• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಕ್ತಿ ಚಿತ್ರ: ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ

|
   Tejasvi Surya:ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ | Oneindia Kannada

   2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಯಾರಾಗಲಿದ್ದಾರೆ ? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಕೊನೆ ಕ್ಷಣದವರೆಗೂ ಕುತೂಹಲ ಕಾಯ್ದುಕೊಂಡ ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಯುವ ನಾಯಕ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ದಿವಂಗತ ಅನಂತ್ ಕುಮಾರ್ ಅವರು ಈ ಕ್ಷೇತ್ರದಲ್ಲಿ ಆರು ಬಾರಿ ಜಯ ಸಾಧಿಸಿ, ಬಿಜೆಪಿಗೆ ಸೇಫ್ ಎನಿಸುವ ವಾತಾವರಣ ಸೃಷ್ಟಿಸಿದವರು. ಅವರ ನಿಧನ ನಂತರ ಅವರ ಪತ್ನಿ ಸಾಮಾಜಿಕ ಕಾರ್ಯಕರ್ತೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆಯಿತ್ತು. ಮಾಜಿ ಡಿಸಿಎಂ ಆರ್ ಅಶೋಕ್ ಅವರು ತೇಜಸ್ವಿನಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕೂಡಾ ಹೈಕಮಾಂಡಿಗೆ ತೇಜಸ್ವಿನಿ ಅವರ ಹೆಸರನ್ನು ಸೂಚಿಸಿದ್ದರು.

   ತೇಜಸ್ವಿನಿಗೆ ತಪ್ಪಿದ ಟಿಕೆಟ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ

   ಆದರೆ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಂತಾದ ಹಿರಿಯ ಮುಖಂಡರು ತೆಗೆದುಕೊಂಡ ನಿರ್ಣಯದಂತೆ ಆರೆಸ್ಸೆಸ್ ಬೆಂಬಲಿತ ತೇಜಸ್ವಿ ಸೂರ್ಯ ಅವರಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದೆ.

   ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 18ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 26 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಮೇ 23ರಂದು ಫಲಿತಾಂಶ ಹೊರಬೀಳಲಿದೆ.

   ತೇಜಸ್ವಿ ಸೂರ್ಯ ಪರಿಚಯ

   ತೇಜಸ್ವಿ ಸೂರ್ಯ ಪರಿಚಯ

   ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರ ಸಹೋದರನ ಮಗ ತೇಜಸ್ವಿ ಸೂರ್ಯ ಅವರು ವೃತ್ತಿಯಿಂದ ವಕೀಲರು. 28 ವರ್ಷ ವಯಸ್ಸಿನ ತೇಜಸ್ವಿ ಅವರು ಕರ್ನಾಟಕ ಹೈಕೋರ್ಟಿನಲ್ಲಿ ವಕೀಲರಾಗಿದ್ದಾರೆ. ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಜೊತೆಗೆ ರಾಷ್ಟ್ರೀಯ ಸಾಮಾಜಿಕ ಜಾಲ ತಾಣಗಳ ವಿಭಾಗದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ.

   ತೇಜಸ್ವಿ ಸೂರ್ಯ ಅವರು ಬಿಜೆಪಿ ಆರಂಭಿಸಿದ 'ಬೆಂಗಳೂರು ಉಳಿಸಿ' ಅಭಿಯಾನದಲ್ಲಿ ಸಕ್ರೀಯರಾಗಿ ಪಾಲ್ಗೊಂಡಿದ್ದರು. ತಮ್ಮ ಪ್ರಖರ ಮಾತುಗಾರಿಕೆ, ಸಮಾಜದ ವಿವಿಧ ರಂಗದವರಿಗೆ ಬೆರೆಯುವ ಗುಣದಿಂದ ಮೆಚ್ಚುಗೆ ಗಳಿಸಿದವರು. ಆರೆಸ್ಸೆಸ್ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ತೇಜಸ್ವಿ ಕಳೆದ 4 ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ.

   ಬ್ರಿಟನ್ ಸಂಸತ್ ಪ್ರವಾಸ

   ಬ್ರಿಟನ್ ಸಂಸತ್ ಪ್ರವಾಸ

   ಬ್ರಿಟನ್ ಪಾರ್ಲಿಮೆಂಟ್‍ನಲ್ಲಿ ಭಾಗವಹಿಸಲು ಆಯ್ಕೆಯಾದವರ ಕಿರಿಯ ಮುಖಂಡರ ಪೈಕಿ ತೇಜಸ್ವಿ ಸೂರ್ಯ ಕೂಡಾ ಒಬ್ಬರಾಗಿದ್ದರು. ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ಸಿನಿಂದ ರಿಜ್ವಾನ್ ಅರ್ಷದ್ ಅವರು ಆಯ್ಕೆಯಾಗಿದ್ದರು. ಬ್ರಿಟನ್ ಸಂಸತ್ತಿನ ಕಾರ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಪ್ರವಾಸ ಇದಾಗಿತ್ತು. ಇಂದು ಈ ಮೂವರು ಯುವ ನಾಯಕರು ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿರುವುದು ಗಮನಾರ್ಹ. ಮಾಧ್ಯಮಗಳಲ್ಲಿ ದೇಶ, ಪಕ್ಷದ ಪರವಾಗಿ ಚರ್ಚೆಗಳಲ್ಲಿ ಭಾಗವಹಿಸಿ ತೇಜಸ್ವಿ ಸೂರ್ಯ ಅವರು ಸೈ ಎನಿಸಿಕೊಂಡಿದ್ದಾರೆ.

