• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಷ್ಣುಸಹಸ್ರನಾಮ- ಮಹಾತ್ಮ್ಯ ಕಥಾಮೃತ

By * ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Vishnusahasranama book release
ವಿಷುಸಹಸ್ರ ನಾಮದ ಮಹಿಮೆಯ ಬಗ್ಗೆ ಹಲವಾರು ಲೇಖನಗಳನ್ನು ಬರೆದೆ. ಪ್ರತಿಯೊಬ್ಬರ ಜನ್ಮನಕ್ಷತ್ರರಾಶಿ ಪ್ರಕಾರ ಯಾವ ಶ್ಲೋಕಗಳನ್ನು ಪಠಿಸಬೇಕೆಂಬುವುದರ ಬಗ್ಗೆ ಬರೆದೆ. 27 ನಕ್ಷತ್ರ ಹಾಗೂ ನಾಲ್ಕು ಚರಣಗಳ ನೂರೆಂಟು ಖಾನೆಗಳುಳ್ಳ ಚಾರ್ಟ್ ತಯಾರಿಸಿದೆ, ನಾರಾಯಣಾಮೃತ ಫೌಂಡೇಷನ್ ಅವರು ಪ್ರಕಾಶಿಸಿದರು, ಅದು ಬಹಳ ಜನಪ್ರಿಯವೂ ಆಯಿತು. ಆ ಚಾರ್ಟಿನ ಪ್ರಕಾರ ಪ್ರತಿಯೊಬ್ಬರಿಗೂ ತಮ್ಮ ಜನ್ಮನಾಮದ ಪ್ರಕಾರ ಪಠಿಸಲು ಒಂದು ವಿಶಿಷ್ಠ ಶ್ಲೋಕವಿದೆ. ಪ್ರತಿಗಳನ್ನು ಉಚಿತವಾಗಿ ಹಂಚಿದ್ದೂ ಆಯಿತು.

ಜೋಗೇಶ್ವರಿಯ ಶ್ರೀ ರಾಘವೇಂದ್ರಸ್ವಾಮಿ ಮಠದ ಗುರುವಾರ ಅಷ್ಟೋತ್ತರ ಮಂಡಲಿಯ ಸದಸ್ಯರಾದ ವಿಜಯೀಂದ್ರ ದೇಶಪಾಂಡೆ ಅವರ ಚಿಕ್ಕಮ್ಮನ ಮಗ ಬಿ.ಎಚ್.ಪಾಟಿಲರಿಗೆ ಪಾರ್ಶ್ವವಾಯುವಿನ ತೊಂದರೆಯುಂಟಾಗಿತ್ತು. ದೇಹದ ಒಂದು ಭಾಗವು ನಿಷ್ಕ್ರಿಯಗೊಂಡಿತು, ಮಾತಾಡಲು ಬರುತ್ತಿರಲಿಲ್ಲ. ನಾನು ತಯಾರಿಸಿದ ಚಾರ್ಟ್ ಪ್ರಕಾರ ಬಿ.ಎಚ್.ಪಾಟೀಲರ ಜನ್ಮನಾಮಕ್ಕೆ ಅನುಗುಣವಾದ ವಿಷ್ಣುಸಹಸ್ರನಾಮದ 73ನೆಯ ಶ್ಲೋಕವನ್ನು ದಿನಾಲು ಹನ್ನೊಂದು ಸಲ ಪಠಿಸಲು ಅಣ್ಣ ವಿಜಯೀಂದ್ರ ಹೇಳಿದರು. ತಮ್ಮ ಮೂರು ತಿಂಗಳಲ್ಲಿ ನಡೆದಾಡಲು ಮತ್ತು ಮಾತಾಡಲು ಶುರುಮಾಡಿದರು. ಆರು ತಿಂಗಳಲ್ಲಿ ರೋಗಮುಕ್ತರಾದರು.

