Get Updates
Get notified of breaking news, exclusive insights, and must-see stories!

ಉಡುಪಿ: ಮೊಗವೀರ ಸಮುದಾಯದ ಮುನಿಸಿಗೆ ಕಾರಣವಾಯ್ತಾ ಬಿಜೆಪಿ ಟಿಕೆಟ್‌ ಹಂಚಿಕೆ..?

ಉಡುಪಿ, ಮಾರ್ಚ್ 29: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗು ಪಡೆದಿದೆ. ಅಭ್ಯರ್ಥಿಗಳು ಈಗಾಗಲೇ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಮತದಾರರು ಯಾರತ್ತ ಒಲವು ತೋರಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಇತ್ತ ಚುನಾವಣೆಗೆ ಅಣಿಯಾಗುತ್ತಿದ್ದರೆ, ಅತ್ತ ಟಿಕೆಟ್‌ ಹಂಚಿಕೆಯ ಅಸಮಾಧಾನ ಆಗಾಗ ಹೊಗೆಯಾಡುತ್ತಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಂಟ ಬಿಲ್ಲವರ ಜಿದ್ದಾಜಿದ್ದಿಯಲ್ಲಿ ಮೊಗವೀರ ಸಮುದಾಯ ಬೇಸರದಲ್ಲಿದೆ ಎನ್ನುವ ಪ್ರಶ್ನೆ ಮೂಡುತಿದೆ. ಮೊಗವೀರ ಸಮುದಾಯದ ಮುಖಂಡ ಪ್ರಮೋದ್ ಮಧ್ವರಾಜ್ ಕೊನೆಯ ಕ್ಷಣದವರೆಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.

Mogaveera Community Upset On BJP Ticket Allocation In Udupi Chikkamagaluru Lok Sabha constituency

ಕೊನೆಯ ಕ್ಷಣದಲ್ಲಿ ಬಿಲ್ಲವ ಸಮುದಾಯದ ಕೋಟಾ ಶ್ರೀನಿವಾಸ ಪೂಜಾರಿಗೆ ಬಿಜೆಪಿ ಟಿಕೆಟ್ ಸಿಕ್ಕಿತ್ತು. ಇದರಿಂದ ಮೀನುಗಾರಿಕಾ ಸಮುದಾಯಕ್ಕೆ ಬೇಸರವಾಗಿದೆ? ಈ ಬಾರಿ ಚುನಾವಣೆಯಲ್ಲಿ ಮೀನುಗಾರಿಕಾ ಸಮುದಾಯ ಯಾರ ಪರ ಎನ್ನುವ ಪ್ರಶ್ನೆಗಳು ಉದ್ಭವವಾಗಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸದ್ಯ ಮೀನುಗಾರಿಕಾ ಅಂದರೆ ಮೊಗವೀರ ಸಮುದಾಯದಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆಯ ವಿಚಾರದಲ್ಲಿ ಅಸಮಾಧಾನದಲ್ಲಿ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದರಲ್ಲೂ ಬಹು ಮುಖ್ಯವಾಗಿ ಉಡುಪಿ ಜಿಲ್ಲೆಯ ಆರ್ಥಿಕತೆ ಮೀನುಗಾರಿಕೆಯನ್ನೇ ಅವಲಂಬಿಸಿದೆ ಎಂದರೆ ತಪ್ಪಾಗಲಾರದು.

Mogaveera Community Upset On BJP Ticket Allocation In Udupi Chikkamagaluru Lok Sabha constituency

1.10 ಲಕ್ಷ ಮತದಾರರಿರುವ ಮೊಗವೀರ ಸಮುದಾಯ ಈ ಬಾರಿ ಪ್ರಮೋದ್ ಮಧ್ವರಾಜ್ ಅವರನ್ನ ಉಡುಪಿ ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಪರಿಗಣಿಸಿ ಎನ್ನುವ ರೀತಿಯಲ್ಲಿ ನಡೆಸಿತ್ತು. ಅಲ್ಲದೆ ಚುನಾವಣೆ ಘೋಷಣೆಗೂ ಮೊದಲು ಕೂಡ ಪ್ರಮೋದ್ ಮದ್ವರಾಜ್ ಈ ಬಾರಿ ಬಿಜೆಪಿ ತಮಗೆ ಟಿಕೆಟ್ ನೀಡುವುದು ಪಕ್ಕ ಎನ್ನುವಂತೆ ಭಾವಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಆದ ಬದಲಾವಣೆ ಬಿಲ್ಲವ ಮುಖಂಡ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ವರವಾಗಿದೆ.

