ಕಾಂಗ್ರೆಸ್ ಸರ್ಕಾರ ನೀಡಿತ್ತು ಖಾಲಿ ಚೊಂಬು; ಮೋದಿ ಅದನ್ನು ಅಕ್ಷಯವನ್ನಾಗಿಸಿದ್ದಾರೆ: ಎಚ್‌ಡಿಡಿ
ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಖಾಲಿ ಚೊಂಬು ಜಾಹಿರಾತಿಗೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ತಿರುಗೇಟು ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕಾಂಗ್ರೆಸ್ ಜಾಹೀರತನ್ನು ಪ್ರದರ್ಶಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಗುಣಗಾನ ಮಾಡಿದರು.
2014ರಲ್ಲಿ ಡಾ.ಮನಮೋಹನ್ ಸಿಂಗ್ ಸರ್ಕಾರ ಖಾಲಿ ಚೊಂಬನ್ನು, ನರೇಂದ್ರ ಮೋದಿ ಅವರಿಗೆ ನೀಡಿತ್ತು. ಆದರೆ ಮೋದಿ ಖಾಲಿ ಚೊಂಬನ್ನೇ ಬಳಸಿಕೊಂಡು ಅಕ್ಷಯ ಪಾತ್ರೆಯನ್ನಾಗಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಲು ಸಾಲು ಹಗರಣಗಳನ್ನು ಮಾಡಿ ಹಣವನ್ನು ಲೂಟಿ ಹೊಡೆದು ನರೇಂದ್ರ ಮೋದಿ ಅವರಿಗೆ ಖಾಲಿ ಚೊಂಬನ್ನು ನೀಡಿತ್ತು. ಹತ್ತು ವರ್ಷ ಖಾಲಿ ಚೊಂಬನ್ನೇ ಅಕ್ಷಯ ಪಾತ್ರೆಯನ್ನಾಗಿಸಿದ ಹೆಗ್ಗಳಿಕೆ ನರೇಂದ್ರ ಮೋದಿಯವರದ್ದಾಗಿದೆ ಎಂದು ಮಾಜಿ ಪ್ರಧಾನಿ ಎಚ್‌ಡಿಡಿ ತಿಳಿಸಿದ್ದಾರೆ.
2ಜಿ ಹಗರಣ, ಕಲ್ಲಿದ್ದಲು ಹಗರಣ ಹೀಗೆ ಹಲವಾರು ಹಗರಣಗಳ ಮೂಲಕ ದೇಶದ ಸಂಪತ್ತನ್ನು ಲೂಟಿ ಮಾಡಿ, ದೇಶದ ಖಜಾನೆಯನ್ನು ಬರಿದು ಮಾಡಿ ಕಾಂಗ್ರೆಸ್ ಸರ್ಕಾರ ಮೋದಿ ಅವರ ಕೈಗೆ ಚೊಂಬು ನೀಡಿತ್ತು.
— BJP Karnataka (@BJP4Karnataka) April 20, 2024
ಆದರೆ ಕಾಂಗ್ರೆಸ್ ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ ಕೀರ್ತಿ ಸನ್ಮಾನ್ಯ ಮೋದಿಯವರದ್ದು.
- ಶ್ರೀ @H_D_Devegowda, ಮಾಜಿ ಪ್ರಧಾನ… pic.twitter.com/AJmYccuCIv
ಚಿಕ್ಕಬಳ್ಳಾಪುರದಲ್ಲಿ ನಡೆದ ಎನ್‌ಡಿಎ ಚುನಾವಣಾ ಪ್ರಚಾರದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಪ್ರದರ್ಶನ ಮಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಖಾಲಿ ಚೊಂಬನ್ನು ನೀಡಿತ್ತು. ಖಾಲಿ ಚೊಂಬನ್ನು ನೀಡಿದ್ದು ಯಾರು ಎಂದು ದೇವೇಗೌಡ ಪ್ರಶ್ನಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಕಲ್ಲಿದಲ್ಲು ಹಗರಣ, 2ಜಿ, ರೈಲ್ ಗೇಟ್, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಮ್ಮ ದೇಶದ ಸಂಪತ್ತನ್ನು ಯುಪಿಎ ಲೂಟಿ ಮಾಡಿತ್ತು. ಆಗ ದೇಶದ ಆರ್ಥಿಕತೆಯ ಚೊಂಬು ಖಾಲಿಯಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ಐದು ಗ್ಯಾರಂಟಿ ಕೊಟ್ಟಿದೆ. ಯುಪಿಎ 25 ಗ್ಯಾರಂಟಿ ಕೊಡ್ತಾರಂತೆ. 10 ವರ್ಷದಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಪಡೆಯಲು ವಿಫಲರಾದ ಪಕ್ಷ, ಅಧಿಕಾರದ ಕನಸು ಕಾಣುತ್ತಿದೆ ಎಂದು ದೇವೇಗೌಡ ಗುಡುಗಿದರು. ಅಲ್ಲದೆ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸ ಬೇಕಿದೆ ಎಂದಿದ್ದಾರೆ.