ಪಾಟೀಲರು ಮೊದಲು ಪುಣೆಯಲ್ಲಿ, ನಂತರ ಮುಂಬೈಯಲ್ಲಿ(ಬೇಲಾಪುರದಲ್ಲಿ) ಅವರ ಮಗನ ಮನೆಯಲ್ಲಿ ವಾಸಿಸುತ್ತಿದ್ದರು. ಅದೇ ಸೆಕ್ಟರ್‌ನಲ್ಲಿ ಪ್ರೊ.ಮನೋಜ ದೇಶಪಾಂಡೆ ಇರುತ್ತಾರೆ. ಅವರ ತಂದೆ ವಿಲಾಸರಾವ ದೇಶಪಾಂಡೆ (ಚಾರಠಾಣಕರ) ಅವರು ತಮ್ಮ ಊರಾದ ಪರಭಣಿಯಲ್ಲಿಯ ಶ್ರೀ ವಿಷ್ಣುಸಹಸ್ರನಾಮ ಸತ್ಸಂಗ ಮಂಡಳದ ಕ್ರಿಯಾಶೀಲ ಸದಸ್ಯರು. ಪಾಟೀಲರು ವಿಷ್ಣುಸಹಸ್ರನಾಮ ಪಾರಾಯಣದಿಂದ ರೋಗಮುಕ್ತವಾದ ಸಂಗತಿ ತಿಳಿದು ವಿಜಯೀಂದ್ರ ದೇಶಪಾಂಡೆಯವರ ಮುಖಾಂತರ ನನ್ನನ್ನು ಸಂಪರ್ಕಿಸಿದರು. ತಾವು ಸಂಪಾದಿಸುತ್ತಿದ್ದ ವಿಷ್ಣುಸಹಸ್ರನಾಮ- ಮಹಾತ್ಮ್ಯ ಕಥಾಮೃತ ಎಂಬ ಮರಾಠಿ ಪುಸ್ತಕಕ್ಕೆ ಒಂದು ಲೇಖನ ಬರೆಯಲು ವಿನಂತಿಸಿದರು. ನನಗೆ ಮರಾಠಿ ಓದಲು ಬರುತ್ತದೆ ಆದರೆ ಲೇಖನ ಬರೆಯುವುದು ಕಷ್ಟಕರ ಎಂದೆ. ನನ್ನಿಂದ ಇಂಗ್ಲಿಷಿನಲ್ಲಿ ಲೇಖನ ಬರೆಸಿ ಅದನ್ನು ಮರಾಠಿಗೆ ಅನುವಾದಿಸಿ ಪ್ರಕಟಿಸಿದರು. ಪುಣೆಯ ಪ್ರಸಿದ್ಧ ಡಾ| ಬಿ.ವಿ.ಜಾಲಗಾಂಕರ್ ಅವರು ನಾನು ಸಿದ್ಧಪಡಿಸಿದ ಚಾರ್ಟ್ ನೋಡಿ ಪ್ರಭಾವಿತರಾಗಿದ್ದರು. ಪಾಟೀಲರು ಗುಣಮುಖವಾದ ಕತೆಯನ್ನು ಉತ್ಸುಕತೆಯಿಂದ ಕೇಳಿದ್ದರು. ಪುಸ್ತಕ ಪ್ರಕಾಶನಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಆಮಂತ್ರಿಸಲು ಡಾ| ಜಾಲಗಾಂವಕರ್ ಸಲಹೆ ನೀಡಿದ್ದರಂತೆ.

