ಸರಳ ಸಜ್ಜನಿಕೆಯ ಕೋಟ ಶ್ರೀನಿವಾಸ ಪೂಜಾರಿ ಬಳಿ ಕೋಟ್ಯಂತರ ಆಸ್ತಿಪಾಸ್ತಿ: ಸಾಮಾಜಿಕ ಮಾಧ್ಯಮಗಳಲ್ಲಿ ಹೀಗೊಂದು ಚರ್ಚೆ
ಚಿಕ್ಕಮಗಳೂರು, ಏಪ್ರಿಲ್.06: ತಮ್ಮ ಸರಳ ಸಜ್ಜನಿಕೆಯಿಂದಲೇ ಹೆಸರು ಪಡೆದಿರುವ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸದ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ನಾಮಪತ್ರ ಸಲ್ಲಿಸಿದ್ದಾರೆ.
ಇದೇ ವೇಳೆ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಇದನ್ನು ಕಂಡು ಜನ ಆಶ್ಚರ್ಯಗೊಂಡಿದ್ದಾರೆ. ಸರಳತೆಯೇ ತನ್ನ ಆಭರಣ ಎಂದುಕೊಂಡಿದ್ದ ಇವರ ಬಳಿ ಕೋಟಿ ಕೋಟಿ ಆಸ್ತಿಯಿದೆಯೆಂದು ಬಿಟ್ಟಕಣ್ಣು ಬಿಟ್ಟಂತೆ ನೋಡಿದ್ದಾರೆ. ಹೌದು... ಕೋಟ ಶ್ರೀನಿವಾಸ್ ಪೂಜಾರಿ ಕುಟುಂಬ 3.5 ಕೋಟಿ ಒಡೆಯರು.

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಆಸ್ತಿ ಎಷ್ಟು?
ಶಾಸಕ, ಸಚಿವರಾದರೂ ಕೂಡ ಕೋಟ ಶ್ರೀನಿವಾಸ್ ಪೂಜಾರಿ ಕೋಟಿ ಕೋಟಿ ಹಣ ಮಾಡಲಿಲ್ಲ. ನಾನು ಗಂಜಿ ಕುಡಿಯೋದು, ಚಪ್ಪಲಿ ಹಾಕಲ್ಲ.. ತುಂಬಾ ಸಿಂಪಲ್ ನಾನು ಎಂದು ಹೇಳಿಕೊಳ್ಳುತ್ತಿದ್ದ ಅವರು 3.5 ಕೋಟಿ ಒಡೆಯರು ಎಂಬುದನ್ನು ಜನರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಸ್ತಿ ವಿವರ ನೋಡುವುದಾದರೆ, ಪತ್ನಿ ಶಾಂತಾ ಮಕ್ಕಳಾದ ಸ್ವಾತಿ, ಶಶಿಧರ್ ಹಾಗೂ ಶ್ರುತಿ ಅವರ ಹೆಸರಿನಲ್ಲಿ ಇರುವ ಆಸ್ತಿಗಳ ವಿವರವನ್ನು ಸಲ್ಲಿಸಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಕೈಯಲ್ಲಿ 90 ಸಾವಿರ ನಗದು, ಪತ್ನಿ ಬಳಿಯಲ್ಲಿ 20 ಸಾವಿರ ನಗದು ಇದೆ.
ಕೋಟ ಶ್ರೀನಿವಾಸ ಪೂಜಾರಿ ಅವರ ಚರಾಸ್ತಿ ಮೌಲ್ಯ 31,95,082 ರೂಪಾಯಿ. ಹೆಂಡತಿ ಹೆಸರಿನಲ್ಲಿ ಚರಾಸ್ತಿ ಮೌಲ್ಯ 10,29,027 ರೂಪಾಯಿ. ಮಗಳು ಸ್ವಾತಿ ಚರಾಸ್ತಿ 3,70,00, ಮಗ ಶಶಿಧರ್ ಅವರ ಚರಾಸ್ತಿ 17,59,935 ಮತ್ತು ಮಗಳು ಶೃತಿ ಅವರ ಚರಾಸ್ತಿ 66, 446 ರೂಪಾಯಿಯಿದೆ. ಕುಟುಂಬದ ಒಟ್ಟು ಚರಾಸ್ತಿಯ ಒಟ್ಟು ಮೌಲ್ಯ 64,20,510 ರೂಪಾಯಿಯಿದೆ.