ರಾಜ್ಯದ ನಾಯಕರು ಖಾಲಿ ಚಂಬಿನ ಜಾಹೀರಾತು ನೀಡ್ತಾರೆ ಅದಕ್ಕೆ ಅವರಿಗೆ ನಾಚಿಕೆ ಆಗಬೇಕು ಎಂದು ಸಮಾರಂಭದಲ್ಲಿ ದೇವೇಗೌಡ ಗುಡುಗಿದರು. ನಿರುದ್ಯೋಗ ಪರಿಹರಿಸಲು ಎಷ್ಟು ಯೋಜನೆಗಳನ್ನು ರೂಪಿಸಿದ್ದೀರಾ ಎಂದು ರಾಜ್ಯ ನಾಯಕರಿಗೆ ಎಚ್‌ಡಿಡಿ ಪ್ರಶ್ನೆಯನ್ನು ಹಾಕಿದರು.
ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಗಳು ರಾಜ್ಯದ 28 ಕ್ಷೇತ್ರಗಳಲ್ಲಿ ನಿಂತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಮೋದಿಯನ್ನ ಮತ್ತೊಮ್ಮೆ ಪ್ರಧಾನಿ ಅವರ ಕೈ ಬಲ ಪಡಿಸಬೇಕಿದೆ. ಹೀಗಾಗಿ ಅವರ ಬೆಂಬಲವನ್ನು ಸೂಚಿಸಬೇಕೆಂದು ನಾನು ಬಂದಿದ್ದೆನೆ ಎಂದು ದೇವೇಗೌಡರು ಹೇಳಿದ್ರು. ನೀವು ನನ್ನ ಮೇಲೆ ಪ್ರೀತಿಯನ್ನು ಇಟ್ಟಿದ್ದಂತೆ ಕೋಲಾರ ಹಗೂ ಚಿಕ್ಕಬಳಾಪುರ ಸೇರಿದಂತೆ ರಾಜ್ಯದಾಂತ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ನೆರೆದ ಮತದಾರರಲ್ಲಿ ಮನವಿ ಮಾಡಿಕೊಂಡರು.

ಎಚ್‌ಡಿಡಿ ಗುಣಗಾನ
ಇದೇ ವೇಳೆ ಮಾತನಾಡಿದ ಮೋದಿ, ನನ್ನ ಜೀವನದ ಪ್ರತಿ ಸೆಕೆಂಡ್ ಜನರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ. ಬಿಜೆಪಿ ಮೈತ್ರಿಕೂಟದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದ ಜನತಾದಳ ಸೆಕ್ಯುಲರ್ (ಜೆಡಿಎಸ್) ಕೋಲಾರ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಮತ್ತು ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಸಚಿವ ಕೆ.ಸುಧಾಕರ್ ಅವರಿಗೆ ಬೆಂಬಲಿಸುವಂತೆ ಪ್ರಧಾನಿ ಮೋದಿ ಕರ್ನಾಟಕ ಜನರ ಬೆಂಬಲ ಕೋರಿದರು.
ವೇದಿಕೆಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಕೂಡ ಉಪಸ್ಥಿತರಿದ್ದರು. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು 90ರ ಹರೆಯದಲ್ಲೂ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಾನು ಕೂಡ ಅವರಿಂದ ಸ್ಫೂರ್ತಿ ಪಡೆಯುತ್ತೇನೆ. ಮಾಜಿ ಪ್ರಧಾನಿ ದೇವೇಗೌಡರ ಧ್ವನಿಯಲ್ಲಿ ಇಂದಿಗೂ ಉತ್ಸಾಹವಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.












Click it and Unblock the Notifications