   OMG! ಟಿಕೆಟ್ ಸಿಕ್ಕಿದ್ದಕ್ಕೆ ತೇಜಸ್ವಿ ಸೂರ್ಯ ಭಾವುಕ ಟ್ವೀಟ್

   ಜಯನಗರ ಉಪ ಚುನಾವಣೆ

   ಜಯನಗರ ಉಪ ಚುನಾವಣೆ

   ಈ ಹಿಂದೆ ಜಯನಗರದ ಶಾಸಕ ಬಿಎನ್ ವಿಜಯ್ ಕುಮಾರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಗಾಗಿ ಅಭ್ಯರ್ಥಿ ಆಯ್ಕೆ ಹುಡುಕಾಟದಲ್ಲಿದ್ದಾಗಲೂ ತೇಜಸ್ವಿ ಸೂರ್ಯ ಅವರ ಹೆಸರು ಕೇಳಿಬಂದಿತ್ತು.ಆದರೆ, ಸ್ಪರ್ಧೆ ನಿರಾಕರಿಸಿದ್ದರೂ ಪಕ್ಷ ನೀಡುವ ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುವೆ ಎಂದಿದ್ದರು. ಅಂದು ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರಿಗೆ ಟಿಕೆಟ್ ನೀಡಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ವಿರುದ್ಧ ಪ್ರಹ್ಲಾದ್ ಸೋಲು ಕಂಡಿದ್ದರು.

   ಅನಂತ್ ಕುಮಾರ್ ನನ್ನ ಮೊದಲ ಗುರು: ತೇಜಸ್ವಿ ಸೂರ್ಯ

   ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ

   ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ

   ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಅವರು ಸ್ಪರ್ಧಿಸುತ್ತಿದ್ದಾರೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ಬೆಂಗಳೂರು ನಗರದ ಪ್ರಖ್ಯಾತ ಬಡಾವಣೆಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಕ್ಷೇತ್ರ ಇದಾಗಿದೆ. ಬಿ.ಟಿ.ಎಂ ಲೇಔಟ್, ಜಯನಗರ ಹೊರತು ಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

   1996 ರಿಂದ 2014ರ ತನಕ ಬಿಜೆಪಿ ಅಭ್ಯರ್ಥಿಗಳೇ ಗೆದ್ದ ಕ್ಷೇತ್ರವಿದು. ಬ್ರಾಹ್ಮಣ ಮತದಾರರೇ ಇಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ. 1999ರ ನಂತರ ಮತ್ತೆ ಈ ಕ್ಷೇತ್ರಕ್ಕೆ ಮರಳಿರುವ ಹರಿಪ್ರಸಾದ್ ಅಥವಾ ಯುವ ಮುಖಂಡ ತೇಜಸ್ವಿ ಸೂರ್ಯ ಪೈಕಿ ಯಾರಿಗೆ ವಿಜಯ ಮಾಲೆ ದಕ್ಕುವುದೋ ಕಾದು ನೋಡೋಣ

   ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ

   ವಿವಿಧ ರಂಗಗಳಲ್ಲಿ ಆಸಕ್ತಿ ಹೊಂದಿರುವ ತೇಜಸ್ವಿ

   ವಿವಿಧ ರಂಗಗಳಲ್ಲಿ ಆಸಕ್ತಿ ಹೊಂದಿರುವ ತೇಜಸ್ವಿ

   ಚಿಕ್ಕಮಗಳೂರು ಮೂಲದವರಾದ ತೇಜಸ್ವಿ ಸೂರ್ಯ ಅವರು ಸದ್ಯ ಬೆಂಗಳೂರಿನ ನಿವಾಸಿ, ಬೆಂಗಳೂರಿನ ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್, ಜಯನಗರದ ನ್ಯಾಷನಲ್ ಕಾಲೇಜ್ ನಲ್ಲಿ ಪದವಿಪೂರ್ವ ಕಾಲೇಜು ವ್ಯಾಸಂಗ. ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ನಿಂದ ಎಲ್ಎಲ್ ಬಿ ಪದವಿ.

   ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಲ್ಲಿ ಸಕ್ರಿಯರಾಗಿದ್ದರು. ಹಾರನಹಳ್ಳಿ ಲಾ ಪಾರ್ಟ್ನರ್ಸ್ ನಲ್ಲಿ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಣೆ

   English summary
   Profile of Tejasvi Surya BJP candidate from Bengaluru South Lok sabha Constituency. Surya (28), considered a fiery orator, is a practicing lawyer at the Karnataka High Court. He is general secretary of the state Yuva morcha and a part of the national social media team.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X