ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷ

By Mahesh
|
Google Oneindia Kannada News

ಕರ್ನಾಟಕ ಜನತಾ ಪಕ್ಷ ಹೊಸ ಪ್ರಾದೇಶಿಕ ಪಕ್ಷವಾಗಿ ಭಾನುವಾರ (ಡಿ.9, 2012) ಉದಯವಾಗಿದೆ. ನೂತನ ಪಕ್ಷದ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿದರು. ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ಅವರು ಪಕ್ಷವನ್ನು ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು.

ಪಕ್ಷದ ಧ್ಯೇಯ: ರಾಜ್ಯದ ನೆಲ, ಜಲ, ಸಂಸ್ಕೃತಿ ಹಾಗೂ ಭಾಷೆಯನ್ನು ಉಳಿಸಿ ಬೆಳೆಸುವುದು. ಕಲ್ಯಾಣ ಕರ್ನಾಟಕದ ಕನಸು. ಹೈಕಮಾಂಡ್ ತೊಂದರೆ ನಿವಾರಣೆ. ಪ್ರಾದೇಶಿಕ ಮಹತ್ವ ಸ್ಥಾಪನೆ. ಪ್ರಾದೇಶಿಕ ಪಕ್ಷದ ಅಗತ್ಯದ ಬಗ್ಗೆ ಕೆಜೆಪಿ ಅಧ್ಯಕ್ಷರು ಏನು ಹೇಳುತ್ತಾರೆ ನೋಡಿ

ಪಕ್ಷದ ಪ್ರಮುಖರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಮುನ್ನ ಪಕ್ಷದ ಉಸ್ತುವಾರಿಯನ್ನು ಸ್ಥಾಪಕ ಪ್ರಸನ್ನ ಕುಮಾರ್ ವಹಿಸಿಕೊಂಡಿದ್ದರು. ನಂತರ ಬಿಜೆಪಿ ತೊರೆದ ಮೇಲೆ ಧನಂಜಯ್ ಕುಮಾರ್ ಅವರು ಹಂಗಾಮಿಯಾಗಿ ಕೆಜೆಪಿ ಅಧ್ಯಕ್ಷರಾಗಿದ್ದರು. ಜೆಡಿಎಸ್, ಕಾಂಗ್ರೆಸ್ ಕೆಲ ನಾಯಕರನ್ನು ಹೊರತುಪಡಿಸಿದರೆ ಬಿಜೆಪಿಯ ಬಂಡಾಯ ಬಣ ಸಂಪೂರ್ಣವಾಗಿ ಕೆಜೆಪಿಯಲ್ಲಿ ಕಾಣಬಹುದಾಗಿದೆ.

Karnataka Janata Party Profile

ಫೆಬ್ರವರಿ 15, 2013ರಂದು ಕರ್ನಾಟಕ ಜನತಾ ಪಕ್ಷಕ್ಕೆ ಅಧಿಕೃತ ಪಕ್ಷದ ಮಾನ್ಯತೆ ಸಿಕ್ಕಿತು. [ ref: ರಾಜ್ಯಪತ್ರ:: ಚುನಾವಣಾ ಆಯೋಗ ಅಧಿಸೂಚನೆ ಸಂಖ್ಯೆ ರಾಚು ಆ.01. ಆರ್ ಪಿಪಿ.2010 ದಿನಾಂಕ 14-12-2012]

ಪಕ್ಷದ ಅಧ್ಯಕ್ಷ: ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಪ್ರಚಾರ ಸಮಿತಿ ಅಧ್ಯಕ್ಷ: ವಿ. ಧನಂಜಯ್ ಕುಮಾರ್, ಮಾಜಿ ಕೇಂದ್ರ ಸಚಿವ