ದೇವಗಿರಿ ಎಕ್ಸ್‌ಪ್ರೆಸ್ ಮುಖಾಂತರ ಪರಭಣಿ ತಲುಪಿದೆ. ವಿಲಾಸರಾವ್ ಅವರ ಮಗ ಪ್ರೊ.ಮನೋಜ ನನ್ನನ್ನು ಸ್ವಾಗತಿಸಲು ಸ್ಟೇಶನ್ನಿಗೆ ಬಂದಿದ್ದರು. ಶ್ರೀಮಂಗಲ ಕಾರ್ಯಾಲಯದಲ್ಲಿ ಮುಂಜಾನೆ ಸುಮಾರು ಆರು ನೂರು ಜನ ಶ್ರೀವಿಷ್ಣುಸಹಸ್ರ ನಾಮದ ಪಾರಾಯಣ 9ರಿಂದ 11ರವರೆಗೆ ನಡೆಸಿದರು. ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಭ.ವಿ.ಜಾಲನಾಪುರಕರ ವಹಿಸಿದ್ದರು. (ಈ ವರ್ಷ ಅವರಿಗೆ ಪುಣೆಯ ಶ್ರೇಷ್ಠ ವೈದ್ಯ ಬಹುಮಾನ ದೊರೆತಿದೆ). ಮುಖ್ಯ ಅತಿಥಿಯಾಗಿ ನಾನು ಮರಾಠಿಯಲ್ಲಿ ಭಾಷಣ ಮಾಡಬೇಕಾಯ್ತು. ಧೈರ್ಯದಿಂದ ಮಾತಾಡಿದೆ. ನನಗೆ ವಿಷ್ಣುಸಹಸ್ರನಾಮದಲ್ಲಿ ಆಸಕ್ತಿಯನ್ನು ಉಂಟುಮಾಡಿದ ಡಾ| ಅರಳುಮಲ್ಲಿಗೆ ಪಾರ್ಥಸಾರಥಿ ಹಾಗೂ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರನ್ನು ನೆನೆಸಿದೆ. ಭಾವನಾತ್ಮಕವಾಗಿ ತಲ್ಲೀನರಾದ ಪ್ರೇಕ್ಷಕರಿಗೆ ನನ್ನ ಮಾತು ಹಿಡಿಸಿತು. ಭಾಷಣದ ನಂತರ ಒಂದು ಪ್ರಶ್ನೋತ್ತರ ಸಭೆಯೂ ನಡೆಯಿತು. ಒಂದು ಸಂತಸದ ಸಂಗತಿ ಎಂದರೆ ಪುಸ್ತಕ ಬಿಡುಗಡೆಯ ನಂತರ ಸಾವಿರ ಪ್ರತಿಗಳೂ ಖರ್ಚಾದವು. ಪುಸ್ತಕ ವಿಕ್ರೇತಾ ಸುಖೀ ಭವ ಎಂದು ಹರಸಿದೆವು.

ಪರಭಣಿಯಲ್ಲಿ ಕೃಷಿ ವಿಶ್ವವಿದ್ಯಾಲಯವಿದೆ. ಅಲ್ಲಿಯ ವಿದ್ಯಾನಗರದಲ್ಲಿ ಒಂದು ಪ್ರಸಿದ್ಧವಾದ ಶ್ರೀರಾಘವೇಂದ್ರಸ್ವಾಮಿಗಳ ವೃಂದಾವನವಿದೆ. ಹೆಚ್ಚಾಗಿ ಕನ್ನಡಿಗರು ಅಲ್ಲಿ ಗುರುವಾರಕ್ಕೊಮ್ಮೆ ಸೇರುತ್ತಾರೆ. ಅದನ್ನು ಪ್ರಾರಂಭಿಸಿದವರು ನಾರಾಯಣರಾವ ಪಾಥ್ರೀಕರ್ ಎಂಬವರು ಕನ್ನಡಿಗರು. ರಾಯರ ಮಂತ್ರ್ರಾಕ್ಷತೆಯ ಬಲದಿಂದ ಅನೇಕ ಪವಾಡ ಸದೃಶ ಕಾರ್ಯ ಅವರು ಸಾಧಿಸಿದ್ದಾರೆ. ಅವರಿಗೆ ಎಂಭತ್ತು ವರ್ಷ. ಅವರು ಪರಭಣಿಯಿಂದ 40 ಕಿಲೋಮೀಟರ್ ದೂರದಲ್ಲಿರುವ ಪಾಥ್ರಿ ಎಂಬ ಊರಿನವರು. ಆ ಊರಲ್ಲಿ ಒಂದು ಭವ್ಯವಾದ ಸಾಯಿಬಾಬಾ ಮಂದಿರವಾಗಿದೆ ಎಂದು ಹೇಳಿದರು. ಶಿರಡಿಯ ಸಾಯಿಬಾಬಾ ಎಂದು ಪ್ರಸಿದ್ಧರಾದ ಸಂತರು ಇವರ ಊರವರಂತೆ. ಅವರು ಚಿಕ್ಕವರಿರುವಾಗಲೇ ಪಂಢರಪುರಕ್ಕೆ ಹೋದಾಗ ಅವರ ತಂದೆತಾಯಿ ತೀರಿಹೋದರಂತೆ. ಮುಂದೆ ಅವರನ್ನೊಬ್ಬ ಫಕೀರ ಸಾಕಿದನಂತೆ. ಅವರ ಮೂಲ ಹೆಸರು ಹರಿಭಾವು ಪರಶುರಾಮ ಭಸಾರಿ. ಅವರ ವಂಶಸ್ಥರೆಲ್ಲ ಪರಭಣಿಗೆ ಬಂದಾಗ ನಾರಾಯಣರಾವ ಅವರ ಮನೆಯಲ್ಲೇ ತಂಗುತ್ತಿದ್ದರಂತೆ. ಮುಂದಿನ ಸಲ ಪರಭಣಿಗೆ ಬಂದಾಗ ನನ್ನನ್ನು ಅಲ್ಲಿಗೆ ಕರೆದೊಯ್ಯುವುದಾಗಿ ಹೇಳಿದರು. ಅಲ್ಲಿ ಒಂದು ಬಾಲಾಜಿ ಮಂದಿರವಿದೆ. ಅಮೃತಶಿಲೆಯಲ್ಲಿ ಕಟೆದ ಮಂದಿರ. ಎರಡು ಕೋಟಿ ಖರ್ಚಾಗಿರಬೇಕು. ಅದನ್ನು ಕೂಡ ಅವರ ತಂದೆ ನಾರಾಯಣರಾವ ಪಾಥ್ರೀಕರರೇ ಧನ ಸಂಗ್ರಹಿಸಿ ಕಟ್ಟಿಸಿದ್ದಾರೆ. ಆ ವೃದ್ಧರ ಉತ್ಸಾಹ ನೋಡಿ ನಾನು ಬೆರಗಾದೆ. ವಿಷ್ಣುಸಹಸ್ರನಾಮದ ಹಿರಿಮೆಯ ಬಗ್ಗೆ ಅವರಿಗೆ ಹೇಳಿದೆ. ನಮಗೆ ಒಂದು ಚಾರ್ಟ್ ಕಳಿಸಿಕೊಡಿರಿ ಎಂದು ಕೇಳಿದರು.

ಮುದ್ರೆಗಳ ಚಾರ್ಟ್ ಹಂಚಿದೆ. ಪ್ರಾಣಾಯಾಮದ ಮಹತ್ವದ ಬಗ್ಗೆ ಹೇಳಿದೆ. ಶುದ್ಧಿಕ್ರಿಯೆಯ ಬಗ್ಗೆ ತಿಳಿಸಿದೆ. ಜಲನೇತಿಯನ್ನು ಉತ್ಸಾಹಿ ತರುಣರಿಗೆ ಪ್ರಾತ್ಯಕ್ಷಿಕೆ ನೀಡಿ ಕಲಿಸಿದೆ. ಪರಭಣಿಯ ಪ್ರವಾಸ ಅವಿಸ್ಮರಣೀಯವಾಗಿತ್ತು. ವಿಷ್ಣುಸಹಸ್ರನಾಮದ ಪೂರ್ಣ ಚಾರ್ಟ್ ಇಲ್ಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more