• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕನಿಷ್ಠ ದರಕ್ಕೆ ಕುಸಿಯಿತು ಮಲ್ಲಿಗೆ, ಜಾಜಿ ಹೂವು

By ಉಡುಪಿ ಪ್ರತಿನಿಧಿ
|

ಉಡುಪಿ, ಸೆಪ್ಟೆಂಬರ್ 22: ಹೂವಿನ ಮಾರುಕಟ್ಟೆಯಲ್ಲಿ ಮಲ್ಲಿಗೆ, ಜಾಜಿ ಅತಿ ಕನಿಷ್ಠ ದರಕ್ಕೆ ಕುಸಿದಿದೆ. ಪಿತೃ ಪಕ್ಷ ಇರುವುದರಿಂದ ಮದುವೆ, ಗೃಹ ಪ್ರವೇಶ ಸಹಿತ ಶುಭ ಕಾರ್ಯ ನಿಷಿದ್ಧವಿದೆ. ಆದ್ದರಿಂದ ಮಲ್ಲಿಗೆ, ಜಾಜಿ ದರ ತೀರಾ ಕುಸಿದಿದೆ.

ಮಲ್ಲಿಗೆ ಅಟ್ಟೆಗೆ ಸೋಮವಾರ 170 ರು. ದರವಿತ್ತು. ಮಂಗಳವಾರ 150ಕ್ಕೆ ಇಳಿದಿದೆ. ಸೋಮವಾರ ಜಾಜಿಗಿದ್ದ 50 ರು. ಬೆಲೆ, ಮಂಗಳವಾರ 70ಕ್ಕೆ ಏರಿದೆ. ಹೂ ಪೂರೈಕೆ ಸಾಧಾರಣ ಮಟ್ಟಿಗಿದ್ದು, ಕೊಳ್ಳುವ ಗ್ರಾಹಕರಿಲ್ಲ ಎನ್ನುವುದು ಹೂ ವ್ಯಾಪಾರಿಗಳ ಗೋಳು. ಬುಧವಾರವೂ ಮಲ್ಲಿಗೆ ದರ 150 ಹಾಗೂ ಜಾಜಿ ದರ 70 ಇತ್ತು. ಹೀಗೆ ದಿನದಿಂದ ದಿನಕ್ಕೆ ಮಲ್ಲಿಗೆ ದರ ಕುಸಿತ ಬೆಳೆಗಾರರಲ್ಲಿ ಭಾರೀ ನಿರಾಶೆಗೆ ದಾರಿ ಮಾಡಿದೆ.[ಬೆಲೆ ಏರಿಕೆ ನಿರೀಕ್ಷೆಯಲ್ಲಿ ಕರಾವಳಿ ಮಲ್ಲಿಗೆ ಬೆಳೆಗಾರರು]

ಮಳೆಗಾಲದಲ್ಲಷ್ಟೆ ತನ್ನ ಇರವು, ಸುವಾಸನೆ ಬೀರುವ ಜಾಜಿಗೆ ಈ ಬಾರಿ ಅತೀ ಕಡಿಮೆಯೆಂದರೆ 90 ರು. ದರವಿತ್ತು. ಆದರೆ ಅದೀಗ 70ಕ್ಕೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಹೂ ಕೊಯ್ಯುವ ಬದಲು ಗಿಡದಲ್ಲೇ ಬಿಡಲು ಬಹುತೇಕ ಮಂದಿ ಬೆಳೆಗಾರರು ನಿರ್ಧರಿಸಿದ್ದಾರೆ. ಮಳೆ- ಬಿಸಿಲ ಕಣ್ಣಾಮುಚ್ಚಾಲೆಯಾಟದ ಹಿನ್ನೆಲೆಯಲ್ಲಿ ಮಲ್ಲಿಗೆ ಬೆಳೆ ಸಾಧಾರಣವಿದೆ.

ನವರಾತ್ರಿ ಬಂದರೆ ಹೂವಿಗೆ ಬೇಡಿಕೆ ಬರಬಹುದು ಮಲ್ಲಿಗೆ ಹಾಗೂ ಜಾಜಿ ಹೂವಿನ ಪ್ರಮಾಣ ಕಡಿಮೆಯಿದ್ದರೆ ದರದಲ್ಲಿ ಏರಿಕೆ ಕಾಣಬಹುದು ಎಂದು ಮಲ್ಲಿಗೆ ಬೆಳೆಗಾರರು ಅಭಿಪ್ರಾಯ ಪಟ್ಟಿದ್ದಾರೆ.

English summary
Karnataka Coastal areas major crop jasmine price dropped in the market. There is no functions like marriage in the month of september because of no auspicious days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X