Lok Sabha Election: ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಗ್ಯಾರಂಟಿ ಬಲ: ಬಿಜೆಪಿಗಿದೆ ಮೋದಿ, ಬಿಎಸ್‌ವೈ ತೋಳ್ಬಲ
ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಏರುತ್ತಲೆ ಇದೆ. ಈಗಾಗಲೇ ಮೊದಲು ಹಂತದ ಮತದಾನ ಮುಗಿದಿದ್ದು, ಎರಡನೇ ಹಂತದ ಮತದಾನಕ್ಕೆ ದೇಶ ಸಿದ್ಧವಾಗುತ್ತಿದೆ. ಈಗ ಎಲ್ಲರ ಚಿತ್ತ ಎರಡನೇ ಹಂತದ ಮತದಾನದತ್ತ ನೆಟ್ಟಿದೆ. ಕರ್ನಾಟಕದಲ್ಲೂ ಈ ವೇಳೆ ಚುನಾವಣೆಗಳು ನಡೆಯಲಿವೆ.
ಕರ್ನಟಕದಲ್ಲಿ ಸದ್ಯ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುತ್ತಿದೆ. ದೇಶದಲ್ಲಿ ಈಗಾಗಲೇ ಎರಡು ಅವಧಿಯಲ್ಲಿ ಬಿಜೆಪಿ ಸರ್ಕಾರ ನಡೆಸಿದ್ದು, ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ. ರಾಜ್ಯದಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಕನಸನ್ನು ಕೈ ಪಾಳಯ ಕಾಣುತ್ತಿದೆ. ಈ ಚುನಾವಣೆಯನ್ನು ಎಂದಿನಂತೆ ಎನ್‌ಡಿಎ ಮೈತ್ರಿ ಕೂಟ ಹಾಗೂ ಇಂಡಿಯಾ ಮೈತ್ರಿಕೂಟಗಳ ನಡುವೆ ಕಾಳಗ ನಡೆಯಲಿದೆ. ಎನ್‌ಡಿಎ ಮೈತ್ರಿ ಕೂಟವನ್ನು ನರೇಂದ್ರ ಮೋದಿ ಅವರು ಮುನ್ನಡೆಸುತ್ತಿದ್ದಾರೆ.

ಮೋದಿ, ಬಿಎಸ್‌ವೈ ಪ್ರಭಾವ
ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರಭಾವ ಮಾತ್ರವಲ್ಲದೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಭಾವ ಕೆಲಸ ಮಾಡುತ್ತದೆ. ಇದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ತವರು ರಾಜ್ಯವಾಗಿರುವುದರಿಂದ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅವರ ಪ್ರತಿಷ್ಠೆಯ ಕಣವಾಗಿದೆ.
ವರವಾಗುತ್ತಾ ಗ್ಯಾರಂಟಿ?
2019ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಅಲ್ಲದೆ ಎರಡು ಸ್ಥಾನವನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿದ್ದವು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಅತಿ ಹೆಚ್ಚು ಸ್ಥಾನವನ್ನು ಗೆಲ್ಲುವ ಕನಸು ಕಾಣುತ್ತಿದೆ. ಅಲ್ಲದೆ ರಾಜ್ಯ ಸರ್ಕಾರ ಐದು ಗ್ಯಾರಂಟಿ ನೀಡಿ ಜನರ ವಿಶ್ವಾಸವನ್ನು ಗೆದ್ದಿದೆ. ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡ ಕಾಂಗ್ರೆಸ್ ಚುನಾವಣಾ ಅಖಾಡ ಪ್ರವೇಶಿಸಿದೆ.
ಜಾಹಿರಾತು ಅಭಿಯಾನ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪೇಸಿಎಂ ಅಭಿಯಾನ ನಡೆಸಿದ ರೀತಿ ಈ ಬಾರಿ ಕಾಂಗ್ರೆಸ್ ಖಾಲಿ ಚೊಂಬನ್ನು ಹಿಡಿದು ಪ್ರಚಾರ ನಡೆಸುತ್ತಿದೆ. ಕೇಂದ್ರ ಸರ್ಕಾರದಿಂದ ಆದ ಅನ್ಯಾಯದ ಪ್ರತೀಕವಾಗಿ ಖಾಲಿ ಚೊಂಬನ್ನು ಕಾಂಗ್ರೆಸ್ ಪ್ರದರ್ಶಿಸುತ್ತಿದೆ. ಕಾಂಗ್ರೆಸ್ ಅವರ ಹಲವು ಸ್ಟಾರ್ಟರ್ಜಿಗಳು ವರ್ಕ್‌ಔಟ್ ಆಗಿವೆ. ಈ ರಣ ತಂತ್ರ ವರ್ಕ್ ಆಗುತ್ತದಾ ಎಂಬುದಕ್ಕೆ ಜೂನ್ 4ಕ್ಕೆ ಉತ್ತರ ಲಭಿಸಲಿದೆ.

ವಿಧಾನಸಭೆಯಲ್ಲಿ ಹಿನ್ನಡೆ
ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವ ಕನಸು ಕಂಡಿದ್ದ ಬಿಜೆಪಿಗೆ ಹಿನ್ನಡೆ ಆಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲನ್ನು ಕಂಡಿತ್ತು. ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಎಸ್‌ವೈ ಅಳೆದು ತೂಗಿ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಡಿದ್ದ ತಪ್ಪನ್ನು ಮೆಟ್ಟಿನಿಲ್ಲುವ ಕನಸು ಬಿಜೆಪಿ ಪಕ್ಷದ್ದಾಗಿದೆ.
ಸಮೀಕ್ಷೆಗಳು ಏನು ಹೇಳುತ್ತವೆ.
ಇತ್ತೀಚಿಗೆ ಪ್ರಕಟವಾದ ಚುನಾವಣ ಪೂರ್ವ ಸಮೀಕ್ಷೆಯಲ್ಲಿ ಇಂಡಿಯಾ ಮೈತ್ರಿ ಕೂಟ ಮತಗಳನ್ನು ಸೆಳೆಯುವಲ್ಲಿ ಸಫಲವಾಗಿದೆ ಎಂದು ತೋರಿಸಿದೆ. ಆದರೆ ಬಿಜೆಪಿಯ ಮತ ಬೇಟೆಯಲ್ಲೂ ಯಾವುದೇ ಇಳಿಕೆ ಕಂಡಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿಯುತ್ತದೆ. ದಕ್ಷಿಣ ಭಾರತದಿಂದ ಬಿಜೆಪಿ ಮ್ಯಾಜಿಕ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತು ಭಾರತ ಮೈತ್ರಿಕೂಟದ ನಡುವೆ ನಿಕಟ ಸ್ಪರ್ಧೆ ಏರ್ಪಡಬಹುದು.
ಕರ್ನಾಟಕದಲ್ಲಿ ಯಾವುದೇ ರಾಜಕೀಯ ಪಕ್ಷದ ಗೆಲುವು ಅಥವಾ ಸೋಲು ಜಾತಿ ಸಮೀಕರಣಗಳಿಂದ ನಿರ್ಧರಿಸಲ್ಪಡುತ್ತದೆ. ಅದರಲ್ಲೂ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಒಲವು ತೋರಿರುವ ಪಕ್ಷಗಳು ಇಲ್ಲಿಂದ ಗೆಲುವು ಸಾಧಿಸುತ್ತಿವೆ.












Click it and Unblock the Notifications