ಉಪಾಧ್ಯಕ್ಷರು:
* ಬಿ.ಜಿ ಬಣಕಾರ್, ಮಾಜಿ ಎಂಎಲ್ ಸಿ, ಹಿರೇಕೆರೂರು
* ಕೆ.ಎಚ್ ಶ್ರೀನಿವಾಸ್, ಮಾಜಿ ಸಚಿವ, ಶಿವಮೊಗ್ಗ
* ವಿಜಯ್ ಸಂಕೇಶ್ವರ, ಮಾಜಿ ಸಂಸದ, ಹುಬ್ಬಳ್ಳಿ
* ಪೆರುಮಾಳ್, ನಿವೃತ್ತ ಐಎಎಸ್ ಅಧಿಕಾರಿ, ಬೆಂಗಳೂರು
* ಗುರುಪಾದಪ್ಪ ನಾಗಮಾರಪಲ್ಲಿ, ಮಾಜಿ ಸಚಿವ, ಬೀದರ್

ಪ್ರಧಾನ ಕಾರ್ಯದರ್ಶಿಗಳು
* ಎಂ.ಡಿ. ಲಕ್ಷ್ಮಿ ನಾರಾಯಣ, ಮಾಜಿ ಶಾಸಕ ತುಮಕೂರು

ಕಾರ್ಯದರ್ಶಿಗಳು:
* ಗುರುದೇವ್, ಮಾಜಿ ಶಾಸಕ, ಹಾಸನ
* ಪುಟ್ಟಸಿದ್ದ ಶೆಟ್ಟಿ, ಮಾಜಿ ಎಂಎಲ್ ಸಿ, ಮೈಸೂರು

ಮಾಧ್ಯಮ ಪ್ರಮುಖರು: ಬಿ.ಆರ್ ಪಾಟೀಲ್, ವಿಧಾನಸಭೆ ಮಾಜಿ ಉಪಸಭಾಪತಿ, ಗುಲ್ಬರ್ಗಾ
ರಾಜ್ಯ ಕಾರ್ಯಕಾರಣಿ ಸದಸ್ಯರು ಸೇರಿದಂತೆ ಉಳಿದ ಪಟ್ಟಿ ಇಲ್ಲಿದೆ ನೋಡಿ [...]

ಪಕ್ಷದ ಸ್ಥಾಪನೆ ದಿನ: ಡಿ.9, 2012
ಪಕ್ಷದ ಚಿನ್ಹೆ: ತೆಂಗಿನಕಾಯಿ ಅರ್ಧ ಹೋಳು
ವೆಬ್ ಸೈಟ್: http://kjpkarnataka.org/
ಇತರೆ ಪ್ರಮುಖ ವೆಬ್ ಸೈಟ್ : http://yeddyurappa.in/ ಹಾಗೂ http://shobhakarandlaje.com/
ಮುಖವಾಣಿ : ಇಲ್ಲ

ಇಮೇಲ್ : ಪಕ್ಷದ ಐಟಿ ಸೆಲ್ ಐಡಿ

ವಿಳಾಸ: ಜನ ಸಂಪರ್ಕ ಕೇಂದ್ರ
#11, 12ನೇ ಮುಖ್ಯರಸ್ತೆ, 17th ಅಡ್ಡರಸ್ತೆ,
ಮಲ್ಲೇಶ್ವರ
ಬೆಂಗಳೂರು- 560 003
ದೂರವಾಣಿ: 080-6533 4545

* ಕೆಜೆಪಿ ಯೂ ಟ್ಯೂಬ್ ಕೊಂಡಿ:
* ಯಡಿಯೂರಪ್ಪ ಅವರ ವಿಡಿಯೋ ಕೊಂಡಿ

* ಟ್ವಿಟರ್ ನಲ್ಲಿ ಹಿಂಬಾಲಿಸಿ

* ಫೇಸ್ ಬುಕ್ ಅಧಿಕೃತ ಪುಟ ನೋಡಿ

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Know Your Political Party : Karnataka Janata Paksha (KJP) is a political party based in Karnataka, a state in Southern India. Founded by Padmanabha Prasanna, the KJP came into prominence when former Chief Minister of Karnataka B. S. Yeddyurappa joined the party and assumed its leadership on Dec9, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X