Lok Sabha Election: ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ, ಬಿ.ವೈ ವಿಜಯೇಂದ್ರ ಭಾಗಿ
ಉಡುಪಿ, ಏಪ್ರಿಲ್ 21: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಉಡುಪಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಪರ ಆಯೋಜಿಸಲಾಗಿದ್ದ ಯುವ ಭಾರತ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
ಈ ಸಮಾವೇಶದ ಉದ್ದಕ್ಕೂ ರಾಜ್ಯದಲ್ಲಿ ಕುಸಿಯುತ್ತಿರುವ ಕಾನೂನು ಅವ್ಯವಸ್ಥೆಯ ಬಗ್ಗೆ ಬಿಜೆಪಿ ನಾಯಕರು ಬೊಟ್ಟು ಮಾಡಿದ್ದು, ಕಾಂಗ್ರೆಸ್ ನೀಡುತ್ತಿರುವ ಪತ್ರಿಕ ಜಾಹಿರಾತುಗಳು ಹತಾಶೆಯ ಪ್ರತೀಕ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಚುನಾವಣೆ ರಂಗೇರುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಇದೆ ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡಿದ್ದ ಬಿ.ವೈ ವಿಜಯೇಂದ್ರ, ಯುವ ಭಾರತ ಸಮಾವೇಶದಲ್ಲಿ ಭಾಗವಹಿಸಿದ್ದರು. ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಇಂದು ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಆದರೆ ಶುಕ್ರವಾರ ರಾತ್ರಿ ಬಾರಿ ಮಳೆ ಸುರಿದ ಕಾರಣ ಸಮಾವೇಶವನ್ನು ಮೊಟಕು ಗೊಳಿಸಿ ರೋಡ್ ಶೋ ಹಾಗೂ ಸಾಂಕೇತಿಕವಾಗಿ ಒಳಾಂಗಣ ಸಮಾವೇಶ ನಡೆಸಲಾಯಿತು.
ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಜೊತೆಗೆ ತೆರೆದ ವಾಹನದಲ್ಲಿ ವಿಜಯೇಂದ್ರ ರೋಡ್ ಶೋ ನಡೆಸಿದರು. ಅ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ. ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಮಾಡಿದೆ. ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣವನ್ನು ಈ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ ನಿಂದು ಟೀಕಿದ್ದಾರೆ. ಕಾಂಗ್ರೆಸ್ ಪತ್ರಿಕೆಗಳಿಗೆ ನೀಡುತ್ತಿರುವ ಮುಖಪುಟ ಜಾಹೀರಾತುಗಳು ಆ ಪಕ್ಷದ ಹತಾಶೆಯ ಪ್ರತೀಕ ಎಂದು ಹೇಳಿದ್ದಾರೆ.
ಸಮಾವೇಶದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಸುನಿಲ್ ಕುಮಾರ್ ಭಾಗಿಯಾಗಿದ್ದರು. ಕಾಂಗ್ರೆಸ್ ನೀಡಿರುವ ಚೊಂಬು ಜಾಹೀರಾತು ಕುರಿತು, ಬಿಜೆಪಿ ಮುಖಂಡ ವಿ.ಸುನಿಲ್ ಕುಮಾರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ದೇಶದ ಅದೆಷ್ಟೋ ಹಳ್ಳಿಗಳಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡದೆ ಹಳ್ಳಿಯ ಮಹಿಳೆಯರಿಗೆ ಚೊಂಬು ಕೊಟ್ಟದ್ದು ಇದೇ ಕಾಂಗ್ರೆಸ್. ಆದರೆ ಸ್ವಾತಂತ್ರ್ಯ ನಂತರ ದೊಡ್ಡ ಪ್ರಮಾಣದಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಿದೆ. ಚೊಂಬು ರಹಿತ ಆಡಳಿತ ದೇಶದಲ್ಲಿ ಕೊಟ್ಟಿದ್ದು ಮೋದಿ ಹಾಗು ಬಿಜೆಪಿ ಕಾಲದಲ್ಲಿ. ಇದನ್ನು ಒಪ್ಪುವಂತಹ ಜಾಹೀರಾತನ್ನು ಕಾಂಗ್ರೆಸ್ ಕೊಟ್ಟಿದೆ ಎಂದರು.

ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಮೋದಿ ನೆರಳಿನ ಜಾಹಿರಾತಿನ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಾ ಕಾಂಗ್ರೆಸ್ ಮೋದಿ ನೆರಳಿಗೂ ಭಯ ಪಡುವಂತಾಗಿದೆ ಎಂದು ಲೇವಡಿ ಮಾಡಿದರು.












Click it and Unblock the Notifications