿದೆ. ಅದೂ ಅಲ್ಲದೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಫೋಟೋವನ್ನು ಇದರಲ್ಲಿ ಪ್ರಕಟಿಸಲಾಗಿದೆ.
ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಈ ನಡುವೆ ಕಾಂಗ್ರೆಸ್ ಬಿಜೆಪಿ ವಿರುದ್ಧ 'ಚೊಂಬು' ಜಾಹೀರಾತು ನೀಡಿ ಬಿಜೆಪಿಯನ್ನು ಕೆಣಕಿತ್ತು. ಮೋದಿ ಸರ್ಕಾರ ಜನರಿಗೆ ಅನ್ಯಾಯ ಮಾಡುತ್ತಿದೆ. ಚುನಾವಣೆಗೂ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸದೆ ಮೋದಿ ಸರ್ಕಾರ ಜನರಿಗೆ ಮಹಾಮೋಸ ಮಾಡಿದೆ. ತೆರಿಗೆಯಿಂದ ಹಿಡಿದು, ನಿರುದ್ಯೋಗ ಸೇರಿದಂತೆ ರೈತರ ಖಾತೆಗೆ ಹಣ ಜಮಾವಣೆ ವಿಚಾರದವರೆಗೆ ಮೋದಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿ 'ಚೆಂಬು' ಕೊಟ್ಟಿದೆ ಎಂದು ಕಾಂಗ್ರೆಸ್ ಜಾಹೀರಾತಿನ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿತ್ತು.
ಬಿಜೆಪಿ ವಿರುದ್ಧ ಕಾಂಗ್ರೆಸ್ ನೀಡಿದ 'ಚೊಂಬು' ಜಾಹೀರಾತು-
ಕಳೆದ ಶುಕ್ರವಾರ (ಏಪ್ರಿಲ್ 19) ಮೊದಲ ಬಾರಿಗೆ ಕಾಂಗ್ರೆಸ್ ಬಿಜೆಪಿ ವಿರುದ್ಧ 'ಚೊಂಬು' ಜಾಹೀರಾತನ್ನು ಪ್ರಕಟಿಸಿತ್ತು. ಬಳಿಕ ಭಾನುವಾರವೂ (ಏಪ್ರಿಲ್ 21) ಬಿಜೆಪಿ ವಿರುದ್ಧ 'ಚೊಂಬು' ಜಾಹೀರಾತು ಪ್ರಕಟಿಸಿತು. ಇದರಲ್ಲಿ ಮೋದಿ ಸರ್ಕಾರದ ವಿರುದ್ಧ ಸಾಕಷ್ಟು ಆರೋಪ ಮಾಡಲಾಗಿತ್ತು. ಚುನಾವಣೆಗೂ ಮುನ್ನ ಸಾಕಷ್ಟು ಭರವಸೆಗಳನ್ನು ನೀಡಿದ್ದ ಮೋದಿ ಸರ್ಕಾರ ಅದೆಲ್ಲವನ್ನು ಗಾಳಿಗೆ ತೂರಿ ಮೋಸ ಮಾಡುತ್ತಿದೆ ಎಂದು ಜಾಹೀರಾತಿನಲ್ಲಿ ದೂರಿತ್ತು.

ತೆರಿಗೆಯಲ್ಲಿ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗಿದೆ, ರೈತರ ಖಾತೆಗೆ ಹಣ ಜಮ ಮಾಡುವುದಾಗಿ ಹೇಳಿ ಬಿಜೆಪಿ 'ಚೊಂಬು' ನೀಡಿದೆ. ನಿರುದ್ಯೋಗ ಕಡಿಮೆಯಾಗಿಲ್ಲ ಬದಲಿಗೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಜಾಹೀರಾತಿನಲ್ಲಿ ಬಿಜೆಪಿ ವಿರುದ್ಧ ದಾಳಿ ಮಾಡಿತ್ತು. ಇದರ ಬೆನ್ನಲ್ಲೆ ಇಂದು ( ಏಪ್ರಿಲ್ 22) ಬಿಜೆಪಿ ಕಾಂಗ್ರೆಸ್ ವಿರುದ್ಧ ತಾನೂ ಕೂಡ ಜಾಹೀರಾತನ್ನು ನೀಡಿದೆ. ಇದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.
-
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
ಜಿಬಿಎ ಚುನಾವಣೆ: ಕರಡು ಮತದಾರರ ಪಟ್ಟಿ ಬಗ್ಗೆರಾಜಕೀಯ ಪ್ರತಿನಿಧಿಗಳ ಆಕ್ಷೇಪಣೆ, ಆಯುಕ್ತರಿಗೆ ಮಹತ್ವದ ಸಲಹೆ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ












Click it and Unblock the Notifications