ಈ ಬೆಳವಣಿಗೆ ಮೊಗವೀರ ಸಮುದಾಯಕ್ಕೆ ಬೇಸರ ತಂದಿದೆಯಾ ಎನ್ನುವ ಪ್ರಶ್ನೆ ಸದ್ಯ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಸಮುದಾಯದ ಮುಖಂಡ ಪ್ರಮೋದ್ ಮಧ್ವರಾಜ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಮೊಗವೀರರಿಗೆ ಬೇಸರ ಉಂಟು ಮಾಡಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ.

ಇನ್ನು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ವಿಚಾರವಾಗಿ ಮೊಗವೀರ ಸಮುದಾಯಕ್ಕೆ ಅಷ್ಟಾಗಿ ಒಲವಿದ್ದಂತೆ ಕಂಡು ಬರುತ್ತಿಲ್ಲ. ಹಿಂದೆ ಮೀನುಗಾರಿಕಾ ಸಚಿವರಾಗಿದ್ದಾಗಲೂ ಕೂಡ ಸಮುದಾಯಕ್ಕೆ ಹೇಳಿಕೊಳ್ಳುವಂತದ್ದು ಏನು ಮಾಡಿಲ್ಲ ಎನ್ನುವ ಅಸಮಾಧಾನವೂ ಕೂಡ ಮೊಗವೀರ ಸಮುದಾಯಕ್ಕಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗಡೆ ವಿಚಾರವಾಗಿ ಮೊಗವೀರ ಸಮುದಾಯ ಈ ಹಿಂದಿನಿಂದಲೂ ಕೂಡ ಸಾಕಷ್ಟು ಒಲವನ್ನು ಇರಿಸಿಕೊಂಡಿದೆ.

ಜಯಪ್ರಕಾಶ್ ಹೆಗ್ಡೆ ಮೀನುಗಾರಿಕಾ ಸಚಿವರಾಗಿದ್ದಾಗ ಮಲ್ಪೆ ಬಂದರು, ಹಂಗಾರಕಟ್ಟೆ ಬಂದರು, ಕೋಡಿ ಬಂದರು ಹೀಗೆ ಜಿಲ್ಲೆಯ ಮೀನುಗಾರಿಕಾ ಸಮುದಾಯಕ್ಕೆ ಹೊಸ ಹೊಸ ಯೋಜನೆಗಳನ್ನ ನೀಡಿದ್ದರು. ಹೀಗಾಗಿ ಸಹಜವಾಗಿ ಮೊಗವೀರ ಸಮುದಾಯಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ಪರ ಒಲವಿದ್ದಂತೆ ಕಂಡುಬರುತ್ತಿದೆ. ಹಾಗಾಗಿ ಈ ಬಾರಿ ಮೊಗವೀರ ಸಮುದಾಯ ಯಾರ ಕೈ ಹಿಡಿಯಲಿದೆ ಎನ್ನುವ ಪ್ರಶ್ನೆ ಸದ್ಯ ಸಾರ್ವಜನಿಕ ವಲಯದಲ್ಲಿದೆ..

ಒಟ್ಟಾರೆಯಾಗಿ ಜಿಲ್ಲೆಯ ಮೊಗವೀರ ಸಮುದಾಯ ಹಿಂದುತ್ವ ಮತ್ತು ಮೋದಿ ಜಪ ಮಾಡಿಕೊಂಡು ಬಂದವರು. ಆದರೆ ಈ ಬಾರಿ ತಮ್ಮ ನಾಯಕನಿಗೆ ಟಿಕೆಟ್ ನೀಡದೇ ಇರುವುದು ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಪರ ಇರುವ ಒಲವು ಈ ಸಮುದಾಯವನ್ನ ನಿಲುವು ಯಾರ ಕಡೆಗೆ ಎನ್ನೋ ಪ್ರಶ್ನೆ ಉದ್ಭವವಾಗಿದೆ. ಬಿಜೆಪಿ ಭದ್ರಕೋಟೆಯಾಗಿರುವ ಬಿಜೆಪಿಯಲ್ಲಿ ಈ ಬಾರಿ ಮತದಾರರು ಯಾರತ್ತ ಒಲವು ತೋರಲಿದ್ದಾರೆ ಎನ್ನುವುದೇ ಕುತೂಹಲವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+