ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಂಬಂಧಗಳು’ ಸರಳವಾಗಿದಿದ್ದರೆ ಚೆನ್ನಾಗಿರುತ್ತಿತ್ತು!

By Staff
|
Google Oneindia Kannada News

ಲೇಖನ ಲೈಟಾದ್ರೆ ಹೇಗೆ? ಅನ್ನೋದು ಒಂದು ವಾದ. ತೀರಾ ಗಂಭೀರವಾದ್ರೆ ಓದೋರ್‌ ಯಾರು ಅನ್ನೋದು ಇನ್ನೊಂದು ವಾದ. ಅದೇನೆ ಇರಲಿ, ಕನ್ನಡದಲ್ಲಿ ಇಂತಹ ಬರಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸುವ ದೃಷ್ಟಿಯಲ್ಲಿ, ಉಡುಪರ ಈ ಪ್ರಯತ್ನವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.

ಭರತ್‌ ಎನ್‌. ಎಸ್‌. ಶಾಸ್ತ್ರಿ, ನ್ಯೂಯಾರ್ಕ್‌

ಮಾನ್ಯ ಸಂಪಾದಕರಿಗೆ,

ಜಯರಾಮ ಉಡುಪರ 'ಸಂಬಂಧಗಳು ಅಂದರೆ.." ಓದಿದೆ.

ಕನ್ನಡದಲ್ಲಿ ಇಷ್ಟು ಸಂಕೀರ್ಣ ವಿಷಯದ ಬಗ್ಗೆ ಇಷ್ಟೊಂದು ವಿವರವಾದ ಪ್ರಬಂಧಗಳು ಕಡಿಮೆಯೆನ್ನಬಹುದು. ಅದೂ ಸಾಮಾನ್ಯ ಓದುಗರಿಗೆ ತುಸು ಹೆಚ್ಚೇ ಎನ್ನಿಸಬಹುದಾದ ವಿಶ್ಲೇಷಣೆಗಳನ್ನು ಒಳಗೊಂಡ ಲೇಖನಗಳು ಇನ್ನೂ ಕಡಿಮೆ. ಇಂತಹದರಲ್ಲಿ, ಜಯರಾಮ ಉಡುಪರ ಪ್ರಯತ್ನವನ್ನು ನಾನು ಅಭಿನಂದಿಸುತ್ತೇನೆ.

ಲೇಖನದ ಸ್ಫೂರ್ತಿ ಬಹುಶಃ ಒಂದು ಆಂಗ್ಲ ಲೇಖನವಿರಬಹುದೆಂಬ ಅನುಮಾನವಿದೆ. ಕೆಲವೊಂದೆಡೆ ಅನುವಾದದ ಪ್ರಯತ್ನದಲ್ಲಿ ಸೂಕ್ತ ಪದದ ಆಯ್ಕೆಯಲ್ಲಿ ಪ್ರಯಾಸಪಡುವುದು ಅಥವಾ ಸೋತಿರುವುದು ಎದ್ದು ಕಾಣುತ್ತದೆ.

ಕೆಲವೊಂದೆಡೆ ಪದಗಳ ಯಥಾವತ್‌ ಅನುವಾದ ಪ್ರಬಂಧದ ಜಟಿಲತೆಯನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, agreement ಎಂಬ ಪದವನ್ನು 'ಸಮತ" ಎಂದು ಭಾಷಾಂತರಿಸಿರುವುದು ಅಷ್ಟು ಸರಿಕಾಣುವುದಿಲ್ಲ. ಸಮ್ಮತಿ ಅಥವಾ ಸಹಮತ ಎಂಬ ಪದ ಹೆಚ್ಚು ಯೋಗ್ಯವೆನ್ನಿಸಿಕೊಳ್ಳುತ್ತಿತ್ತು. ಜಟಿಲತೆ ಎಂಬ ಪದ 'ಜಿಡುಕು" ಎಂಬ ಪ್ರಯೋಗಕ್ಕಿಂತ ಹೆಚ್ಚು ಅರ್ಥಪೂರ್ಣವೆನ್ನಿಸುತ್ತಿತ್ತು.

ಹಾಗೆಯೇ dynamics of relation ಎಂಬ 'ಫ್ರೇಸ್‌" 'ಸಂಬಂಧದ ಗತಿರೂಪ" ವಾದಲ್ಲಿ ಅನುವಾದದ ಛಾಯೆ ಎದ್ದು ಕಾಣುತ್ತದೆ. ಕನಿಷ್ಠ ಪಕ್ಷ 'ಬಿಬ್ಲಿಯೋಗ್ರಫಿ" ಆಗಿಯಾದರೂ ಪ್ರಬಂಧದ ಮೂಲವನ್ನು ಹೆಸರಿಸಿದ್ದಲ್ಲಿ ಹೆಚ್ಚು ಸಮಂಜಸವಾಗುತ್ತಿತ್ತು.

ಹೀಗಿದ್ದರೂ, ಕನ್ನಡದಲ್ಲಿ ಇಂತಹ ಬರಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸುವ ದೃಷ್ಟಿಯಲ್ಲಿ, ಉಡುಪರ ಈ ಪ್ರಯತ್ನವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.

ಪೂರಕ ಓದಿಗೆ-

ಸಮತ-ಒಮ್ಮು-ಸರಸ, ವಿಮತ-ಹಮ್ಮು-ವಿರಸ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X