ಶೌಚಾಲಯ ನಿರ್ಮಾಣ ಮಾಡದೇ ಜನರಿಗೆ ಚೊಂಚು ಕೊಟ್ಟಿದ್ದು ಕಾಂಗ್ರೆಸ್‌-ಬಿಜೆಪಿ ಶಾಸಕ

ಉಡುಪಿ, ಏಪ್ರಿಲ್‌ 21: ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಪೋರೇಟರ್‌ ಪುತ್ರಿ ನೇಹಾ ಹಿರೇಮಠ ಹತ್ಯೆ ಬಗ್ಗೆ ಬಿಜೆಪಿ ಶಾಸಕ ಸುನೀಲ್‌ ಕುಮಾರ್‌ ಪ್ರತಿಕ್ರಯಿಸಿದ್ದಾರೆ. ರಾಜ್ಯದಲ್ಲಿ ಒಂದಾದ ನಂತರ ಒಂದು ಘಟನೆಗಳು ನಡೆಯುತ್ತಿದೆ. ಮುಸಲ್ಮಾನರ ಈ ಪ್ರಮಾಣದ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತ ಮತ್ತು ಧೋರಣೆ ಕಾರಣ. ಏನು ಬೇಕಾದರೂ ಮಾಡಬಹುದು ಎಂದು ಪರೋಕ್ಷವಾಗಿ ಬೆಂಬಲ ಕೊಡುತ್ತಿದೆ. ಮುಸಲ್ಮಾನರು ದೊಡ್ಡ ಪ್ರಮಾಣದಲ್ಲಿ ವಿಜ್ರಂಭಿಸಲು ಪ್ರಾರಂಭ ಮಾಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ವಿರುದ್ಧ ಕಿಡಿಕಾರಿದರು.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂತ್ವನ ಹೇಳುವ ಬದಲು ವೈಯಕ್ತಿಕ ಘಟನೆ ಎಂದು ಸಿಎಂ ಹೇಳುತ್ತಾರೆ. ರಾಜ್ಯದ ಹೆಣ್ಣು ಮಕ್ಕಳ ರಕ್ಷಣೆಗೆ ಯಾರು ಬರುತ್ತಾರೆ? ರಾಮೇಶ್ವರಂ ಬಾಂಬ್ ಸ್ಫೋಟ, ಪಾಕ್ ಜಿಂದಾಬಾದ್, ಕೊಲೆ ಸಂದರ್ಭದಲ್ಲಿ ಸಿಎಂ ಮಾತನಾಡುವುದಿಲ್ಲ. ಹಾಡು ಹಗಲೇ ಹತ್ಯೆಯಾದಾಗ ಕಠಿಣ ಧೋರಣೆ ವಹಿಸಬೇಕಿತ್ತು. ಮುಖ್ಯಮಂತ್ರಿ ಇಂತಹ ಘಟನೆಯಾದಾಗ ಜಾರಿಕೊಂಡರೆ ರಾಜ್ಯದ ರಕ್ಷಣೆ ಯಾರು ಮಾಡಬೇಕು ಎಂದು ಪ್ರಶ್ನಿಸಿದರು.

MLA V Sunil Kumar Reaction About Congress Chembu Advertisement Against BJP

ಲವ್ ಜಿಹಾದ್, ಮತಾಂದತೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗರಿಗೆದರಿದೆ. ರಾಜ್ಯದ ರಕ್ಷಣೆ ಕಾಂಗ್ರೆಸ್ ನಿಂದ ಅಸಾಧ್ಯ ಸಮಾಜ ದೊಡ್ಡ ಪ್ರಮಾಣದಲ್ಲಿ ಜಾಗೃತ ಬೇಕಾದ ಅನಿವಾರ್ಯತೆ ಇದೆ ಎಂದರು.

ಚೊಂಬು ರಹಿತ ಆಡಳಿತ ದೇಶದಲ್ಲಿ ಕೊಟ್ಟಿದ್ದು ಮೋದಿ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಚೊಂಬು ವ್ಯಂಗ್ಯ ಜಾಹೀರಾತಿನ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಸುನಿಲ್ ಕುಮಾರ್, ಶೌಚಾಲಯ ನಿರ್ಮಾಣ ಮಾಡದೆ ಹಳ್ಳಿಯ ಮಹಿಳೆಯರಿಗೆ ಚೊಂಬು ಕೊಟ್ಟದ್ದು ಕಾಂಗ್ರೆಸ್. ಸ್ವಾತಂತ್ರ್ಯ ನಂತರ ದೊಡ್ಡ ಪ್ರಮಾಣದಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದು ಬಿಜೆಪಿ. ಚೊಂಬು ರಹಿತ ಆಡಳಿತ ದೇಶದಲ್ಲಿ ಕೊಟ್ಟಿದ್ದು ಮೋದಿ-ಬಿಜೆಪಿ ಕಾಲದಲ್ಲಿ. ಇದನ್ನು ಒಪ್ಪುವಂತಹ ಜಾಹೀರಾತುನ್ನು ಕಾಂಗ್ರೆಸ್ ಕೊಟ್ಟಿದೆ ಎಂದು ಹೇಳಿದರು.

ಮೋದಿ ಕರಿ ನೇರಳಲ್ಲಿ ಕೇಸರಿ ಶಾಲು ಕಾಂಗ್ರೆಸ್ ಜಾಹೀರಾತು ಬಗ್ಗೆ ಮಾತನಾಡಿದ ಅವರು, ಕೇಸರಿ ಶಾಲು ಹಾಕಲು ನಮಗೆ ಸಂಕೋಚ ಇಲ್ಲ

ನಾವು ದೇಶದಲ್ಲಿ ಕೇಸರಿ ಆಡಳಿತ ನಿರ್ಮಾಣ ಮಾಡಲು ಹೊರಟಿದ್ದೇವೆ. ಕೇಸರಿ ಭಾರತೀಯ ಸಂಸ್ಕೃತಿಯ ಪ್ರತೀಕ. ಕೇಸರಿ ರಾಷ್ಟ್ರೀಯತೆ ಪ್ರತೀಕ, ನಾವು ಯಾವುದೇ ದ್ವೇಷ ಮಾಡಲು ಹೊರಟಿಲ್ಲ. ಕಾಂಗ್ರೆಸ್ ಒಂದು ಕೋಮಿನ ಜನಕ್ಕೆ ಬೆಂಬಲ ಕೊಡುತ್ತದೆ. ಒಂದು ವರ್ಗವನ್ನು ವಿರೋಧಿಸುವುದೇ ಕಾಂಗ್ರೆಸ್‌ನ ನಿಲುವು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+