ಕೋಟ ಶ್ರೀನಿವಾಸ ಪೂಜಾರಿ ಅವರ ಸ್ಥಿರಾಸ್ತಿ ವಿವರಗಳನ್ನು ನೊಡುವುದಾದರೆ, ಕೋಟ ಶ್ರೀನಿವಾಸ ಪೂಜಾರಿ ಬಳಿ 79,95,082 ರೂಪಾಯಿ ಮೌಲ್ಯದ ಸ್ಥಿರಾಸ್ತಿ, ಪತ್ನಿ ಹೆಸರಲ್ಲಿ 1,62,79,027, ಮಗಳು ಸ್ವಾತಿ ಬಳಿ 3,70,00, ಮಗ ಶಶಿಧರ್ ಬಳಿ 47,59,935 ಮತ್ತು ಮಗಳು ಶೃತಿ ಬಳಿ ಇರುವ ಸ್ಥಿರಾಸ್ತಿ 66,466 ಆಗಿದೆ. ಕುಟುಂಬದ ಒಟ್ಟು ಸ್ಥಿರಾಸ್ತಿ ಮೌಲ್ಯ 2,94,70,510 ರೂಪಾಯಿಯಾಗಲಿದೆ.
ಕೋಟ ಶ್ರೀನಿವಾಸ ಪೂಜಾರಿ ಅವರ ಕುಟುಂಬದ ಒಟ್ಟು 1,04,44,645 ರೂಪಾಯಿ ಸಾಲ ಹೊಂದಿದೆ. ಅದರಲ್ಲಿ ಬ್ಯಾಂಕ್‌ಗಳಲ್ಲಿ 40,64,924 ರೂಪಾಯಿ, ಪತ್ನಿ ಹೆಸರಿನಲ್ಲಿ 35,43,757 ರೂಪಾಯಿ ಸಾಲವಿದೆ. ಇವರ ಚರಾಸ್ತಿ ಹಾಗೂ ಚರಾಸ್ತಿಯ ಒಟ್ಟು ಮೌಲ್ಯ 3,58,91,020 ರೂಪಾಯಿಯಾಗಲಿದೆ.
ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆ!
ಕೋಟ ಶ್ರಿನಿವಾಸ್ ಪೂಜಾರಿ ಅವರ ಆಸ್ತಿ ವಿವರ ಹೊರ ಬರುತ್ತಿದ್ದಂತೆ ಅವರ ಹಳೆಯ ವಿಡಿಯೋಗಳು ಮತ್ತು ಹೇಳಿಕೆಗಳು ವೈರಲ್ ಆಗುತ್ತಿವೆ. ಹಲವು ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. "ನಮ್ಮ ಕುಂದಾಪುರದಲ್ಲಿ ಅತೀ ಬಡವ ಅನ್ನಿಸಿಕೊಳ್ಳಬೇಕು ಅಂದ್ರೆ ಕನಿಷ್ಠ 3 ಕೋಟಿ ಆಸ್ತಿಯಾದ್ರು ಇರಬೇಕು.. ಇನ್ನೇನಾದ್ರು ಬರಿಗಾಲ ಸಂತ ಅಂತೆಲ್ಲ ಅನ್ನಿಸಿಕೊಳ್ಳಬೇಕು ಅಂದ್ರೆ ಕನಿಷ್ಠ 9 ಕೋಟಿ ಬೇಕು" ಎಂದು ವ್ಯಂಗ್ಯವಾಡಿದ್ದಾರೆ.
"ಮೈಸೂರು ಮಹಾರಾಜ ಯದುವೀರರಿಗಿಂತ ಕೂಲಿ ಮಾಡಿಕೊಂಡಿದ್ದ ಕುಟುಂಬದ ಹಿನ್ನೆಲೆಯಿಂದ ಬಂದ ಕೋಟ ಶ್ರೀನಿವಾಸ್ ಪೂಜಾರಿ ಶ್ರೀಮಂತರು" ಎಂದು ಟೀಕಿಸಿದ್ದಾರೆ. ಹಲವರು ಮಾಜಿ ಸಚಿವರ ಪರವಾಗಿಯೂ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಮ್ಮ ಮೇಲೆ ಆರೋಪ ಬಂದಿದ್ದಕ್ಕೆ ಅವರೇ ಲಫಕಾಯುಕ್ತ ತನಿಖೆಗೆ ಆಗ್ರಹಿಸಿದ್ದರು. ಅವರ ಮೇಲೆ ಹೀಗೇ ಆರೋಪ ಮಾಡಬಾರದು ಎನ್ನುತ್ತಿದ್ದಾರೆ. ಆದರೆ, ಆಸ್ತಿ ವಿವರಗಳ ಬಗ್ಗೆ ಕೋಟ ಶ್ರೀನಿವಾಸ್ ಪೂಜಾರಿ ಯಾವುದೇ ಹೇಳಿಕೆ ನೀಡಿಲ್ಲ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications